ಬಣ್ಣದ ಚಿಟ್ಟೆ ರಂಗು ರಂಗಿನ ಹಾರುವ ಚಿಟ್ಟೆ ಅಂದ ಚೆಂದದ ಬಣ್ಣದ ಚಿಟ್ಟೆ| ಹೂವಿಂದ ಹೂವಿಗೆ ಹಾರುವ ಚಿಟ್ಟೆ ಸವಿಯನು ಹೀರಿ ಪಕಳೆಯ ಅರಳಿಸಿ| ಒಲವಿನ ಮುತ್ತನು ಸುರಿಸುವ ಚಿಟ್ಟೆ ನಲಿಯುತ ನಗುತಲಿ ಬದುಕುವ ಚಿಟ್ಟೆ| ಮಕ್ಕಳಿಗಂತು ಪ್ರೀತಿಯ ಪತಂಗ ಬಯಸುತ…
Category: ಅನುದಿನ ಕವನ
ಅನುದಿನ ಕವನ-೫೬೧, ಕವಿ: ಎಂ.ಎಂ.ಶಿವಪ್ರಕಾಶ್, ಹಂಪಿ ಕನ್ನಡ ವಿವಿ, ಕವನದ ಶೀರ್ಷಿಕೆ: ತಾಯಿ ತುಂಗಭದ್ರೆ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ
ತಾಯಿ ತುಂಗಭದ್ರೆ ಶತಶತಮಾನಗಳಿಂದ ಹಂಪಿಯ ಕಿಷ್ಕಿಂದ ಆಂಜನಾದ್ರಿಗಳ ನಡುವೆ ಹರಿಯುತ್ತಿದ್ದಾಳೆ.ಆಶ್ವಿನಿ ರೋಹಿಣಿ ಕೃತಿಕಗಳಿಗೆ ಕೇಕೆ ಹಾಕುತ್ತಾಳೆ .ಮೈದಡುವುತ್ತಾಳೆ ಬೆಟ್ಟ,ಬಂಡೆ ಮಂಟಪ,ಗುಡಿ ಗುಂಡಾರಗಳನ್ನು,ಬಾಚಿಕೋಳ್ಳುತ್ತಾಳೆ ಮನೆ ಮಠ ಜೋಪಡಿಗಳನ್ನು. ಕಣಕಣದಲ್ಲೂ ಬಿಸಿಲ ತಣಿಸುವ ಬಂಡೆಗಳ ಮೇಲೆ ಕಾಲಿಟ್ಟರೆ ಪಾತಾಳ ನಾಭಿಸುಳಿ ಚಕ್ರತೀರ್ಥ.ತಲೆದೂಗುತ್ತಾಳೆ ಪಚ್ಚನೆಯ ಪಯಿರಾಗಿ,ಬಾಳೆಗೊನೆಗಳಿಗೆ…
ಅನುದಿನ ಕವನ-೫೬೦, ಕವಿ: ಡಾ. ಸಂಗಮೇಶ ಎಸ್. ಗಣಿ, ಹೊಸಪೇಟೆ, ಕವನದ ಶೀರ್ಷಿಕೆ: ಸುಮ್ಮನಿರದ ಕವಿತೆ
ಸುಮ್ಮನಿರದ ಕವಿತೆ ನಾನೂ ಮೌನವಾಗಿರಬೇಕೆಂದಿದ್ದೇನೆ ಸುಮ್ಮನಿರದೆ, ಮಾತಿನ ಯುದ್ಧಕೆಳೆಯುತಿದೆ ಈ ಲೋಕ… ಶಾಂತಿನಿವಾಸದ ಕನಸ ಕನವರಿಕೆಯಲಿರುವಾಗ ಬಂದೂಕು ಬಾಯಿತೆರೆದು, ಬಾಂಬ್ ಸಿಡಿದು ಕನಸ ಛಿದ್ರವಾಗುವುದ ಕಂಡು ಏನೊ ತಳಮಳ, ಎಂಥದೊ ಕಳವಳ…. ನೆಲಕ್ಕೆ ಬಿದ್ದ ಬೀಜ ಮೊಳಕೆಯೊಡೆವಾಗ ಶಾಂತಿಮಂತ್ರದ ಪಠಣ. ಮನದೊಳಗೆ…
