ಬವಣೆ ನಮ್ಮನ್ನು ನೋಯಿಸುವುದು ಜಗವಲ್ಲ.. ಜನಗಳಲ್ಲ.. ನಮ್ಮದೇ ನಿರೀಕ್ಷೆಗಳು.! ನಮ್ಮನ್ನು ನರಳಿಸುವುದು ಕಾಲ.. ಘಟನೆಗಳಲ್ಲ.. ನಮ್ಮದೇ ಕನಸುಗಳು..! ನಮ್ಮನ್ನು ಸೋಲಿಸುವುದು ಸಮಸ್ಯೆ.. ಸವಾಲುಗಳಲ್ಲ.. ನಮ್ಮದೇ ದೌರ್ಬಲ್ಯಗಳು..! ನಮ್ಮನ್ನು ಕಣ್ಣೀರಿಡಿಸುವುದು ಕಷ್ಟ.. ಕಾರ್ಪಣ್ಯಗಳಲ್ಲ.. ನಮ್ಮದೇ ಕಾಮನೆಗಳು..! ನಿರ್ಮೋಹಿ ನಿರ್ಲಿಪ್ತರಾಗಿ ನಡೆದರಷ್ಟೆ ಇಲ್ಲಿ ನಿರಾಳ.!…
Category: ಅನುದಿನ ಕವನ
ಅನುದಿನ ಕವನ-೪೭೪, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ಈಗೀಗ ತೀರಾ ಕಷ್ಟವಾಗುತ್ತಿದೆ
ಈಗೀಗ ತೀರಾ ಕಷ್ಟವಾಗುತ್ತಿದೆ ಈಗೀಗ ತೀರಾ ಕಷ್ಟವಾಗುತ್ತಿದೆ ನನ್ನ ಬಲಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ನನ್ನ ಎಡಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ಈಗ ಎರಡೂ ವಿರುದ್ಧ ದಿಕ್ಕಿಗೆ ನೋಡ್ತಿರೋದರಿಂದಲೇ ನಾನು ಯಾವುದನ್ನೂ ನೆಟ್ಟಗೆ ನೋಡಲಿಕ್ಕಾಗ್ತಿಲ್ಲ – ಈಗೀಗಾ ತೀರಾ…
ಅನುದಿನ ಕವನ-೪೭೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ಬಳ್ಳಾರಿ ಜಿಲ್ಲೆ, ಕವನದ ಶೀರ್ಷಿಕೆ: ಇಳೆಯ ಎಲೆ
ಇಳೆಯ ಎಲೆ ಬೆವರ ಗುಂಡಿನ ಮೊಳಕೆಗೆ ನೇತಾಡುತ್ತಿವೆ ಸತ್ತ ಪದಕಗಳು ಇದಕೆ ಬೇಸತ್ತ ಎಲೆಗಳು ಒಣಗಿ ಇಳೆಗೆ ಇಳಿಯುತ್ತಿವೆ…. ಜಾಗಟೆಯ ಹಲಗೆಗೆ ನೇಸರದ ಮಂಕುತನ, ಗೊತ್ತಿಲ್ಲ, ಹೆಗಲು ಮಡಚದೆ ಎದೆಯುಬ್ಬಿ ಕಾಯುತಿದೆ ಹಣೆಬರಹದ ಬಟ್ಟೆ…. ಚುಚ್ಛುತಿದೆ ಸಮರದ ರೆಕ್ಕೆ ಚಂಡೂವಿನ ಆಶ್ವಾಸನೆಗೆ…
