ಅನುದಿನ ಕವನ-೬೪೩, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ

ಐದು ಹನಿಗವನಗಳು ೧. ಆಚರಣೆ👇 ಒಬ್ಬರಿಗೊಬ್ಬರು ಸೌಹಾರ್ದತೆ ಬೆಳೆಯಲು ಹಿರಿಯರು ಮಾಡಿದ ಆಚರಣೆ ಅರ್ಥಪೂರ್ಣ ; ವಿಜಯದಶಮಿಯಲ್ಲಿ ಬನ್ನಿ ವಿನಿಮಯ ಮಾಡುವುದೇ ಗೊತ್ತಿಲ್ಲ ಈಗಿನ ಪೀಳಿಗೆಗೆ ಎಲ್ಲವೂ ಗೌಣ. ೨. ಸ್ಥಿತಿ👇 ಹಿಂದಿನ ಕಾಲದ ಹೆಂಗಳೆಯರಿಗೆ ಹಬ್ಬಗಳೆಂದರೆ ವಿಶೇಷ ಶ್ರದ್ಧೆ ಭಕ್ತಿ…

ಅನುದಿನ‌ ಕವನ-೬೪೨ , ಕವಯತ್ರಿ: ವಿನುತಾ ಎಸ್, ಬೆಂಗಳೂರು

ಪ್ರೇಮವೆಂಬುವುದು ಎಲ್ಲ ಎಲ್ಲೆಗಳಾಚೆಗಿನದ್ದು ಎಂದು ತಿಳಿದದ್ದು ನೀ ದಕ್ಕಿದ ನಂತರವೇ ಇಲ್ಲಿ ಸರಿ ತಪ್ಪು, ಪಾಪ ಪುಣ್ಯ, ಸ್ವರ್ಗ ನರಕಗಳೆಂಬ ರೇಖೆಗಳಿಲ್ಲ. ** ನನ್ನೆದೆಯ ಮಾತುಗಳಿಗೀಗ ಧ್ವನಿ ಮೂಡಿದೆ, ಹಾಡುವುದು, ಗುನುಗುವುದು, ಮತ್ತೆ ಮತ್ತೆ ನಿನ್ನನ್ನೇ ಇನ್ನಷ್ಟು ಬಲವಾಗಿ ಬದುಕುವುದು ರೂಢಿಯಾಗಿದೆ.…

ಅನುದಿನ ಕವನ-೬೪೧, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

ನಿಮ್ಮದೊಂದು ಕವಿತೆ ಕಡ ಕೊಡುವಿರಾ? ಎದೆ ಬತ್ತಿ ಬರ ಬಂದಿದೆ ಜಾಣತನದ ಮುಳ್ಳುಕಂಟಿ ಮಾತ್ರವೇ ನನ್ನಲ್ಲಿದೆ. ನಿಮ್ಮೊಲ್ಲೊಂದು ಬೇಲಿ ಹೂ ಇದ್ದರೆ, ನನಗೆ ಕಡ ಕೊಡುವಿರಾ…? ಬೆಳಕು ಹರಿದು ನನ್ನ ಕಣಕಣ- ದಲ್ಲಿ ತೂರುವಂತಹ ಕವಿತೆ ನಿಮ್ಮಲ್ಲಿದ್ದರೆ ಕಡ ಕೊಡುವಿರಾ ?…

ಅನುದಿನ ಕವನ-೬೪೦, ಕವಯತ್ರಿ: ರಂಹೊ, ತುಮಕೂರು

ಅಹಿಂಸೆಯೇ ಧರ್ಮ ಎಂದಿರಿ ನಮ್ಮದು ಇಂಗದ ನೆತ್ತರ ದಾಹ! ಸತ್ಯ ಕಾಣುವ ನೋಟ ತೊಡಿಸಿದಿರಿ ನಾವು ನಿಜದ ನೆತ್ತಿ ಮೇಲೆ ಸುಳ್ಳುಗಳನ್ನು ಪ್ರತಿಷ್ಠಾಪಿಸುತ್ತೇವೆ! ಊರುಗೋಲಾಗುವುದು ಬದುಕು ಎಂದಿರಿ ಬಿದ್ದವರೆದೆಯ ಮೇಲೆ ನಮ್ಮ ಕನಸುಗಳು ಅರಳುತ್ತವೆ! ಬೆತ್ತಲೆ ಫಕೀರನಾಗಿ ಬೆಳಕು ಚಲ್ಲಿದಿರಿ ಬೆಳಕನ್ನೇ…