ಅನುದಿನ ಕವನ-೫೫೯, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅತಿವೃಷ್ಟಿ
ಅತಿವೃಷ್ಟಿ ಕನಸುಗಳು ಕಣ್ತುಂಬ ನೂರಾರು ಕಣ್ಮುಚ್ಚಿ ತೆಗೆಯಲು ಬರೀ ನೀರೇ ನೀರು ಆಪತ್ಕಾಲಕ್ಕೆ ಆಗುವುದೇ ಸರ್ಕಾರ ಬರೀ ಆಶ್ವಾಸನೆ ಕೊಡಬೇಡಿ ಭರಪೂರ ! ಅತಿವೃಷ್ಟಿಯಿಂದ ಆಗಿದೆ ಎಲ್ಲೆಲ್ಲೂ ತಲ್ಲಣ ಆರ್ಭಟಿಸುತ್ತಿದೆ ರುದ್ರ ನರ್ತನ ಭೂಕುಸಿತದ ಭಯ ಕಂಪನ ಪ್ರಕೃತಿಯ ವಿಕೋಪಕ್ಕೆ ತತ್ತರಿಸುತ್ತಿದೆ…
ಅನುದಿನ ಕವನ-೫೫೮, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ನಿಲ್ಲಿಸು ನೋಯಿಸುವ ಆಟ
ನಿಲ್ಲಿಸು ನೋಯಿಸುವ ಆಟ 👇 ನೋಯಿಸುವ ಆಟ ನಿಲ್ಲಿಸಿಬಿಡು ಗೆಳೆಯ…. ಇಲ್ಲವಾಗಿಸುವವರು ಎಂದಿಗೂ ಉಳಿದಿಲ್ಲ ಇತಿಹಾಸದ ಪುಟಗಳಲ್ಲಿ. ಯಾರನ್ನು ಉಳಿಸುತ್ತೇನೆ ಎಂಬ ಪಣ ತೊಟ್ಟಿರುವೆಯೋ ಅದು ನಿನ್ನ ಉಳಿಸಿದರೆ ಸಾಕು. ‘ಕೊಂದು ಕಾಯು ನನ್ನ’ ಎಂದು ಯಾವ ಧರ್ಮವೂ ಪಿಸುಗುಟ್ಟಿಲ್ಲ…. ತಬ್ಬಿದರೆ…
ಅನುದಿನಕವನ-೫೫೭, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು👇 ೧ ಗೆದ್ದೆತ್ತು ಬಾಲ ಹಿಡಿದವರು; ಗೂಳಿ ಬಿದ್ದಾಗ ಕಲ್ಲು ೨ ಬುದ್ಧನಾಗಲು ನಿರ್ಧರಿಸಿದಾಗೊಮ್ಮೆ ನೀ ಅಡ್ಡ ಬಂದೆ! ೩ ಗುಡ್ಡದೆದುರು ನಿಂತು ಕೂಗಿದ ಶ್ವಾನ ಕುಸಿದು ಬಿತ್ತು ೪, ವಾಸ್ತುದೋಷಕೆ ಮನೆ ಬಿಟ್ಟರು; ಇಲಿ ಹೆಗ್ಗಣ ವಾಸ ೫ ವಸಂತಳಿಗೂ…
ಅನುದಿನ ಕವನ-೫೫೬, ಕವಯತ್ರಿ: ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಬರೆಸಿಕೊಂಡ ಸಾಲುಗಳು