ಅನುದಿನ ಕವನ-೪೭೨, ಕವಿ: ಎಸ್.ಕಲಾಧರ, ಶಿಡ್ಲಘಟ್ಟ
ನನಗೆ ದಕ್ಕಿದ್ದು ನೋವಷ್ಟೇ ಇದಕ್ಕೆ ದೂರಲಾರೆ ನಾನು ಯಾರನ್ನೂ ಕೊನೆಗೆ ನನ್ನನ್ನೂ ಸ್ವಮರುಕದ ಅಸಹ್ಯ ಸಾಲುಗಳಾಗಲಿ ಅಥವಾ ಯಾರನ್ನೋ ದೂಷಿಸಿ ನೋಯಿಸುವ ದ್ವೇಷವಾಗಲಿ ನನಗೆ ಇಷ್ಟವಿಲ್ಲದ್ದು ನಿಗೂಢ ಬದುಕಿನ ಈ ಪಥದಲ್ಲಿ ಅವರವರ ಕಕ್ಷೆ ಅವರದು ಅವರವರ ಕಷ್ಟ ಅವರದು ಬಹುಷಃ…
ಅನುದಿನ ಕವನ-೪೭೧, ಕವಯತ್ರಿ:ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಬಾ ಮಳೆಯೇ ಬಾ
ಬಾ ಮಳೆಯೇ ಬಾ ಕಳೆದ ಸಾರಿ ಹೀ…ಗೇ…ಬಂದು ಹಾಗೆ ಹೋದವನು ಮತ್ತಿದೇ ಸಮಯಕ್ಕೆ ಬಂದೇ ಬರುವಿಯೆಂಬ ಕಣ್ಣ ಕಾತರದಲ್ಲಿದೆ ಮಳೆನಕ್ಷತ್ರದ ಚಾತಕಪಕ್ಷಿ. ಹೊಸ್ತಿಲಲಿ ನಿಂತೇ ಕನವರಿಕೆಗಳಲಿ ನಾನು ಹಾಡುವ ನಿನ್ನ ಹಾಡು ಕೇಳುತ್ತಿಲ್ಲವೇ ಗೆಳೆಯಾ? ಬತ್ತುತ್ತಿರುವ ನದಿಗಂತೂ ನಿನ್ನದೇ ಧ್ಯಾನ, ಗೊತ್ತೇ?…
ಅನುದಿನ ಕವನ-೪೭೦, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಅರ್ಪಣೆ
ಅರ್ಪಣೆ ಬಾಬಾಸಾಹೇಬರ ಜೀವನ ಚರಿತ್ರೆ ಬರೆಯಬೇಕಿದೆ ಎಲ್ಲಿಂದ ಬರೆಯಲಿ ಹೇಗೆ ಬರೆಯಲಿ ಯಾವ ಶೈಲಿಯ ಬಳಸಲಿ ಯಾವ ಕಾವ್ಯದ ಮಾದರಿ ಅನುಸರಿಸಲಿ ವಿದ್ಯೆಯ ಪರ್ವತವಾದುದ ಬರೆಯಲೇ ವಿನಯದ ಕೀರುತಿ ಮೆರೆದುದ ಬರೆಯಲೇ ಗಾಡಿಯಿಂದ ನೂಕಲ್ಪಟ್ಟ ದೌರ್ಜನ್ಯದ ಧೂಳ ದೂರದಿ ವಿದೇಶದಿ ಜಾತಿಯ…
ಅನುದಿನ ಕವನ-೪೬೯, ಕವಿ: ಡಾ. ಬಿ. ಆರ್. ಕೃಷ್ಣಕುಮಾರ್, ಚಾಮರಾಜನಗರ. ಕವನ್ ಶೀರ್ಷಿಕೆ: ಜೈಭೀಮ್
