ಜಾತಕದ ಫಲ ಜಾತಕದ ಸೂಚಿಯು ಚಕ್ರದಡಿ ಸಿಲುಕಿ,ಮುಂದಾದ ಮಳೆಯಲಿ, ಬಡತನ ಮತನಾಡುತ್ತಾ ಚಲಿಸಿದೆ…. ಹವಮಾನದ ಬೇಸರಕೆ ಚಿಂತೆಯ ಕಣ್ಣಿಗೆ, ಬಂಧುತ್ವದ ಒಡಲ ಮುತ್ತುಗಳು ಒಂದೊಂದಾಗಿ ಗೋಚರಿಸಿವೆ ಮಣ್ಣ ಗೆದ್ದಿಲಿಗೆ…. ಬವಣೆಯ ಹಂದಿರ ಸಪ್ಪಳವಿಲ್ಲದೆ ಗರಿಯ ತಾಕಿವೆ…. ಸುಳಿವಿಲ್ಲದ ದಾರಿಗೆ ನಾಲೆ ಇರದ…
Category: ಅನುದಿನ ಕವನ
ಅನುದಿನ ಕವನ-೬೦೯, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು, ಕವನದ ಶೀರ್ಷಿಕೆ: ಕಾದಿರುವೆ ನಿನಗಾಗಿ
ಕಾದಿರುವೆ ನಿನಗಾಗಿ ಇನಿಯನಿಲ್ಲದ ಮುಸ್ಸಂಜೆ ಬಣ್ಣ ಮಾಸಿದಂತಿದೆ ಎದೆಯೊಳಗೆ ನೂರು ಭಾವ ಗಾಳಿ ಸೋಕಿದಂತಿದೆ ದೇಹ ಮಾತ್ರ ಇಲ್ಲಿಹುದೆನೋ ಶ್ವಾಸ ನಿನ್ನ ಸೇರಿದೆ. ಮೌನವಿಂದು ಮುಸುಕ್ಹೊದ್ದು ಬೆಂಕಿಯಾಗಿ ಸುಡುತಿದೆ. ನೀನಿರದ ಏಕಾಂತ ನಗುವಿನೊಡನೆ ಮುನಿಸಿದೆ… ಸನಿಹ ಬಾ ಸುಂದರಾಂಗ ಹೃದಯವಿಂದು ಕರೆದಿದೆ…
ಅನುದಿನ ಕವನ-೬೦೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಮನುಜ ಪ್ರೀತಿ
ಮನುಜ ಪ್ರೀತಿ ಭವಸಾಗರದಲ್ಲಿ ನೋವುಗಳ ಹೊಳೆಯೇ ಹರಿದು ಸೇರುತಿರಲಿ|| ಬೀಸಿ ಬರುವ ಬಿರುಗಾಳಿ ತಡೆದು ಬಾಳ ನೌಕೆ ತೇಲುತಿರಲಿ|| ನಿನ್ನ ಭರವಸೆಗಳೆಂದೂ ಹುಸಿಯಾಗುವುದಿಲ್ಲ| ಕವಿದ ಕಾರ್ಮೋಡಗಳು ಸರಿದು ಕಂಡ ಕನಸು ನನಸಾಗುತಿರಲಿ|| ನಿನ್ನ ಆಶಾಗೋಪುರವೆಂದೂ ಕಳಚಿ ಬೀಳುವುದಿಲ್ಲ| ಮೇಲೆ ಏರಲು ಉಂಡ…
ಅನುದಿನ ಕವನ-೬೦೭, ಕವಿ: ನಾಗೇಶ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಮಹಾ ಸಭ್ಯಸ್ಥನ ಪ್ರವರ
