ತಾಯಿ ಮನೆಯಲ್ಲಿ ಮಗುವಿರಲು ಸಂತಸವು ತುಂಬಿರಲು ದಿನವುರುಳಿ ನಗುನಗುತ ಚಿಂತೆಮರೆತು ಮನದಲ್ಲಿ ಉಲ್ಲಾಸ ಮಗುವಿನಾ ತುಂಟಾಟ ಮನೆಯಲ್ಲ ಕಳೆಹೊಂದಿ-ಧರಣಿದೇವಿ|| ಮಗುವನ್ನು ನೋಡುತಲಿ ಮಮತೆಯನು ತೋರುತಲಿ ಸೊಗಸಾದ ಅನುಭವವ ತಾಯಿಪಡೆದು ಮಿಗಿಲಿಲ್ಲ ಕಂದನಿಗೆ ಪ್ರಪಂಚ ನೀನೆನುತ ಮುಗಿಲನ್ನೆಮುಟ್ಟಿರಲುಧರಣಿದೇವಿ|| ತಾಯ್ತನದ ಸುಖವದುವೆ ಹೆಣ್ಣಿನಲಿ ಮನೆಮಾಡಿ…
Category: ಅನುದಿನ ಕವನ
ಅನುದಿನ ಕವನ-೬೮೩, ಕವಿ:ಎ.ಎನ್ ರಮೇಶ್ ಗುಬ್ಬಿ, ಕೈಗಾ-ಕಾರವಾರ, ಕವನದ ಶೀರ್ಷಿಕೆ:ಕಳೆದುಹೋದ ಕಳೆ
“ಮಕ್ಕಳ ದಿನಾಚಾರಣೆಯ ಹಾರ್ದಿಕ ಶುಭಕಾಮನೆಗಳೊಂದಿಗೆ….. ಬಾಲ್ಯದ ಬದುಕಿನ ರಿಂಗಣಗಳ ಕವಿತೆ.. ಒಪ್ಪಿಸಿಕೊಳ್ಳಿ..” ಇಲ್ಲಿ ಅಂದಿನ ದಿನಗಳ ನೆನಪಿನೋಕಳಿಯ ಸಂಭ್ರಮವಿದೆ. ಹಾಗೇ…
ಅನುದಿನ ಕವನ-೬೮೨, ಕವಯತ್ರಿ: ವಿ ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಬೊಗಸೆಯಲ್ಲಿ ನಕ್ಷತ್ರ
ಬೊಗಸೆಯಲ್ಲಿ ನಕ್ಷತ್ರ ನನ್ನ ಬಡತನದ ದಿನಗಳನು ಪ್ರೇಮಿಸುವ ನಾನು ನೋವಿನಲ್ಲಿ ಕರಗುವುದನು ಕಲಿತಿರುವವಳು ಒದ್ದೆ ಕಣ್ಣೀರಿನಲಿ ಅಡಗಿ ಕುಳಿತ ದಿನಗಳು ನೆನಪಾಗುವುವು ದಾರಿ ತೋರಿ ಕೈಹಿಡಿದು ನಡೆಸುವುವು ಅಮ್ಮನ ಜೊತೆ ಬಾವಿ ನೀರು ಸೇದಿ ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ ಬೆಂಕಿ ಒಲೆಗೆ ಮುಖದ…
ಅನುದಿನ ಕವನ-೬೮೧, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ, ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ. ಬನ್ನಿ ಗೊಂಬೆಗಳೆ ಆಟ ಆಡುಮಾ, ಹಟ್ಟಿಲಿ ಹಿಟ್ಟಿಲ್ಲ ಗಂಜಿಯಿಲ್ಲ, ಬನ್ನಿ ಗೊಂಬೆಗಳೆ ನಿಮ್ಮ ನೋಡ್ತಾ ಕುಂತಕಮಾ. ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ, ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ. ಬನ್ನಿ ಗೊಂಬೆಗಳೆ ನಾಮ್…
ಅನುದಿನ ಕವನ-೬೮೦, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಕನಕನ ಸ್ವಗತ
ಕನಕನ ಸ್ವಗತ ಖಡ್ಗದ ಮೊನೆಯ ಇಳಿಸಿದಂದೇ ನಿನ್ನ ಹುಡುಕಿದೆ ಕೇಶವ ಹುಡುಕಾಟದೊಳಗೇ ‘ನೀ’ ಅವಿತಿದ್ದೆಯೆಂದು ‘ನಾ’ ಅರಿದಂದು ‘ನೀ’ ತೋರಿದೆ ಅಂದು ಕೇಶವ ! ಸಕಲ ಜೀವರಾದಿಯಾಗಿ ಅಣುರೇಣುತೃಣಕಾಷ್ಠದೊಳಗಿರುವಿಯೆಂದು ‘ನಾ’ ಹಾಡಿದ ಹಾಡು ಇವರ ಕಿವಿಗೆ ತಲುಪಲೇ ಇಲ್ಲ ಕೇಶವ !…
