ಏನಾದರೂ ಆಗು…….. ಏನಾದರೂ ಆಗು……….. ನಡೆವ ಹಾದಿಯ ಹಸಿರಾಗು ಇಕ್ಕೆಲದಿ ನಗುವ ಹೂವಾಗು ಗಾಳಿಯ ತುಂಟಾಟಕೆ ನಲಿವ ಎಲೆಯಾಗು ಏನಾದರೂ ಆಗು……. ಅಮ್ಮನ ಮಡಿಲಲಿ ಮಲಗಿದ ಮಗುವಿನ ಕಿರುನಗೆಯಾಗು ಹಸುವಿನ ಹಿಂದೆ ಓಡುತಲಿರುವ ಮುದ್ದಿನ ಕರುವಿನ ಓಟವಾಗು ಏನಾದರೂ ಆಗು………….. ಹೊಲದಿ…
Category: ಅನುದಿನ ಕವನ
ಅನುದಿನ ಕವನ-೬೩೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕುಡಿತ
ಕುಡಿತ ಕುಡಿತದ ಮತ್ತು ಸಂಸಾರದ ನಿದ್ದೆ ಕೆಡಿಸಿತ್ತು ! ಸುಂದರವಾದ ಸಂಸಾರಕ್ಕೆ ಸಾರಾಯಿ ಅಮಲು ಏಕೆ ? ” ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ” ಎನ್ನುವ ಕೂಗು ಗೋಡೆ ಬರಹ ಬಿತ್ತಿ ಪತ್ರಗಳಲ್ಲಿ ಕಾಣುತ್ತಿಲ್ಲವೇ ಸಹೋದರರೆ….? ಕಾಣಲಾರದಷ್ಟು…
ಅನುದಿನ ಕವನ-೬೩೧, ಕವಿ: ಬೇಲೂರು ರಘುನಂದನ್, ಬೆಂಗಳೂರು ಕವನದ ಶೀರ್ಷಿಕೆ: ಬಾವ ಅಭಾವ
ಭಾವ ಅಭಾವ ಬೆಲೆ ಬಾಳುವ ಅವಕಾಶ ಬಯಲಾಗದೇ ಬಿಲವಾದರೆ ಸೂರ್ಯ ತಲುಪದ ಹಾದಿ ಕತ್ತಲ ಕಾವಿಗೆ ಒಂದೇ ಅರ್ಥವಿಲ್ಲ ನದಿ ಹರಿಯುವುದು ನೆಲ ಗುರುತಿಸಿದ್ದಕ್ಕೆ ಏರು ತಗ್ಗು ಬೆಟ್ಟ ಗುಡ್ಡಗಳ ಹಾದಿಗೆ ಚಲನೆಯ ಹಾಡು ಭೂಮಿಯ ಪಾಡು ಯಶದ ತೃಷೆಗೆ ಬಾಯಾರಿಕೆ…
ಅನುದಿನ ಕವನ-೬೩೦, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು ಕವನದ ಶೀರ್ಷಿಕೆ: ನೆನಪುಗಳು
ನೆನಪುಗಳು ಕಾಡುತ್ತಾವ ನೆನಪುಗಳು ಬಾಡಿಹೋದ ಹೂವಿನ ಕರಗಿಹೋದ ಗಂಧದೊಳು ಕ್ಷಣಕಾಲ ಮಿಂದೆದ್ದ ಇಬ್ಬನಿಯ ಹನಿಯಂತೆ ಕಾಡುತ್ತಾವ ನೆನಪುಗಳು…!! ಹಾಡುತ್ತಾವ ನೆನಪುಗಳು…. ಮನದ ಮೂಲೆಯಲ್ಲಿ ನಿಂದು ವಿರಹದ ಉರಿಯಲಿ ಬೆಂದು ಮಾತುಮೌನ ಜೊತೆಯಲೇ ತಂದು ಹಾಡುತ್ತಾವ ನೆನಪುಗಳು….!! ಬೇಡುತ್ತಾವ ನೆನಪುಗಳು… ಜೋಡಿ ಕಣ್ಣ…
ಅನುದಿನಕವನ-೬೨೯, ಕವಿ: ಎಲ್ವಿ (ಡಾ. ಲಕ್ಷ್ಮಣ ವಿ.ಎ) ಬೆಂಗಳೂರು
ಗೆಳತಿ ಅವಳು ಲೋಕ ಎಳೆದ ಸರಹದ್ದು ಮೀರಬೇಡ ಎನ್ನುತ್ತಾಳವಳು ನಾನು ರೆಕ್ಕೆ ಸುಟ್ಟುಕೊಂಡ ಪಾರಿವಾಳ, ಎಲೆಕ್ಟ್ರಿಕ್ ಬೇಲಿ ಹಾರಿ ಬರುವವ ಅವರವರ ಕನ್ನಡಕಗಳ ನೋಟಕೆ ಸರಿಯಾಗಿ ಎಳೆದಂತೆ ಕಾಣುವ ನೇರ ಗೆರೆಗಳು ನನಗೆ ಒಪ್ಪಿತವಿಲ್ಲ ಅಸಲು ನನಗೆ ಗಡಿಗಳೇ ಇಲ್ಲ ಆಗಸದಲ್ಲಿ…
ಅನುದಿನ ಕವನ-೬೨೮, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು, ಕವನದ ಶೀರ್ಷಿಕೆ:ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ
ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ ರೆಕ್ಕೆಗಳಿರುವುದೇ ಹೂವಿಂದ ಹೂವಿಗೆ ಹಾರಿ ಮಕರಂದ ಹೀರಿ ಸುಖಿಸಲು; ಮತ್ತೆ ಮತ್ತೆ ಹೊಸ ಹೂವು ಹೊಸ ಸುಖ.ಇದನ್ನೇ ಕಂಡದ್ದು,ಕಂಡದ್ದೇ ನಂಬಿದ್ದು.ಹಾರುವ ದುಂಬಿಗಷ್ಟೇ ಗೊತ್ತು, ಹೊಸಹೊಸತಾಗಿ ಅರಳುವ,ಅರಳಿ ಆಹ್ವಾನಿಸುವ ಹೂಗಳಿಗೇನು ಬರ? ತೋಟ ಸದಾ ಸಮೃದ್ಧ. ಬಾಡಿರುವ…
ಅನುದಿನ ಕವನ-೬೨೭, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು
ದುಃಖದ ಕಣ್ಣುಗಳಲಿ ಉರಿಯುತಿವೆ ಉಲ್ಕೆಗಳು ಯಾರು ಬೆಳೆವರೋ ಇಲ್ಲಿ ಪುಟ್ಟ ಹೂವೊಂದನ್ನು ಹೊಸ ನಾರಿನಿಂದ ಹೆಣೆವರೋ ನೇಣು ಹಗ್ಗಗಳನ್ನು ಸಾಗಿದೆ ದಾರಿ ಹಗಲೊಳಗೆ ತಲೆಯಿಟ್ಟು ಇರುಳೊಳಗೆ ಕಾಲು ಚಾಚೀ ಹಾದಿಗೆ ಮುಳ್ಳ ನೆಡುವವರ ಸಂತಾನ ಬೆಳೆಯುತಿದೆ ಕತ್ತಲಲಿ ಬೆಳಕಿನ ಬೀಜವ ಬಿತ್ತುವ…
ಅನುದಿನ ಕವನ-೬೨೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್), ತುಮಕೂರು ಕವನದ ಶೀರ್ಷಿಕೆ:ಗಾಯ
ಗಾಯ…..! ಗಾಯಗಳನ್ನು ಸುಖಿಸುವುದು ಅಭ್ಯಾಸವಾಗಬಾರದು ಲೋಕದ ಹಿಡಿಯಲ್ಲಿ ಸದಾ ಉಪ್ಪೇ! ಗಾಯ ಸಲೀಸಾಗಿ ಮಾಯುವುದಿಲ್ಲ! ಹಾಗಂತ ವ್ರಣವಾಗಲು ಬಿಡಲೇಬಾರದು! ಗಾಯ ಯಾರೂ ಮಾಡಬಹುದು ಅವರೆಡೆಗಿಷ್ಟು ಕರುಣೆಯ ಪಾಲಿರಲಿ! ಗಾಯಗಳನ್ನು ಪಾಲು ಮಾಡಲಾಗದು ಮದ್ದು ತರುವ ಎದೆಗಳನ್ನು ಸಂಭ್ರಮಿಸಬೇಕು! ಈ ಗಾಯಗಳು ಆತ್ಮದ…
ಅನುದಿನ ಕವನ-೬೨೫, ಕವಿ: ಲೋಕಿ (ಲೋಕೇಶ್ ಮನ್ವಿತ), ಬೆಂಗಳೂರು
ನೀ ಆವರಿಸುವ ಒಂದು ಸುಳಿವು ಸಿಗಲಾರದೇ ಬದುಕು ದೂಡುತ್ತಿದ್ದೆ ಕೊನೆಯ ದಿನವೆಂಬಂತೆ ಸಾಗುತ್ತಿದ್ದ ಹಾದಿಯಲ್ಲಿ ಕಾಣದೊಂದು ತಿರುವಿನಲ್ಲಿ ಕಂಡ ಹೂವು ನೀನು ಕಾಲಿಗಿನ್ನು ಚಲಿಸುವ ದೌರ್ಬಲ್ಯ! ಸಂಪರ್ಕ ಕಳೆದು ಕೊಂಡಿದ್ದ ರಸ್ತೆಗಿಲ್ಲಿ ಮತ್ತೇ ಮೈಲುಗಲ್ಲಿನ ಭಾಗ್ಯ ಕಪ್ಪನೆಯ ಡಾಂಬಾರು ಬಳಿದುಕೊಂಡ ಎದೆಯ…
ಅನುದಿನ ಕವನ-೬೨೪, ಕವಯತ್ರಿ: ಡಾ.ವಾಣಿಶ್ರೀ, ಕಾಸರಗೋಡು, ಕವನದ ಶೀರ್ಷಿಕೆ: ಬವಣೆಗಳ ಬದುಕು
ಬವಣೆಗಳ ಬದುಕು ಮನುಜನ ಬದುಕಿನಲಿ ಬವಣೆಗಳು ನೂರಾರು ಪರಿಹಾರದ ಸೂತ್ರಗಳ ಭಾವನೆಗಳು ಹಲವಾರು ಬವಣೆಯ ಕಳೆಯಲು ಭಾವನೆಗಳ ಹೂಡುವರು ಮನದಲಿ ತುಂಬಿರುವ ದುಗುಡವ ಮರೆಯುವರು ಬರುವುದು ಕಷ್ಟಗಳು ಸಹಜ ಇಷ್ಟದಿಂದ ಸ್ವೀಕರಿಸಿ ಎದೆಗುಂದದೆ ಮುನ್ನಡೆದು ಧೈರ್ಯದಿ ಎದುರಿಸಿ ಮುಂದಿರುವುದು ಸುಖವೆಂದು ತಿಳಿದು…