ಮಹಾ ಸಭ್ಯಸ್ಥನ ಪ್ರವರ ಬಾಯಿ ಬಿಟ್ಟರೆ ಆದರ್ಶ-ತತ್ವಗಳನ್ನೇ ಶಂಕ ಜಾಗಟೆ ಹೊಡೆಯುವ ಮಹಾ ಸಭ್ಯಸ್ಥ….. ಅನ್ಯಾಯಕ್ಕೆ ಕಾವಲಿರುತ್ತಾನೆ ಕುತಂತ್ರಿಗಳ ಬೆನ್ನು ತಟ್ಟುತ್ತಾನೆ ಬೆನ್ನ ಹಿಂದಿನ ಟೀಕೆಗಳನ್ನು ನಗುತ್ತಲೇ ಕೊಡವಿಕೊಳ್ಳುತ್ತಾನೆ ತಪ್ಪು ಎತ್ತಿ ತೋರಿಸಿದವರ ಮೇಲೆಯೇ ಧುತ್ತೆಂದು ಮುಗಿಬೀಳುತ್ತಾನೆ ಧರ್ಮ ಸಂದೇಶಗಳನ್ನು ಪುಕ್ಕಟೆಯಾಗಿ…
ಅನುದಿನ ಕವನ-೬೦೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ವಿವಿಧ ವಿಶಯಗಳ ವಿಶ್ವವಿದ್ಯಾಲಯಗಳಲ್ಲಿ ಕಲಿತವಳಲ್ಲ ಜನಮನವ ತಿಳಿದು ವಿಶ್ವಾಸದಿ ವಿಶ್ವವನ್ನೆ ಅರಿತವಳು ನನ್ನ ಮನದ ಆಳ ಅಗಲಗಳ ಇಂಚಿಂಚೂ ಅಳೆದವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು…
ಅನುದಿನ ಕವನ-೬೦೫, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ ನೆನಪು… ಚಿತ್ರ: ಆಶಾ ಎಸ್
ಅವಳ ನೆನಪು…….. ಅವಳ ನೆನಪುಗಳೇ ಹಾಗೆ- ಆಗಸದಿಂದ ಬಿಡದೆ ಸುರಿವ ಹನಿಗಳಂತೆ ! ಅಡಿಯಿಂದ ಮುಡಿಯವರೆಗೆ ತೋಯ್ದರೂ ಬೆಚ್ಚನೆ ರೋಮಾಂಚನ ಮೈಯ ಪ್ರತಿ ಕಣದೊಳಗೂ ಮೋಡಗಳ ಸ್ಪರ್ಶ ಮೊದಲ ಮಳೆಗೆ ನೆಲದಿಂದ ಮೇಲೆದ್ದ ಘಮಲಿನ ಹೂಬನ ನೆಲಕೆ ತಾಕುವ ಹನಿಗಳ ತಂತನನ…
ಅನುದಿನ ಕವನ-೬೦೪, ಕವಯತ್ರಿ: ಅನ್ನಪೂರ್ಣ ಪದ್ಮಶಾಲಿ, ಕೊಪ್ಪಳ, ಕವನದ ಶೀರ್ಷಿಕೆ: ವಾಸ್ತು ತೊರೆದ ವಾಸ್ತವ
ವಾಸ್ತು ತೊರೆದ ವಾಸ್ತವ ವಿಜ್ಞಾನ ಜಗತ್ತು ಜ್ಞಾನವಂತರ ಸೊತ್ತು ಬಿಡು ನೀ ವಾಸ್ತು… ವಾಸ್ತು. ವೈಜ್ಞಾನಿಕ ಮನೋಭಾವ ಅರಿತು! ಸಿಲುಕದಿರು, ಅಂಜದಿರು ವಾಸ್ತುವಿನ ಭಯಕ್ಕೆ.,! ಭೂಗೋಳವಿದು, ಭೂಮ್ಯಾಕಾರವಾಗಿದೆ..!!! ಭೂಮಿಗಿದೆಯೇ ವಾಸ್ತು..?? ದಿನದಿನವೂ ಕ್ಷೀಣಿಸುತ್ತಿದೆ ಶಾಂತಿಯ ಮನಸ್ಸು ಜನಮನದಿ ಬರಿ ಒಳಸಂಚು ವೈಮನಸ್ಸು…
