ಚಿಗುರು ನನ್ನ ಪ್ರೀತಿ ಬಳ್ಳಿ ಚಿಗುರಿದೆ. ಚಿಗುರ ಚಿಮ್ಮಿ ಮೊಗ್ಗು ಹೂವು ತುಂಬಿ ಅಂದು ಇಂದು ಕಾಣ್ವ ಕನಸು ಮುಂದೆ ಸಾಗಿ ನನಸು ಎಂಬ ಆಸೆ ಮೂಡಿದೆ. ನನ್ನ ಮನದ ಕಪ್ಪ ಮುಗಿಲು ಕರಗಿದೆ. ಹರ್ಷವೆಲ್ಲ ವರ್ಷವಾಗಿ ಸುರಿಯುತಿರಲು ನನ್ನ ಮನದ…
Category: ಅನುದಿನ ಕವನ
ಅನುದಿನ ಕವನ-೬೫೩, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ ಕಾವ್ಯ ಪ್ರಕಾರ: ಗಜಲ್
ಗಝಲ್ ನೋವಿನಲ್ಲಿ ನರಳುತ್ತ ಬೆಂಡಾಗಿದ್ದೇನೆ ಒಪ್ಪಿಕೋ ನನ್ನ ತೊರೆಯ ನೀರಿನಲ್ಲಿ ಜೊಂಡಾಗಿದ್ದೇನೆ ಒಪ್ಪಿಕೋ ನನ್ನ ಇರುಳು ಹಗಲುಗಳೆರಡು ಸವೆಯದೆ ಕೂತಿವೆಯೇಕೆ ಕಾಂತಾರದ ಕಲ್ಲಿನಂತೆ ಭಂಡಾಗಿದ್ದೇನೆ ಒಪ್ಪಿಕೋ ನನ್ನ ಬೆರಗುಗೊಳಿಸಿ ಹೊರಟೆ ಹೃದಯವನ್ನು ಬರಿದು ಮಾಡಿ ಹಠಮಾರಿ ಮಗುವಂತೆ ಮೊಂಡಾಗಿದ್ದೇನೆ ಒಪ್ಪಿಕೋ ನನ್ನ…
ಅನುದಿನ ಕವನ-೬೫೨, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಯಾಕೆ ಜಾತಿ….!?
ಯಾಕೆ ಜಾತಿ…? ಗಂಧಕ್ಕಿಲ್ಲದ ಗರಿಕೆಗಿಲ್ಲದ ಗಾಳಿಗಿಲ್ಲದ ಜಾತಿ ನೋಡಿ ಮಾತುಬರುವ ಮನುಷ್ಯನಿಗಿದೆ….! ಪ್ರಾಣಿಗಿಲ್ಲದ ಪಕ್ಷಿಗಿಲ್ಲದ ಕಾಡುಮೃಗಗಳಿಗಿಲ್ಲದ ಜಾತಿ ನೋಡಿ ಮಾತನಾಡುವ ಮನುಷ್ಯನಿಗಿದೆ….! ಕಾಡಿಗಿರದ ಬಾನಿಗಿರದ ಧರೆಗೂ ಇರದ ಜಾತಿ ನೋಡಿ ಮಾತು ಕಲಿತಿರುವ ಮನುಷ್ಯನಿಗಿದೆ….! ಹೂವಿಗಿರದ ನಾರಿಗಿರದ ಕಡಲಿಗಿರದ ಜಾತಿ ನೋಡಿ…
ಅನುದಿನ ಕವನ-೬೫೧, ಕವಿ: ಬೇಲೂರು ರಘುನಂದನ್, ಬೆಂಗಳೂರು, ಕವನದ ಶೀರ್ಷಿಕೆ: ತಾಯಿ ಮಗುವಿಗೆ ಕಟಕಟೆಯ ಹಂಗಿಲ್ಲ