ಜೈ ಭೀಮ್ ಜೈ ಭೀಮ್ ಎಂದರೆ ಹಸಿರು ಬಹುಜನರ ಉಸಿರು. ಜೈ ಭೀಮ್ ಎಂದರೆ ನಲಿವು ನೋಡುವ ಕಣ್ಗಳ ಹಸಿವು. ಜೈ ಭೀಮ್ ಎಂದರೆ ಒಲವು ಸೋತ ಜನಗಳ ಗೆಲುವು. ಜೈ ಭೀಮ್ ಎಂದರೆ ಪ್ರಾಣ ಬಡವನೆದೆಯ ತ್ರಾಣ. ಜೈ ಭೀಮ್…
ಅನುದಿನ ಕವನ-೪೬೮, ಕವಿ: ಡಾ. ನೆಲ್ಲಿಕಟ್ಟಿ ಎಸ್ ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ, ಕವನದ ಶೀರ್ಷಿಕೆ: ಆತ್ಮಗೌರವದ ಆದಿತ್ಯ
ಆತ್ಮಗೌರವದ ಆದಿತ್ಯ ಆತ್ಮಗೌರವದ ಆದಿತ್ಯ ಅಂಬರಕ್ಕೆ ಹಾರಿ, ನೆಲದ ಉರಿಗೆ ಬೆಚ್ಚಿಬಿದ್ದು ಉರಿಯ ಹುಟ್ಟಾಡಗಿಸಲು ಹೋರಾಡಿದ ಧೀರನೇ|| ಭಾರತದೊಳಗಿನ ಭಗ್ನಕ್ಕೆ ಮಾನವೀಯತೆಯ ಕವಚ ತೊಡಿಸಿ ಬಾಂಧವ್ಯದ ಬೆಸುಗೆಯಲ್ಲಿ ಭವ್ಯ ಭಾರತದ ಕನಸ್ಸು ಕಂಡು ನನಸ್ಸಾಗಲು ಹಗಲಿರುಳು ಹೋರಾಡಿದ ವೀರನೇ|| ಅಕ್ಷರವೇ ಅಭಿವೃದ್ಧಿಗೆ…
ಅನುದಿನ ಕವನ: ೪೬೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ವೃದ್ಧಾಶ್ರಮ
ವೃದ್ಧಾಶ್ರಮ ನಾನೀಗ ಒಂಟಿ ಜೀವ ಜೀವಂತ ಶವ ! ಸಪ್ತಪದಿ ತುಳಿದವಳು ಈಗಿಲ್ಲ ಹೋಗಿಹಳು ದೂರ ತೀರಕೆ ಮರಳಿಬಾರದ ಲೋಕಕ್ಕೆ ನಾನೀಗ ಒಂಟಿ ಜೀವ ಒಂಟಿ ಜೀವನದ ಅನುಭವ ಯಾವುದರಲ್ಲೂ ಇಲ್ಲ ಆಸೆ ಆಸಕ್ತಿ ಆದರೂ ಬದುಕಲೇಬೇಕು ದೇಹದೊಳಗಿರುವ ತನಕ ಶಕ್ತಿ…
ಅನುದಿನಕವನ-೪೬೬, ಕವಯತ್ರಿ: ಚೇತನಾ ತೀರ್ಥ ಹಳ್ಳಿ, ಬೆಂಗಳೂರು
ಸಮ್ಮರಿನಲ್ಲೂ ಚೆಂದಕ್ಕೆ ತೊಟ್ಟ ಜಾಕೆಟ್ಟಿನಲ್ಲಿ ಹಿತವಾದ ಬೆವರು. ಮೈಗಂಟಿದ ಮೋಹಕ ಗಂಧದಲಿ ಕರಗಿ ಗಾಳಿಯಲಿ ಹರಡುತ್ತ ದಣಿದ ಘಮಲಿಗೆ ಸಿಕ್ಕು ಮಿಲನ, ಬೆಂಗಳೂರಿನ ಕಡು ಮಧ್ಯಾಹ್ನ. ಅಂಗಾತ ಚಾಚಿ ಮಲಗುವುದು, ಕಾವಲಿಯ ಮೈಮೇಲೆ ಕಾಲು ನಿಡಿದುದ್ದ ನೀಡಿ, ಹೊರಳುವಂತೆ ಕಾಲ. ಸೂರ್ಯ…