ಕವಿತೆಗಳು ಜೀತಕ್ಕಿಟ್ಟುಕೊಂಡಿದ್ದವು. ಬಿಡುಗಡೆ ಮಾಡಿಬಿಟ್ಟವೇ? ಸರಳುಗಳ ನಡುವೆ ಪದಗಳ ನಿರೀಕ್ಷೆ ಬೀಟ್ ಮನಸ್ಸಿನ ಲಾಟಿ ಶಬ್ದಕ್ಕೆ ತವಕವಿರಿಸಿಕೊಂಡಿದ್ದೆ ನಾಲ್ಕು ಗೋಡೆಗಳ ನಡುವೆ ಜಗವನ್ನೇ ಹರಡಿಕೊಂಡಿದ್ದೆ ಪ್ರತಿ ಗೋಡೆಯಲ್ಲೂ ನಿನ್ನದೆ ಪ್ರತಿಬಿಂಬ ಗೀಚಿ ಕೊಂಡ ಮಾರ್ಕುಗಳ ಶಾಶ್ವತತೆ ಬಣ್ಣಗಳ ಬಳೆದರೂ ಅಳಿಯದು ಮಲಗಿ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೨೮೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ,
ನೀನು ಚಂದ ಬೆಳಕು ನಮ್ಮ ಧರೆಗೆ ಭಾರತ ಭೂಮಿಗೆ ನಿನ್ನಿಂದಾನೆ ಶ್ರೇಷ್ಠ ಬದುಕು ಜನಕೆ ನಾಡಿಗೆ ಸಿಕ್ಕಿದೆ ನಮಗೆ ನೀನು ನಡೆದ ಧರಣಿ ನಮ್ಮ ಕಾಯುವ ಸದ್ಗುಣಿ ಜೈ ಭೀಮ ತೋರಿದರು ನಿಮ್ಮ ದಾರಿ ನಿನ್ನಿಂದಲೇ ಸಿಕ್ಕದೆ ನಮಗೆ ಸಮತೆ ಜಯಭೇರಿ……
ಅನುದಿನ ಕವನ-೧೨೮೨, ಹಿರಿಯ ಕವಿ: ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮಳೆ ಪದ್ಯ
ಮಳೆ ಪದ್ಯ.. ಮಧ್ಯಾಹ್ನದ ಬಿಸಿಲು ಇರುವಾಗಲೆ, ಮೋಡಗಳು ಸುತ್ತುವರಿದು ಮಳೆಯ ನೆರಳು. ಹಗುರ ಮಳೆ ಮೈ ಮೇಲೆ ಜಾರುತ್ತಿದ್ದಂತೆ ಕಣ್ಣೆದುರಿನ ಕ್ಷಣಗಳು ಅದಾಗಲೆ ನೆನಪುಗಳು. ಸಾಂತ್ವನ ಹೇಳುತ್ತ ತಬ್ಬಿ ಹಿಡಿದ ಒಂದೊಂದು ಮಳೆ ಹನಿಗೂ ಮಿಡಿಯುವ ನನ್ನ ಹೃದಯ ಬಡಿತ. ಮಳೆಯಲಿ…
ಅನುದಿನ ಕವನ-೧೨೮೧, ಕವಿ: ಎ.ಎನ್.ರಮೇಶ್, ಗುಬ್ಬಿ.
ಇಲ್ಲಿವೆ ಬದುಕಿನ ಋಣ ಸಂದಾಯದ ಆರು ಹನಿಗವಿತೆಗಳು. ಬಾಳಿನ ಬೆಳಕಿನ ಆರಾಧನೆಯ ಭಾವಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ಅರಿವು ಅಂತಃಕರಣಗಳ ಸಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನಗಳ ಸಾಫಲ್ಯ, ಸಾರ್ಥಕ್ಯದ ವಿಸ್ತಾರವಿದೆ. ಪಡೆಯುವ, ನೀಡುವ, ನಶ್ವರವಾಗುವ, ನಶ್ವರದಲ್ಲೂ ಶಾಶ್ವತವಿರುವ ಈ ಬುವಿ-ಬದುಕಿನ ಕ್ರಿಯೆ ಪ್ರಕ್ರಿಯೆಗಳಲ್ಲಿ ಏನೆಲ್ಲ…
ಅನುದಿನ ಕವನ-೧೨೮೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ನನ್ನದೇ ನಿಘಂಟು!