ಅನುದಿನ‌ ಕವನ- ೬೩೯, ಯುವ ಕವಿ: ಪ್ರವರ ಕೊಟ್ಟೂರು, ಕವನದ ಶೀರ್ಷಿಕೆ:ಅಪ್ಪನಿಗೆ ಎಪ್ಪತ್ತು

ಇಂದು ಹೆಸರಾಂತ ಸಾಹಿತಿ ಡಾ.‌ಕುಂ‌ ವೀರಭದ್ರಪ್ಪ ಅವರ 70ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಡಾ.‌ಕುಂ ವೀ ಅವರ ಪುತ್ರ, ಯುವ ಸಾಹಿತಿ ಪ್ರವರ ಕೊಟ್ಟೂರು ಅವರು ತಮ್ಮ ತಂದೆಯವರ ಕುರಿತು ಬರೆದ ಹೃದಯ ಸ್ಪರ್ಶಿ ‘ಅಪ್ಪನಿಗೆ ಎಪ್ಪತ್ತು’ ಕವಿತೆಯನ್ನು ಪ್ರಕಟಿಸುವ…

ಅನುದಿನ ಕವನ-೬೩೮, ಕವಿ: -ನ. ಗುರುಮೂರ್ತಿ ಜಯಮಂಗಲ, ಮಾಲೂರು ಕವನದ ಶೀರ್ಷಿಕೆ: ಹುಚ್ಚಪ್ಪ

ಹುಚ್ಚಪ್ಪ ಸಣ್ಣದಿರುವಾಗ ಮಗಳು ಯಾವಾಗಲೂ ತಂದೆಯ ಭುಜಗಳ ಮೇಲೆ ಆಡಿಕೊಳ್ಳುತ್ತಿರುತ್ತಾಳೆ ಹಣೆಯ ಮೇಲೇರಿ ಮಂಗನಂತೆ ಕೂರುತ್ತಾಳೆ ಹೊಟ್ಟೆಯ ಮೇಲೆ ಒದೆಯುತ್ತಿರುತ್ತಾಳೆ ಬೆಳೆ ಬೆಳೆಯುತ್ತಿದ್ದಂತೆ ಎಡವಾಗಿ ಸಾಗಿಹೋಗುತ್ತಾಳೆ ಅದೆಷ್ಟು ಆಟವಾಡಿದರೂ ಈ ತಂದೆಯ ಕಣ್ಣಲ್ಲಿ ಅವಳಿನ್ನೂ ಮೊಲದ ಮುದ್ದು ಮರಿಯೇ ಈ ತಂದೆಯ…

ಅನುದಿನ‌ ಕವನ-೬೩೭, ಕವಿ: ರಘೋತ್ತಮ‌ ಹೊ ಬ, ಮೈಸೂರು ಕವನದ ಶೀರ್ಷಿಕೆ: ನಾನೊಂದು ಕವನ ಬರೆದೆ…..