ಬರೆಸಿಕೊಂಡ ಸಾಲುಗಳು ನನ್ನ ಮೇಲೆ ಕರುಣೆ ತೋರಬೇಕಿಲ್ಲ ಶವದ ಮುಂದೆ ಸೋಬಾನೆ ಹಾಡಬೇಡ ನಾನೀಗ ಅಲೆಮಾರಿ ಇಷ್ಟುದಿನ ನನ್ನವನಿಗಾಗಿ ಹುಡುಕುತ್ತಿದ್ದೆ.. ಈಗ ಅವನು ಅಲೆಮಾರಿ ನಾ ಬದುಕ ಬೇಕೆಂಬ ಬಯಕೆ ನಿನಗಿದ್ದರೆ .. ಈಗ ಉಣಿಸಿದ ವಿಷದ ಅಮಲು ಏರಲು ಬೀಡು…
ಅನುದಿನ ಕವನ-೫೫೫, ಕವಯತ್ರಿ: ಪ್ರೇಮಾ ನಡುವಿನಮನಿ, ಧಾರವಾಡ, ಕವನದ ಶೀರ್ಷಿಕೆ: ಕನಸುಗಳಂದ್ರ
ಕನಸುಗಳಂದ್ರ ನೀಲಿ ಬಾನಂಗಳದಲಿ ಮೂಡಿ ಬಂದಾ ಚಂದ್ರ ಈ ಎದೆಯಂಗಳದಲಿ ಆಸೆ ತಂದಿ ನೀ ಚಂದ್ರ ನೀ ಕಲ್ಲ ಮನಸಲಿ ಅರ್ಥ ತಂದಿ, ಪ್ರೀತಿ ಅಂದ್ರ ಏನೇನೋ ಹೇಳೋ ಕನಸಲಿ ನನಗೆ,ದನಿ ಇಲ್ಲ ನಿನ್ಮುಂದೆ ನಿಂತ್ರ.. ಇಡೀ ರಾತ್ರಿ ನಿನ್ನ ನೆನಪಲಿ…
ಅನುದಿನ ಕವನ-೫೫೪, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ, ಕವನದ ಶೀರ್ಷಿಕೆ: ಕವಿತೆ!
“ಕವಿತೆಯ ಮೇಲೊಂದು ಕವಿತೆ. ಕವಿಯ ಆಂತರ್ಯ, ಕಾವ್ಯದ ಸೌಂದರ್ಯ, ಬದುಕಿನ ಮಾಧುರ್ಯಗಳ ಅವಿನಾಭಾವದ ಭಾವಗೀತೆ ಎಂದು ಹೇಳುತ್ತಾರೆ ಕವಿ ಎ.ಎನ್.ರಮೇಶ್ ಗುಬ್ಬಿ ಅವರು….! 👇👇👇👇👇 ಕವಿತೆ..! ಪದಕೆ-ಪದ ಜೋಡಿಸಿ ಭಾವಕೆ-ಜೀವ ಬೆರೆಸಿ ಮೀಟಬೇಕಿದೆ… ಕವಿತೆಯೆಂಬ ವೀಣೆಯನ್ನು.! ಮಧು-ಮಧುರ ಇಂಚರ ತುಂಬಬೇಕಿದೆ…. ಮನದ…
ಅನುದಿನ ಕವನ-೫೫೩, ಕವಯತ್ರಿ: -ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು, ಕವನದ ಶೀರ್ಷಿಕೆ: ಮಕ್ಳ ಪದ್ಯ
ಮಕ್ಳ ಪದ ಅಪ್ಪ- ಅಮ್ಮಂಗೆ ನಾನು ಅರ್ಥವೇ ಆಗಲ್ಲ ಅಕ್ಷರ ನಂಗರ್ಥಾಗೋದು ಕಷ್ಟನೇ ಅಲ್ವ|| ಅಪ್ಪ ಇರ್ತಾರೆ ನಿತ್ಯ ನಶೆಯ ಮೇಲೆ ಅಮ್ಮ ಕೈ ತೊಳಿತಿರ್ತಾಳೆ ಕಣ್ಣೀರಲ್ಲೆ|| ಪುಸ್ತಕ ಕಿತ್ತು ಎಸ್ದೇ ಬಿಡ್ತಾರೆ ನಮ್ಮಪ್ಪ ಸಿಟ್ ಮಾಡ್ಕಂಡು ಬಸ್ ಹತ್ತಿ ಹೊರಟೇ…