ನನ್ನದೇ ನಿಘಂಟು! ನನಗೆ ನನ್ನದೇ ಒಂದು ನಿಘಂಟಿತ್ತು ಅದಕ್ಕೆ ಮಳೆಯ ಖುಷಿಯಿತ್ತು ನೆಲದ ಚೈತನ್ಯವಿತ್ತು ಹೂವಿನ ಘಮವಿತ್ತು, ಹಕ್ಕಿ ಹಾಡಿತ್ತು ವಸಂತದ ಸಂಭ್ರಮ ಬೆರಗು, ಬೆಡಗು ಎಲ್ಲವೂ ಇತ್ತು ಪ್ರತಿದಿನ, ಯಾರ್ಯಾರೋ ಪದಗಳನ್ನು ಸೇರಿಸುತ್ತಲೇ ಹೋದರು ರೋಷ, ದ್ವೇಷ, ಅಸೂಯೆ ಹೀಗೆ…
ಅನುದಿನ ಕವನ-೧೨೭೯, ಕವಯಿತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ಊರ್ಮಿಳೆಯ ಸ್ನಾನ
ಊರ್ಮಿಳೆಯ ಸ್ನಾನ ತನ್ನೊಳಗೇ ಪಿಸುಗುಟ್ಟಿಕೊಳ್ಳುತ್ತಾ ದುಗುಡ ಹೊತ್ತು , ಸಂಭಳಿಸಿಕೊಳ್ಳಲಾಗದ ಕಾಮನೆಗಳ ಭಾರ ಹೇರಿಕೆಯನ್ನು ಉಜ್ಜಿ ಉಜ್ಜಿ ತೊಳೆಯುತ್ತ ಊರ್ಮಿಳೆ ಸ್ನಾನಕ್ಕಿಳಿಯುತ್ತಾಳೆ ಕತ್ತಲ ಬಚ್ಚಲಿನ ಮರೆಯಲ್ಲಿ ಧಾರೆಧಾರೆಯಾಗಿ ಸುರಿದುಕೊಳ್ಳುವ ಅಸಂಖ್ಯಾತ ನೀರ ಹನಿಗಳು ಅವಳ ಕಣ್ಣೀರಿನೊಂದಿಗೆ ಭಾಷ್ಯ ಬರೆಯುತ್ತ ಸಂತೃಪ್ತಗೊಳ್ಳುತ್ತವೆ. ಅದೇ…
ಅನುದಿನ ಕವನ-೧೨೭೮, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ
ಮಗು ಕವಿತಾ ದಿನ ತುಂಬಿಲ್ಲ ಬರುವೆನೆಂದರೆ ಹೇಗೆ ನೀನಲ್ಲೇ ಮಾಗಿ ಬರಬೇಕು ಕಂದಾ ನನ್ನನೇಕೆ ತಡೆಯುತ್ತಿರುವೆ ಈಗಾವ ಗೋಷ್ಟಿ ಇಲ್ಲವೇನು ಬೇಕಾದಾಗ ಪ್ರಸವ ವೇದನೆ ಇಲ್ಲದೆಯೂ ಶಸ್ತ್ರಚಿಕಿತ್ಸೆಗೊಳಗಾಗಿ ಹೆತ್ತಿರುವಿಯಲ್ಲ ನನ್ನಕ್ಕಂದಿರು ಅವರೆಲ್ಲಾ ಪಕ್ವಗೊಂಡೇ ಬಂದರೇನು ತೇಪೆ ಹಾಕಿ ಬೀಗುತ್ತಿಲ್ಲವೆ ನಾನು ಬರುವೆನೆಂದರೆ…