ನಾನೊಂದು ಕವನ ಬರೆದೆ ನಾನೊಂದು ಕವನ ಬರೆದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಟೇಪು ಹಚ್ಚಿ ಪಕ್ಕದಲ್ಲೊಬ್ಬ ದಲಿತ ಸೋದರ ಸತ್ತಿದ್ದರೂ ಕಂಡರು ಕಾಣದಂತೆ ಕಣ್ಣ ಮುಚ್ಚಿ ನಾನೊಂದು ಕವನ ಬರೆದೆ ಆಹಾ… ನೋಡು ಅಲ್ಲಿ ಚಂದಿರ ಇಗೋ ಇದು ಮಂದಿರ ಆ ನಿನ್ನ…

ಅನುದಿನ‌ ಕವನ-೬೩೬, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಎಷ್ಟು ಕಷ್ಟವಲ್ಲವೇ ಸರಳವಾಗಿರುವುದ ರೂಪಕಗೊಳಿಸುವುದು? ಹಿಮ ಸುರಿದ ತಾಜಾ ಬೆಳಗಿನಲಿ ತಂಗಾಳಿ ಮೈಸವರಿದಾಗಿನ ಖುಷಿ ನಿನ್ನ ನೆನೆದಾಗಲೆಂದು ಹೇಳಲು ಅದೆಷ್ಟು ಬೇಲಿಗಳಾಚೆ ನಿಲ್ಲಬೇಕು? ಕಾಡು ಕುಡಿದು ಬಿಟ್ಟ ನೀರು ದೊಡ್ಡ ಝರಿ ಸಣ್ಣ ಹೊನಲು ಹಗಲಿಡೀ ಬೆಳಕಿನ ಕ್ರೀಡೆ ಉದುರಿದ ಒಣ…

ಅನುದಿನ ಕವನ: ೬೩೫, ಹಿರಿಯ ಕವಯತ್ರಿ:ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಬೆಟ್ಟಕ್ಕೆ ಬೆಟ್ಟವೇ ಅರಳುವಾಗ

ಬೆಟ್ಟಕ್ಕೆ ಬೆಟ್ಟವೇ ಅರಳುವಾಗ ತೂಕದ ಬಟ್ಟು ಜಾರಿಸುವ ವಿಮರ್ಶಕರೇ, ಗುಂಪುಗಾರರೇ, ವಿಶೇಷಗಳಿಲ್ಲದ ವಿಶೇಷಾಂಕಗಳೇ, ನಮ್ಮನ್ನು ಹೊರಗಿಟ್ಟೆವೆಂದು ಹಿರಿ ಹಿರಿ ಹಿಗ್ಗುತ್ತ ಕುಗ್ಗಿದವರೇ, ಪ್ರತಿಭೆಗಳ ಗುಂಡಿ ತೋಡಿ ಮುಚ್ಚಲು ಹೆಣಗಿದವರೇ, ನಿಧಿ ಶೋಧಕರು ಎಲ್ಲೆಡೆ ಇರುವುದನ್ನೇ ಮರೆತವರೇ, ಸಾಂಸ್ಕೃತಿಕ ಸಾರ್ವಭೌಮರೆಂದು ಬರಿದೆ ಭಾವಿಸಿದವರೇ!…

ಅನುದಿನ‌ ಕವನ-೬೩೪, ಕವಿ:ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಿಚ್ಚು…!

ಇದು ಅನುರಾಗದ ಭಾವದಾಂಗುಡಿಗಳ ಮಿನಿಗವಿತೆ. ಒಲವಿನ ಹುಚ್ಚು, ಕಿಚ್ಚುಗಳ ಇನಿಗವಿತೆ. ಪ್ರಾಯದ ಭಗ್ನಪ್ರೇಮಿಗಳಿಗೆ ಪ್ರಿಯಾವಾಗಬಲ್ಲುದು. ಇಳಿವಯಸ್ಸಿನ ಸ್ಮಿತಪ್ರಙ್ನರಿಗೆ ನೆನಪುಗಳ ಮರುಕಳಿಸಬಲ್ಲುದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇 “ಕಿಚ್ಚು..!” ಅಂದು ಬೆರೆವ ಹುಚ್ಚು! ಇಂದು ಮರೆವ ಹುಚ್ಚು! ಆಗ ಬೆರೆಯಲಿಕ್ಕಂತೂ.. ಆಗಲೇ..…