ಅನುದಿನ ಕವನ-೬೨೨, ಕವಯತ್ರಿ:ಡಾ.ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ: ಕಥೆ ಮುಗಿದ ಸಮಯ

ಕಥೆ ಮುಗಿದ ಸಮಯ ಕಥೆಗಳ ಪಾತ್ರಗಳಿಗೆಲ್ಲಾ ಜೀವತಂತು ಹೆಣೆ ಹೆಣೆದು ಉಸಿರು ರವಾನಿಸಿ ಅವೆಲ್ಲಾ ಜೀವ ತುಂಬಿಕೊಳ್ಳುತಿರೆ ಹಡೆದು ಹಗುರಾದ ಅವ್ವನ ಮೊಗದ ತೃಪ್ತಿ ಪದ ಪದಗಳಲ್ಲೂ ಗೋಚರಿಸಿದ್ದು ಜೀವಲಹರಿ ಜೋಗಿಯ ಜೋಳಿಗೆ ತುಂಬಿ ಹೊಯ್ದಡಿತೇ ಕಥೆಯ ಪಾತ್ರಗಳ ಭಾರಕೆ ಅದ್ಯಾವ…

ಅನುದಿನ ಕವನ-೬೨೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಗೆಳೆತನ

ಗೆಳೆತನ ನಮ್ಮೊಳಗಿರುವ ಭಾವನೆಗಳು ನಮ್ಮದು ಮನಸ್ಸು ಬಲು ಮೃದು ಬಯಸುವ ಗೆಳೆತನ ಉಳಿಸಿಕೊಂಡು ತೋರಬೇಕು ನಮ್ಮತನ ನಮ್ಮಂತೆ ಇತರರೂ ಎಂದು ಭಾವಿಸುವುದು ಮೂರ್ಖತನ ಕೆಲವರಿರುವರು ಮೊದಲು ತೋರುವರು ಪ್ರೀತಿ ಆದರ ಅವರದೋ ಮುತ್ತುದುರಿಸುವಂತಹ ಅದರ ! ಉಕ್ಕಿ ಬರುವ ಹೊಸತನ ಮೋಡಿ…

ಅನುದಿನ ಕವನ-೬೨೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೆರಳು…..

ನೆರಳು….   ನೆರಳು…ನೆರಳು… ಈ ನೆಲದ ತಂಪು ನೆರಳು ನೆರಳು…ನೆರಳು… ಈ ಜನರ ಮನದ ನೆರಳು ಕಾಯೋದು ನಿನ್ನ ಪ್ರೀತಿ ಸಮತೆನೆ ನಿನ್ನ ನೀತಿ ನಮಗಿಲ್ಲ ಯಾವ ಭೀತಿ ನೀನೇನೆ ನಮ್ಮ ರೀತಿ… ಮುಗಿಲು ಭೋರ್ಗರೆವ ನೀಲಿ ಕಡಲು ಸಂಧಿಸುವ ಎಲ್ಲರು…

ಅನುದಿನ ಕವನ- ೬೧೯, ಕವಯತ್ರಿ: ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ ಕವನದ ಶೀರ್ಷಿಕೆ: ಬುದ್ಧನಿಲ್ಲದ ಬದುಕು

ಬುದ್ದನಿಲ್ಲದ ಬದುಕು ಅವನರಿವಿನ ಯರವಲಿನ ಋಣಭಾರ ಹೊತ್ತಿದ್ದೇನೆ… ತೀರಿಸಲಾರದ ಸಾಲವಿದು… ಅಲ್ಲಮನ ಶಬ್ದ ಸ್ಪೋಟಕ್ಕೆ ಮಾತು ಕಳೆದುಕೊಂಡಿದ್ದೇನೆ… ಭರಿಸಲಾರದ ನೋವಿದು… ನನ್ನ ಆವರಿದ ಪ್ರೇಮೋನ್ನತಿಗೆ ಉಸಿರುವುದ ಮರೆತಿದ್ದೇನೆ… ಹೆಸರಿಸಲಾರದ ಬ್ರೂಣವಿದು… ಎದೆಯ ಖಾಲಿ ಕೊಣೆಗೆ ನಿನ್ಹೆಸರ ನಾಮಫಲಕ ಹಚ್ಚಿದ್ದೇನೆ ಅಳಿಸಲಾರದ ನಂಟಿದು……

ಅನುದಿನ‌ಕವನ-೬೧೮, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧.ಜಗದಗಲ ಮುಗಿಲಗಲ; ತಾಯಿ ಪ್ರೀತಿ ಅನಂತ ೨.ಅಂಗನವಾಡಿ ತುಂಬೆಲ್ಲ; ಮಿಣುಗುವ ನಕ್ಷತ್ರಪುಂಜ ೩.ಎದೆ ತೆರೆದು ಮಾತಾಡು ಎಂದೆ; ಮುಖ ಮುಚ್ಚಿ ನಕ್ಕಳು ೪.ಸಾವಿನ ಮನೆ ಸನಿಹ; ಸಾವಿರಾಸೆ ಜನಜಂಗುಳಿ ೫.ವಿರಹದೇರು ಸಮಯಕೆ; ವಿವೇಕ ಮಂಕಾಗಿ ಹೋಯ್ತು ೬.ನೀರೆ ಇಲ್ಲದ ಬದುಕು…

ಅನುದಿನ ಕವನ-೬೧೭, ಕವಿ: ಶಿವಾನಂದ ಉಳ್ಳಿಗೇರಿ, ಬೈಲಹೊಂಗಲ(ಬೆಳಗಾವಿ ಜಿ.), ಕವನದ ಶೀರ್ಷಿಕೆ: ಪ್ರೀತಿಸುವುದೆಂದರೆ….!

