ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…
Category: ಸಾಹಿತ್ಯ-ಸಂಸ್ಕೃತಿ
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯರಾಗಿ ಡಾ.ದಸ್ತಗೀರಸಾಬ್ ದಿನ್ನಿ ನೇಮಕ
ಬಳ್ಳಾರಿ, ಜು. 13: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರಾಗಿ ಸಾಹಿತಿ ರಾಯಚೂರಿನ ಡಾ. ದಸ್ತಗಿರಸಾಬ್ ದಿನ್ನಿ ಅವರು ನೇಮಕವಾಗಿದ್ದಾರೆ. ಬಳ್ಳಾರಿ ನಗರದ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ದಿನ್ನಿಅವರು ಕವಿತೆ,…
ಅನುದಿನ ಕವನ-೧೨೯೦, ಕವಿ: ಆರ್ ನಾಗರಾಜು, ಬಾಗಲಕೋಟೆ, ಕವನದ ಶೀರ್ಷಿಕೆ: ಯಾರಿವರು?
ಯಾರಿವರು? ಯಾರಿವರು ಬಾಧೆ ಹುಲ್ಲಿನ ಅರಮನೆಯಲ್ಲಿ ಜನಿಸಿ ಹರಕು ಬಟ್ಟೆಯ ಹಾಸಿಗೆಯಲ್ಲಿ ಮಲಗಿ ಅನ್ನವಿಲ್ಲದೆ ಹಸಿವನ್ನು ತಾಳಿಕೊಂಡು ಮಾಯಾ ಪ್ರಪಂಚದ ಜನರಿಗೆ ಬೇಕಾದವರು ಯಾರಿವರು ಬೀದಿ ಬೀದಿಯನ್ನು ಹಸನುಗೊಳಿಸಿ ಸಿರಿವಂತರ ಹಾದಿಗೆ ಹಾಲೆರೆದು ರಾಜಕಾರಣಿಗಳ ದಾರಿಗೆ ಹೂವು ಚೆಲ್ಲಿ ಅರೆ ಹೊಟ್ಟೆಯಲ್ಲಿ…
ಅನುದಿನ ಕವನ-೧೨೮೯, ಕವಿ: ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ತುತ್ತಿನಚೀಲ
ತುತ್ತಿನ ಚೀಲ ಹತ್ತು ಹರದಾರಿ ನಡೆದರೂ ತುತ್ತಿನ ಚೀಲ ತುಂಬಲಿಲ್ಲ ಮಡುವಿನ ನೀರು ಕುಡಿದು ಮುಗ್ಗುಲು ಜ್ವಾಳಕೆ ಕಾದು ಸವರಾತ್ರಿಗೆ ತಂದು ತಿಂದು ಮಬ್ಬು ಗತ್ತಲೆ ಸಿಳಿ ದಾರಿಗುಂಟ ಸೈನಿಕನಂತೆ ನಡೆದ ದಾರಿ ನಗುತ್ತಿತ್ತು ಹಸಿದೊಡಲ ಕಂಡು ನೆಲ ಸಿಳಿ ಒಡ್ಡಿನೊಡಲ…
ಅನುದಿನ ಕವನ-೧೨೮೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ಸಂಬಂಧಗಳೇ ಹೀಗೆ…
ಸಂಬಂಧಗಳೇ ಹೀಗೆ… ಅನುಮಾನದ ಗಾಳಿ ಬೀಸೆ ಗಂಟಾಗುವವು ಸಂಬಂಧಗಳು ಅಹಂಕಾರದ ತೊಡರು ಸೊಂಕೆ ಕಗ್ಗಂಟಾಗುವವು ಸಂಬಂಧಗಳು ಬಿಡಿಸಿದಷ್ಷೂ ಸಿಕ್ಕಾಗುವವು ಎಳೆದಾಡಿ ಎಳೆದಾಡಿದಷ್ಟೂ ಮೈಮನಗಳು ಸೋಲುವವು ಸಿಕ್ಕುಗಳು ಬೆಟ್ಟವಾಗುವವು ದಾರ ಹಳತಾದಷ್ಟು ಗಂಟು ಗಟ್ಟಿ ದ್ವೇಷ ದಪ್ಪವಾಗಿ ಆಗುವುದು ಜಟ್ಟಿ ಪ್ರೀತಿಯ ಸೂಜಿಗೆ…
ಅನುದಿನ ಕವನ-೧೨೮೭, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಒಲವ ಮೊಹರು