ತಾಯಿ ಮಗುವಿಗೆ ಕಟಕಟೆಯ ಹಂಗಿಲ್ಲ ತಿಂದುಂಡು ತೇಗಿ ಕಬಳಿಸುವರಿಗೆ ಬಲಿ ಎಂದರೆ ರಕ್ತವೇ ಬರಬೇಕಾಗಿಲ್ಲ ದೇಹವನ್ನು ತುಂಡರಿಸಿ ಸಿಗಿಯಬೇಕಿಲ್ಲವೆಂದು ಗೊತ್ತಿಲ್ಲ ತನ್ನ ತೆವಲಿಗೆ ಸಕಲವನು ಆಪೋಷಣೆ ಮಾಡುವವರಿಗೆ ಹಲ್ಲೆ ಎಂದರೆ ಮೈ ಮುರಿಯುವಂತೆ ಹೊಡೆದು ಹಿಂಸೆ ಮಾಡಬೇಕಿಲ್ಲವೆಂದು ತಿಳಿದಿಲ್ಲ ಎಲ್ಲವೆಲ್ಲವನ್ನೂ ಹೀರಿ…
ಅನುದಿನ ಕವನ-೬೫೦, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ತೋರಣಗಲ್ಲು, ಕವನದ ಶೀರ್ಷಿಕೆ:ನಶ್ವರದ ಮನ
ನಶ್ವರದ ಮನ ಬರುತ್ತಿರುವ ಮಳೆಯಲ್ಲೂ ಮನದ ಅಗ್ನಿ ಜ್ವಾಲೆಯು ಅಳುತಿದೆ. ಗೊತ್ತಿಲ್ಲ, ಮನದ ಅಗ್ನಿ ಜ್ವಾಲೆಯು ಅಳುತಿದೆ…. ಸಿಡಿಲೇಳುವ ಗುಡುಗು ಮಿಂಚಿನೊಳು ಮನ: ಫಳ್ ಎಂದು ಸಿಡಿದು ಒಡೆದು ಚೂರಾಗಿದೆ…… ಮರದ ಮೇಲೇ ಬಿದ್ದ ಹನಿಗಳೆಲ್ಲಾ ಕಣ್ಣ ಪಿಳುಕಿಸಿ ನೋಡುತಿವೆ….. ಹಿಸುಕಿದೆ…
ಅನುದಿನ ಕವನ-೬೪೯, ಕವಿ: ಜಿ ಟಿ ಆರ್ ದುರ್ಗ ಜಿ ಹೆಚ್ ಎಲ್ ಬಂಗಾರಪೇಟೆ, ಕವನದ ಶೀರ್ಷಿಕೆ: ಹೇಳುವಿರಾ?!
ಹೇಳುವಿರಾ?! ದೇಶಕ್ಕೆ ದುಡಿದವರು ಯಾರು ದೇಶಕ್ಕೆ ದುಡಿಯುತ್ತಿರುವವರು ಯಾರು ಹೇಳುವಿರಾ ನೀವು ಹೇಳುವಿರ ದೇಶಕ್ಕಾಗಿ ಪ್ರಾಣ ಕೊಟ್ಟವರಾರು ದೇಶಕ್ಕಾಗಿ ಪ್ರಾಣ ಕೊಡಬೇಕೆನ್ನುವರು ಯಾರು ಹೇಳುವಿರಾ ನೀವು ಹೇಳುವಿರಾ ವಿಶ್ವವೆ ಮೆಚ್ಚುವಂತವರು ಯಾರು ವಿಶ್ವವೆ ಮೆಚ್ಚಿಕೊಳ್ಳಬೇಕಾದವರು ಯಾರು ಹೇಳುವಿರಾ ನೀವು ಹೇಳುವಿರಾ ಬಡತನದಲಿ…
ಅನುದಿನ ಕವನ-೬೪೮, ಕವಿ: ಟಿ.ಪಿ.ಉಮೇಶ, ಅಮೃತಾಪುರ ಹೊಳಲ್ಕೆರೆ ತಾ. ಕವನದ ಶೀರ್ಷಿಕೆ:ಕವಿ…ನಾ!?