ಪ್ರೀತಿಸುವುದೆಂದರೆ ಪ್ರೀತಿಸುವುದೆಂದರೆ ಆ ಪ್ರೀತಿ ಹರಿಯುತ್ತಲೇ ಇರಬೇಕು ಬತ್ತಲಾರದ ನದಿಯ ಹಾಗೇ ಸುಪ್ತವಾಗಿ‌ ಸೇರಬೇಕು ಹೃದಯ ಸಾಗರಕೆ , ತುಂಬಾ ಆಳಕೆ ದ್ವೇಷವೆಂದಿಗೂ ನುಸುಳಬಾರದು ಪ್ರೀತಿಯ ಹರಿವಿಕೆಗೆ ಭೋರ್ಗರತಕೆ ಪ್ರೀತಿಸುವುದೆಂದರೆ ಆ ಪ್ರೀತಿ ಯಾವಾಗಲೂ ಹೊನ್ನಿನಂತೆ ನಳನಳಿಸಬೇಕು ಜಗವ ಪೊರೆವ ರವಿಯಂತೆ…

ಅನುದಿನ ಕವನ-೬೧೬, ಕವಯತ್ರಿ:ಲೀಲಾ ಅಪ್ಪಾಜಿ, ಮಂಡ್ಯ

  ಕಾಯುತ್ತಾ ಕುಳಿತಿದ್ದಿರಿ ಹರಿಹರಪುರದ ಸ್ಟೇಷನ್ನಿನಲ್ಲಿ ರೈಲಿಗಾಗಿ. ಅಲ್ಲೆ ಹೊಂಚು ಹಾಕಿದವ ಉಂಡ ಬಿರಿಯಾನಿ ಕರಗುವ ಮುನ್ನ. ಏರುವ ರೈಲು ಬರುವ ಮುನ್ನ ಹೊಸಕಿ ಹೊಯ್ದ ಅಲ್ಲಾ, ಕತೆ ಮುಗಿಸದೆ ಹೋದಿರೆತ್ತ… ಬಿಡಿ ಈ ನೆಲದಲ್ಲಿ ಕತೆ ಮುಗಿಯದಿದ್ದರೂ ಅವರ ಕತೆ…

ಅನುದಿನ ಕವನ-೬೧೫, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಮದುವೆ ಮನೆ

ಮದುವೆ‌ ಮನೆ ಮದುವೆ ಸಂಭ್ರಮ ಮನದಿ ಹರುಷವು ವಧುವು ವರರನು ಸಿದ್ದ ಮಾಡಲು ಪದವ ಹಾಡುತ ಜನರು ಪೂಸಲು ಹಳದಿ ಮೈತುಂಬ| ಕದವತೆರೆಯಿತು ಮನದ ಭಾವವು ಮುದವ ನೀಡಿತು ತಾಣದಲ್ಲಿನ ಮದುವೆ ಪರಿಸರ ಬಾಳಪುಟಗಳ ತೆರೆವ ಶುಭಘಳಿಗೆ|| ಹರುಷದಿಂದಲಿ ಜನರು ನಲಿದರು…

ಅನುದಿನ ಕವನ-೬೧೪. ಕವಿ: ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು

ಒಲಿಯಬೇಕು ಕವಿತೆ ಒಲಿದಂತೆ ಚೆಲುವಿನ ವನಿತೆ; ಒಲಿಯಬೇಕು ವನಿತೆ ಒಲಿದಂತೆ ನವನವೀನ ಕವಿತೆ, ಹಚ್ಚಿದಂತೆ ಕತ್ತಲಲ್ಲಿ ಸಂಭ್ರಮದ ಒಲವಿನ ಪ್ರೀತಿಯ ಹಣತೆ… ತೊನೆಯಬೇಕು ಕವಿತೆ ತೊನೆದಂತೆ ಮೀನಕಣ್ಣಿನ ಹೆಣ್ಣು; ತೊನೆಯಬೇಕು ಹೆಣ್ಣು ತೊನೆದಂತೆ ಮರದಲ್ಲಿನ ತಾಜಾ ಹಣ್ಣು.. ಮುಂಗಾರಿನ ಮೊದಲ ಹನಿಗಳಿಗೆ…

ಅನುದಿನ ಕವನ-೬೧೩, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ. ಕವನದ ಶೀರ್ಷಿಕೆ: ಕತ್ತಲ ದೀಪ

ಕತ್ತಲ ದೀಪ !! ಸಕಲರಿಗೆಲ್ಲಾ ಬೆಳಕು ನೀಡುವ ದೀಪವೇ ಇಂದು ಕತ್ತಲಲ್ಲಿ ಕುಳಿತಿದೆ; ತನಗೆ ಆವರಿಸಿದ ತಾಮಸವ ಓಡಿಸಲು ತಲೆಬಾಗಿ ಬೇಡುತಿದೆ ! ಬೆಳಕು ಬಯಸಿ ಬಂದ ಜನರ ಎದೆಗಳು ಕೆಂಡವಾಗಿ ಕುದಿಯುತಿವೆ ! ದೀಪದ ಬೆಳಕಿನ ಶಕ್ತಿಯೇ ಇಂದು ರಕ್ಷಣೆಯ…