ಅನುದಿನ ಕವನ-೧೩೦೬, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ

ಕಣ್ಣಿದ್ದೂ ಕಾಣದವರಿಗೆ ಕಾಣುವ ಕಣ್ಣ ಕೊಡಿ ಸುಖವಿದ್ದೂ ದುಃಖಿಸುವವರಿಗೆ ನಿಜ ಸುಖದ ಅರಿವು ನೀಡಿ ಹೃದಯವಿದ್ದೂ ಪ್ರೀತಿಸದವರಿಗೆ ಮಮತೆಯ ಖುಷಿಯ ಅನುಭವ ನೀಡಿ ಎಲ್ಲರಲಿ ದೋಷ ಕಾಣುವವರಿಗೆ ಸರಿ ತಪ್ಪಿನ ಭೇಧದರಿವು ಕಾಣಿಸಿ ಕೋಪವೇ ಜೀವವೆನುವವಗೆ ಪ್ರೀತಿಯ ಕಂಪು ಪಸರಿಸುವ ಹೂವಾಗಿ…

ಅನುದಿನ ಕವನ-೧೩೦೫, ಹಿರಿಯ‌ ಕವಯಿತ್ರಿ:ಎಂ.ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಮಾತನಾಡುತ್ತಲೇ ಇರು   

ಮಾತನಾಡುತ್ತಲೇ ಇರು ನೀನು ಪುಟ್ಟ ಸಸಿಯೊಂದಿಗೆ ಮಾತನಾಡುತ್ತಲೇ ಇರು ಬೇರಿಳಿಸಿ, ರೆಂಬೆ ಚಾಚಿ, ಹೂ,  ಹಣ್ಣು  ಬಿಡುವವರೆಗೂ ನೀನು ನದಿಯೊಂದಿಗೆ ಮಾತನಾಡುತ್ತಲೇ ಇರು ಬಳುಕಿ, ಚಿಮ್ಮಿ, ನಗೆ  ಉಕ್ಕಿ ಕಡಲ ಸೇರುವವರೆಗೂ ನೀನು ಚುಕ್ಕಿಯೊಂದಿಗೆ ಮಾತನಾಡುತ್ತಲೇ ಇರು ಹೊಳೆದು, ಕಣ್ಣು ಹೊಡೆದು…

ಅನುದಿನ‌ ಕವನ-೧೩೦೪, ಕವಯಿತ್ರಿ: ನಿಂಗಮ್ಮ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ:ಎಲ್ಲರಂಥವನಲ್ಲ

ಎಲ್ಲರಂಥವನಲ್ಲ ತಪ್ಪು ತಡಿ ಬರೀತಾನೆ ಏನಿದು ಎಂದರೆ ತಿದ್ದು ನೀ ಅಂತಾನೆ ರಾಗವಿರದೆ ಹಾಡುತ್ತಾನೆ ಅಯ್ಯೋ ಎಂದರೆ ನೀ ಹಾಡು ಸ್ವರವೇ ಅಂತಾನೆ ಕೂಗಾಡುತಿರುತಾನೆ ಶಾಂತಿ ಮಾರಾಯ ಎಂದರೆ ಯಾರೂ ಬೇಡ ಅಂತಾನೆ ತಪ್ಪನೊಪ್ಪಿಕೋ ಎಂದರೆ ಕಿವಿ ಕೇಳುವುದಿಲ್ಲ ಅಪ್ಪಿಕೊಳ್ತಾನೆ ಹಾಗೇ…

ಅನುದಿನ ಕವನ-೧೩೦೩, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಅವಳೋ ಮರೆವಿಲ್ಲದ ನೆನಪು….

ಅವಳೋ ಮರೆವಿಲ್ಲದ ನೆನಪು…. ಅವಳೋ ನನ್ನೆದೆಗೆ ಆತುಕೊಂಡ ಹೊಂಬೆಳಕು ಅವಳೆನ್ನ ಸವಿ ಸಿಹಿ ಕನಸುಗಳ ಕಣ್ಣ ಬೊಗಸೆಯಲ್ಲಿ ತುಂಬಿ ಮಹೋನ್ನತವಾಗಿ ಬಾಳಿಗೆ ಬಂಗಾರವಾದ ಜೀವನ್ಮುಖಿ… ಅವಳ ನಗುವದು ಸುಕೋಮಲ ಸಂಜೆಗೆ ತಂಪು ಮಳೆಯಂತೆ ತಂಗಾಳಿ ಸ್ವಾದ ಅವಳ ಪಾದ ಮುತ್ತಿದ ಕಡಲೋ…

ಅನುದಿನ ಕವನ-೧೩೦೨, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಹೊಳೆ‌ ಮಗಳು, ಹೊಳೆ ಚಿತ್ರ: ಶೇಖರ್ ಗೌಳೇರ್.