ಕವಿ….ನಾ!? ನೀ…. ಬರೆಯುತ್ತಿರುವ ಕಾವ್ಯ ನಾ..! ನಿನ್ನ ಬರೆಯಲು ತಡವರಿಸುತ್ತಿರುವ ಕವಿ…ನಾ..!? * ಬರೆಯಲು ಆರಂಭಿಸಬಹುದು ಮುಗಿಯುವುದು ಮಾತ್ರ ನಿನ್ನಿಂದಲೇ ಈ ಬದುಕೆಂಬ ಕಾವ್ಯ! * ಆರಂಭಿಸಿದ್ದೀಯ ಬದುಕಿನ ಕಾವ್ಯ ಈ ಜನ್ಮಕೆ ಮುಗಿಯದಿದ್ದರು ತಾಳ್ಮೆಯಲಿ ಕಾಯುವೆ ಜನ್ಮ ಜನ್ಮಗಳಿಗು *…
ಅನುದಿನ ಕವನ-೬೪೭, ಕವಿ:ವಿಠೋಬಾ ಹೊನಕಾಂಡೆ, ಬೀದರ್, ಕವನದ ಶೀರ್ಷಿಕೆ:ಗುರು ‘ಕುಲ’
ಗುರು’ಕುಲ’ ಏ ಗುರುಕುಲವೇ ನೀ ಯಾರಿಗೆ ನೀಡಿದೆ ಶಿಕ್ಷಣ ?? ಕುಲ ನೋಡಿ ನೀ ನೀಡುವ ಶಿಕ್ಷಣಕ್ಕಿಂತ ಕುಲ ಭೇಧವಿಲ್ಲದೇ ಸಂವಿಧಾನ ಬದ್ಧವಾಗಿ ನೀಡುವ ಶಿಕ್ಷಣವೇ ಮೇಲು ವಿದ್ಯೆ ಕಲಿಯಲು ಬಂದವನ ಹೆಬ್ಬೆರಳು ಕೇಳಿ ಕುಲಜರೆಂದು ಸ್ವಯಂ ಘೋಸಿಸಿಕೊಂಡವರಿಗೆ ಮಾತ್ರ ಶಿಕ್ಷಣ…
ಅನುದಿನ ಕವನ-೬೪೬, ಕವಯತ್ರಿ: ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ನೀರು, ನಭ ಮತ್ತು ನಗು
ನೀರು, ನಭ ಮತ್ತು ನಗು ಎಷ್ಟೊಂದು ನೀರು ಅದು ತಣಿಸುವುದು ದಣಿಯದೆ, ನಿಜತಾನೆ ಎಷ್ಟು ಎತ್ತರದ ಅಕಾಶ ದಿಗಂತದಲಿ ಕೈಗೆಟುಕುವ ಅದು ನೋಟಕ್ಕದರೂ ದಿಟವೇನೇ ಎಷ್ಟೊಂದು ನಗು ಇದು ಮರೆಮಾಚುವುದು ಮನಸನು, ನದಿ ಮುಚ್ಚುವಂತೆ ಆಳವನು ನಭ ನೆಚ್ಚುವಂತೆ ನೀಲವನು ನಕ್ಕುಬಿಡು…
ಅನುದಿನ ಕವನ-೬೪೫, ಕವಯತ್ರಿ:ಸೌಭಾಗ್ಯ ಲಕ್ಷ್ಮಿ, ಬೆಂಗಳೂರು, ಕವನದ ಶೀರ್ಷಿಕೆ: ಕರವರ ತಾಯಿ ಕಂದ
ಕರವರ ತಾಯಿ ಕಂದ ಮಾಳವರ ದೊರೆಗಳಲ್ಲಿಯೇ ಅಂದವೋ ಅಂದ ಪದಗಾರರ ನಾಡಿನಲ್ಲಿ ಚಂದವೋ ಚಂದ ಮನಂ ಮನಂ ಮನಂ ಮನಂ ಮನಂ ಮನಂ ಜನಮಾನಸ ಮಾಳದೊಳು ಉದಯಿಸಿದಾತ ನಾಡುನುಡಿಯ ಕಣ್ಮಣಿಗಳೊಳು ಮೆರೆಯಿಸಿದಾತ ಕಥನ ಕವನ ಕಾವ್ಯಗಳ ಮೇಲ್ರಚಿಸಿದಾತ ಮನಂ ಮನಂ ಮನಂ…