ಒಲವ ಮೊಹರು ಕಡು ಬಿಸಿಲಿನ ಮರದ ನೆರಳಿಗೆ ಹೀಗೆ ಎದೆಯ ಸಂಕಟಗಳ ಸುರುವ ಬಾರದಿತ್ತು ನಾನು; ಅವಳ ಮರುಳ ಮಾತಿಗೆ ಹೀಗೆ ಸುಖಾ ಸುಮ್ಮನೆ ಜಾರಬಾರದಾಗಿತ್ತು ನಾನು. ನಿಮ್ಮ ಎಳೆ ದಳಗಳಿಂದ ಹೀಗೆ ಇರಿ -ಯ ಬೇಡಿರಿ ಉಪವನದ ಹೂಗಳೇ !…
ಅನುದಿನ ಕವನ-೧೨೮೬, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಆಕಾಶ ಬಿಕ್ಕುತ್ತಿದೆ
🌧️ ಆಕಾಶ ಬಿಕ್ಕುತಿದೆ 🌩️ ಆಕಾಶ ಬಿಕ್ಕುತಿದೆ ಮುಗಿಲ ಮುಸುಕ ಮರೆಗೆ ಮಾತಿರದ ತಾರೆಗಳು ಅಡಗಿ ಕುಳಿತ ಗಳಿಗೆ. ಸೂರ್ಯ ಚಂದ್ರರಿರದೆ, ಸುರಿದ ಕಪ್ಪು ಸುತ್ತ ಚೆಲ್ಲಿ ಹಸಿರ ಉಸಿರು ಅಡಗಿ ಹೋಗಿ ಉಳಿವ ದಾರಿ ಎಲ್ಲಿ? ಕುದಿವ ಕಡಲು ಹೊರಳುತ್ತಿದೆ…
ಅನುದಿನ ಕವನ-೧೨೮೫, ಕವಿ: ಲೋಕಿ(ಲೋಕೇಶ್ ಮನ್ವಿತಾ) ಬೆಂಗಳೂರು
ಕವಿತೆಗಳು ಜೀತಕ್ಕಿಟ್ಟುಕೊಂಡಿದ್ದವು. ಬಿಡುಗಡೆ ಮಾಡಿಬಿಟ್ಟವೇ? ಸರಳುಗಳ ನಡುವೆ ಪದಗಳ ನಿರೀಕ್ಷೆ ಬೀಟ್ ಮನಸ್ಸಿನ ಲಾಟಿ ಶಬ್ದಕ್ಕೆ ತವಕವಿರಿಸಿಕೊಂಡಿದ್ದೆ ನಾಲ್ಕು ಗೋಡೆಗಳ ನಡುವೆ ಜಗವನ್ನೇ ಹರಡಿಕೊಂಡಿದ್ದೆ ಪ್ರತಿ ಗೋಡೆಯಲ್ಲೂ ನಿನ್ನದೆ ಪ್ರತಿಬಿಂಬ ಗೀಚಿ ಕೊಂಡ ಮಾರ್ಕುಗಳ ಶಾಶ್ವತತೆ ಬಣ್ಣಗಳ ಬಳೆದರೂ ಅಳಿಯದು ಮಲಗಿ…
ಅನುದಿನ ಕವನ-೧೨೮೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ,
ನೀನು ಚಂದ ಬೆಳಕು ನಮ್ಮ ಧರೆಗೆ ಭಾರತ ಭೂಮಿಗೆ ನಿನ್ನಿಂದಾನೆ ಶ್ರೇಷ್ಠ ಬದುಕು ಜನಕೆ ನಾಡಿಗೆ ಸಿಕ್ಕಿದೆ ನಮಗೆ ನೀನು ನಡೆದ ಧರಣಿ ನಮ್ಮ ಕಾಯುವ ಸದ್ಗುಣಿ ಜೈ ಭೀಮ ತೋರಿದರು ನಿಮ್ಮ ದಾರಿ ನಿನ್ನಿಂದಲೇ ಸಿಕ್ಕದೆ ನಮಗೆ ಸಮತೆ ಜಯಭೇರಿ……
ಅನುದಿನ ಕವನ-೧೨೮೨, ಹಿರಿಯ ಕವಿ: ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮಳೆ ಪದ್ಯ
ಮಳೆ ಪದ್ಯ.. ಮಧ್ಯಾಹ್ನದ ಬಿಸಿಲು ಇರುವಾಗಲೆ, ಮೋಡಗಳು ಸುತ್ತುವರಿದು ಮಳೆಯ ನೆರಳು. ಹಗುರ ಮಳೆ ಮೈ ಮೇಲೆ ಜಾರುತ್ತಿದ್ದಂತೆ ಕಣ್ಣೆದುರಿನ ಕ್ಷಣಗಳು ಅದಾಗಲೆ ನೆನಪುಗಳು. ಸಾಂತ್ವನ ಹೇಳುತ್ತ ತಬ್ಬಿ ಹಿಡಿದ ಒಂದೊಂದು ಮಳೆ ಹನಿಗೂ ಮಿಡಿಯುವ ನನ್ನ ಹೃದಯ ಬಡಿತ. ಮಳೆಯಲಿ…