ಅನುದಿನ ಕವನ-೬೦೩, ಕವಿ: ಹೊಳಗುಂದಿ ಎ.ಎಂ.ಪಿ ವೀರೇಶಸ್ವಾಮಿ, ಬಳ್ಳಾರಿ, ಕವನದ ಶೀರ್ಷಿಕೆ: ಬಿಕ್ಷುಕರು ನಾವು
ಬಿಕ್ಷುಕರು ನಾವು. ಪರಿಸರದ ಸಿರಿಯ ಅಂಗಳದಿ ದುರಾಸೆಯ ಗಂಗಾಳ ಹಿಡಿದ ಬಿಕ್ಷುಕರು ನಾವು ಕಾಮಧೇನುವದುವೆಂದು ಬಗೆದು ಹಾಲು ಮುಗಿದರು ರಕ್ತ ಹಿಂಡುವ ಖೂಳ ರಕ್ಕಸರು ನಾವು ಕಲ್ಪವೃಕ್ಷದ ಹೂ ಹಣ್ಣು ಕಾಯಿ ಎಲೆ ಕಿತ್ತು ಬರಿದಾದರು ಬಿಡದೆ ಬೇರ ಕೀಳುವ ಮಹಾ…
ಅನುದಿನ ಕವನ-೬೦೨, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಪ್ರೇಮದ ಪರಿ ಪರಿ…
“ಇದು ಪ್ರೇಮದ ಪರಿ ಪರಿ ಸ್ಫುರಣಗಳ ಸುಂದರ ಕವಿತೆ. ಅನುರಾಗದ ಅನುಪಮ ಸ್ವರಗಳ ಮಧುರ ಭಾವಗೀತೆ. ಓದಿ ನೋಡಿ.. ಮನವರಳಿಸಿ ಮುದನೀಡಿ ಮಾರ್ದನಿಸುತ್ತದೆ. ಏಕೆಂದರೆ ಇಲ್ಲಿ ಸೆಳೆಯುವ ಭಾವಕಿರಣಗಳ ಸೌಂದರ್ಯವಿದೆ. ಕಚಗಳಿಯಿಡುತ ಕುಣಿಸುವ ಜೀವಸಂವೇದನೆಗಳ ಮಾಧುರ್ಯವಿದೆ” ಎಂದು ಹೇಳುತ್ತಾರೆ ಕವಿ ಎ.ಎನ್.ರಮೇಶ್.…
ಅನುದಿನ ಕವನ-೬೦೧, ಹಿರಿಯ ಕವಿ: ಲಿಂಗಾರೆಡ್ಡಿ ಶೇರಿ, ಸೇಡಂ, ಕವನದ ಶೀರ್ಷಿಕೆ: ಇವನು ಅವನಲ್ಲ…..
ಇವನು ಅವನಲ್ಲ ಅಂದು ಕಳೆದು ಹೋದವನು ಇಂದು ಸಿಕ್ಕಿದ್ದಾನೆ. ಆದರೆ ಇವನು ಅವನಲ್ಲ! ಅಂದು ಕಳೆದು ಹೋದವನ ಮುಖದಲ್ಲಿತ್ತು ಇಂದು ಕಳೆ. ಬೆಳ್ಳಗೆ ನಗುತ್ತಿದ್ದ, ಇಂಪಾಗಿ ಹಾಡುತ್ತಿದ್ದ, ಜಿಂಕೆಯಂತೆ ಓಡಾಡುತ್ತಿದ್ದ, ಹಕ್ಕಿಯಂತೆ ಹಾರಾಡುತ್ತಿದ್ದ. ಇವನು ಅವನಲ್ಲ. ಅವನಲ್ಲಿ ಕನಸುಗಳಿದ್ದವು ಹುಡುಕುತ್ತಿದ್ದ ಭರವಸೆಯಿಂದ.…