ಅನುದಿನ ಕವನ-೬೭೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು
ಯಾಕೋ ನಾನು ಇಂದು ಮೌನಿ ಹೃದಯದಲ್ಲಿ ಏತಕೋ ಮಾತಿಗೆ ಬರ ನಿರ್ಲಿಪ್ತ ಭಾವವೊಂದು ಸುಮ್ಮನೆ ಬೆರಳ ತುದಿಯಲ್ಲಿ ಕುಳಿತು ಮರಳು ಕೆದಕುತ್ತಿದೆ ಅಲೆಗಳಿನ್ನು ಪಾದ ಸೋಕಿಲ್ಲ ಕಾಣದಿರುವ ಚಂದಿರಗೆ ನಿರೀಕ್ಷೆ ಹೆಜ್ಜೆ ಗುರುತು ಯಾರದ್ದೋ ಎದೆಯ ತಳ ಊರಿದೆ ಕಾದು ಕೂತಿರುವವನ…
ಅನುದಿನ ಕವನ-೬೭೮, ಕವಯತ್ರಿ:ರಂ ಹೊ, ತುಮಕೂರು
ಪದ್ಯವಲ್ಲದ್ದು!! ಅವ್ವಾ ನಿನ್ನ ಸಮಾಧಿ ಎದುರು ಕೈ ಜೋಡಿಸಿ ನಿಂತರೂ ನೋಟ ಚಲಿಸುತ್ತಿರುತ್ತದೆ ಹೂತ ಜಾಗ ಬಿಟ್ಟು ಅಲ್ಲಿಯೇ ಮಾರು ಅಳತೆ ದೂರದ ಮಾವಿನ ತೋಟದಲ್ಲಿ ಹಸುವಿನ ಮೈ ದಡವುತ್ತಿರಬಹುದಾ! ನಿನ್ನೆದುರಿಗೆ ಕಟ್ಟೆಯ ಸುತ್ತ ಇರುವ ಹೂ ಗಿಡಗಳು ಪೊದೆಯಾದವೆಂದು ಕಂಕಳು…
ಅನುದಿನ ಕವನ-೬೭೭, ಚಿತ್ರ &ಕವನ: ಸಂಘಮಿತ್ರೆ ನಾಗರಕಟ್ಟೆ, ಮೈಸೂರು
ಸಾವಿರ ವರ್ಷಗಳಿಂದಲೂ ಮಳೆ ಸುರಿಯುತ್ತಲೇ ಇದೆ ಕಲ್ಲು ಮಣ್ಣು ಮನೆ ಮಠ ಪಶು ಪಕ್ಷಿ ಕೋಟ್ಯಾಂತರ ಜೀವಗಳನ್ನು ತನ್ನೊಡಲಲ್ಲಿ ತೊಳೆದುಕೊಂಡು ಹೋಗುತ್ತಲೇ ಇದೆ ಹಾಗಿದ್ದರೂ.. ಊರ ಹೊರಗಿನ ನಮ್ಮ ಗಲ್ಲಿಗಳು ನಮ್ಮವರ ಓಣಿ-ವಠಾರಗಳು ಲಕ್ಷಾಂತರ ಈ ಮಹಾಮಳೆಗಳ ಆರ್ಭಟಕ್ಕೆ ಒಂದಿನಿತೂ ಶುದ್ಧ…
ಅನುದಿನ ಕವನ-೬೭೬, ಕವಯತ್ರಿ: ಉಮಾ ಮುಕುಂದ್, ಬೆಂಗಳೂರು, ಕವನದ ಶೀರ್ಷಿಕೆ: ಅಲ್ಲೂ….ಇಲ್ಲೂ
ಅಲ್ಲೂ.. ಇಲ್ಲೂ.. ಅಂದೊಂದು ದಿನ ಅವಳು ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು ಕೂದಲಿಳಿಬಿಟ್ಟು ಬೀಸಿ ನಡೆದವಳು ಥಟ್ಟನೆ ಹಿಂತಿರುಗಿ ತುರುಬುಕಟ್ಟಿ ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು ಇನ್ನೊಂದು ದಿನ ಅವರು ಇದ್ದಕ್ಕಿದ್ದಂತೆ ಬಂದಿಳಿದಾಗ ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ ಖಮ್ಮನೆ…
ಅನುದಿನ ಕವನ-೬೭೫, ಕವಯತ್ರಿ: ದಾಕ್ಷಾಯಣಿ ಶಂಕರ, ಮಹಾಲಿಂಗಪುರ, ಕಾವ್ಯ ಪ್ರಕಾರ: ಹಾಯ್ಕುಗಳು
✍️ಹಾಯ್ಕುಗಳು✍️ ನಿನ್ನ ನೆನಪು ನವನವೀನ, ಅದೇ ನಿತ್ಯ ತಪಸ್ಸು… ಅಂಗಳ ಚೆಲ್ವಿ ಕದ್ದಿಲೆ ಕೇಳಿದಳು, ಅವನು ಎಲ್ಲಿ… ಮುಂಗುರುಳಿನ ಸೋಗಿನಲ್ಲಿ ನಿನ್ನನ್ನು ಮರೆತು ಬಿಟ್ಟೆ….. ನೀನು ಅದೆಷ್ಟು ದೂರ ಹೋದರೂ,ನಾನು ನೆರಳಿನಂತೆ …. ನಗುತ್ತಾ ಬಂದ ಚಂದಿರಗೆ ನಿರಾಸೆ, ಅವಳಿಲ್ಲೆಂದು…. ಅವಳಿಗೇನೂ…