ಹೊಳೆ ಮಗಳು ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಿಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು…. ಇದು ಬೆಟ್ಟ ಇದು ಗಾಳಿ ಇದು…

ಅನುದಿನ ಕವನ-೧೩೦೧, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು

ನೀನಿರುವಷ್ಟು ಹೊತ್ತು ನಾ ಖುಷಿಯಲ್ಲೇ ಇದ್ದೆ. ಈ ಭೇಟಿಯಲ್ಲಿಯೋ ರಹಸ್ಯವೇನೂ ಅಡಗಿರಲಿಲ್ಲ ನಿನ್ನೊಂದಿಗಿನ ಹಲವು ನೆನಪುಗಳಿಗೆ ನಾನಿಂದು ಸಾಕ್ಷಿ ರೋಸಿ ಹೋಗಿದ್ದ ಭಾವಗಳಿಂದು ಭಾರ ಇಳಿಸಿಕೊಳ್ಳಲು ಒಂದಿಷ್ಟಾದರೂ ಹೆಗಲಾಗಿ ಸಿಕ್ಕ ಘಳಿಗೆಗೆ ಧನ್ಯವಾದಗಳು ಎಲ್ಲಾ ಕಟ್ಟಳೆಗಳನ್ನು ಮೀರಿ ನಡೆದುಬಿಟ್ಟರೂ ಪರಿದಿಯೊಳನಿಂದ ಈಚೆ…

ಅನುದಿನ ಕವನ-೧೩೦೦, ಹಿರಿಯ ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ: ಕೇಳು ನನ್ನ ಕವಿತೆ

ಕೇಳು ನನ್ನ ಕವಿತೆ ಹೇಗಿದೆ ಎಂದು ಕೇಳಿ ಹೇಳು ಕಷ್ಟಪಟ್ಟು ಯೋಚಿಸಿ ಬರೆದ ಕವಿತೆ ಬೆನ್ನು ತಟ್ಟಿದವರೆಷ್ಟೋ ಜನ ನಾ ಬರೆದ ಕವಿತೆಗೆ ಬಂದ ಪ್ರಶಸ್ತಿಗಳೆಷ್ಟೋ ಬಹುಮಾನ ಹೊಗಳಿಕೆಗಳೆಷ್ಟೋ ನೀನರಿಯೆ ಒಮ್ಮೆ ಕೇಳು ಕಿವಿಗೊಟ್ಟು ಮನಸಿಟ್ಟು ನಾ ಬರೆದ ಕವಿತೆಯ ಬಿಸಾಡು…

ಅನುದಿನ ಕವನ-೧೨೯೯, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು

ಅವನೊಡಲ ತುಂಬಾ ನೀಲಿಯಾಗಸ ತನ್ನೆಲ್ಲಾ ಬಣ್ಣ ಸುರುವಿ ಸುಖಿಸಿದರೆ ಸಾವಿರಾರು ನದಿಗಳು ಅವನೊಳಗೇ ಕರಗಿ ಆಳದಲ್ಲೀಗ ಮುತ್ತು ರತ್ನ ಪಚ್ಚೆ ಹವಳ ಹೊಳೆದು ಅಲ್ಲೆಲ್ಲೋ ಶುದ್ಧ ಅನುರಾಗದ ರಾಗ… ಮುಂಜಾನೆಯ ಮಂಜಿನಲಿ ಸಣ್ಣಗೆ ಸೀಟಿ ಹೊಡೆದು ಜಿಗಿದು ಹೊಸ ನೋಟ ನೇಯುತ್ತಾ…

ಅನುದಿನ ಕವನ-೧೨೯೮, ಕವಯಿತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ:ನೀನಿರಬೇಕಿತ್ತು ಅಪ್ಪ

ನೀನಿರಬೇಕಿತ್ತು ಅಪ್ಪ ನೀನೇನೋ ಬಸವನಹುಳುವಿನಂತೆ ಕಪ್ಪು ರಸ್ತೆಯ ಮೇಲೆ ಹರಿದು, ಒಸಕಿಕೊಂಡ ಯಾವ ಸುಳಿವೂ ಇಲ್ಲದೇ ಕಾಣದಾದೆ ನಿನ್ನ ರಕ್ತವನ್ನೇ ಹಂಚಿಕೊಂಡ ನನ್ನ- ನೀನು ಹಿಡಿಯಲೊರಟ ಬೇಲಿ ಮೇಲಿನ ಚಿಟ್ಟೆಯಂತೆ ಮುಷ್ಟಿಯಲಿ ಇರಿಸಿಕೊಂಡಿರುವ ಈತನಿಗೂ ನಿನ್ನೊಲವ ಪರಿಮಳವ ಹೀರಿಸು ನಾನು ಕಿಟಕಿಯ…

ಅನುದಿನ‌ ಕವನ-೧೨೯೭, ಕವಿ: ಸಿದ್ಧರಾಮ‌ ಕೂಡ್ಲಿಗಿ

……….ಗೆ ಮೋಡಗಳ ಮೇಲೊಂದು ಮನೆಯ ಮಾಡಬೇಕಿದೆ ಮಳೆ ಹನಿಗಳಿಂದಲೇ ನಮಗಾಗಿ ಒಂದು ಚಂದದ ಗೂಡು ಕಟ್ಟಿಕೊಳ್ಳಬೇಕಿದೆ ನೀನು ಜೊತೆಗಿರೆ…………… ಕಾಮನಬಿಲ್ಲಿನ ಮೇಲೆ ಜಾರುವಾಟ ಆಡಬೇಕಿದೆ ಅದರ ಬಣ್ಣಗಳಿಂದಲೇ ಒಂದು ಮಾಲೆಯ ಮಾಡಿ ನಿನ್ನನಲಂಕರಿಸಬೇಕಿದೆ ನೀನು ಜೊತೆಗಿರೆ…………… ಧೂಮಕೇತುವ ಹಿಡಿದು ಸುರುಳಿ ಸುತ್ತಬೇಕಿದೆ…