ಅನುದಿನ ಕವನ-೧೨೭೭, ಕವಿ: ಯಲ್ಲಪ್ಪ ಹಂದ್ರಾಳ, ದೇವದುರ್ಗ, ಕವನದ ಶೀರ್ಷಿಕೆ:ಪುಟ್ಟಿಯೊಳಗೆ ಸಿಕ್ಕಿಹಾಕಿಕೊಂಡ ಹಣ್ಣಿನ ಉವಾಚ
ಪುಟ್ಟಿಯೊಳಗೆ ಸಿಕ್ಕಿಹಾಕಿಕೊಂಡ ಹಣ್ಣಿನ ಉವಾಚ ಒತ್ತೊತ್ತಾಗಿ ಕುಳಿತು ಎಂತೆಂಥವನ್ನೋ ಹೊತ್ತು ಮೆತ್ತಗಾಗುವ ಮುನ್ನ ಕೊಟ್ಟು ಬಿಡು ನೀ ನಮ್ಮ ನೀ ಕೊಟ್ಟು ಬಿಡು ನಮ್ಮ. ||ಒತ್ತೊತ್ತಾಗಿ|| ಇತ್ತಿತ್ತಲಾಗಿ ನೀನು ಉತ್ತಮವಾದದ್ದನ್ನಾಯ್ದು ಸುತ್ತ ಮೈಯನು ಕೊಯ್ದು ಉತ್ತಮವಿವೆಲ್ಲವೆಂದು ಮೆತ್ತಗ ಕರೆಯುವೆ ಗಿರಾಕಿನ || …
ಅನುದಿನ ಕವನ-೧೨೭೬, ಕವಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
ಯಶದ ಬೆನ್ನೇರಿ ಸಂತಸದ ನಲಿವಿರಲು, ಹರುಷದ ನೆಲೆಯಿರಲು, ಸೊಗಸಿನಾ ಹೊನಲಿರಲು, ನನ್ನವರೇ ಎಲ್ಲರೂ. ಯಶವಿಲ್ಲದಂದು, ದೆಸೆಯಿಲ್ಲದಂದು, ಕಗ್ಗಪ್ಪ ಸುಳಿಯಲ್ಲಿ ಮನ ಸಿಲುಕಿ ನೊಂದಂದು, ದುಃಖದ ಮಡುವಲ್ಲಿ ಎದೆ ಹುದುಗಿದಂದು, ನನ್ನವರು ಯಾರಿಲ್ಲವು… ನನದೇ ನೆರಳೂ ನನದಲ್ಲವು. ನಾನು ನನ್ನದು ಎಂಬುದ ಮಾಣಿಸಿ…
ಅನುದಿನ ಕವನ-೧೨೭೫, ಕವಯಿತ್ರಿ: ಡಾ. ಸೌಗಂಧಿಕಾ ವಿ ಜೋಯ್ಸ್, ನಂಜನಗೂಡು, ಕವನದ ಶೀರ್ಷಿಕೆ: ಪಂಚಪದಿಗಳು
ಪಂಚಪದಿಗಳು 1. ತಾ ಹೊತ್ತು ನೊಂದರೂ ವಸುಂಧರೆ ಸಹನಾಮಯಿ 2. ಆ ಸೂರ್ಯ ಕಿರಣ ಜಗವನು ಪ್ರಜ್ವಲಿಸಿದೆ 3. ನೀ ಏಕೆ ಅಂಜುವೆ ಕಾಲಚಕ್ರ ಉರುಳುವುದು ✍️-ಡಾ. ಸೌಗಂಧಿಕಾ ವಿ ಜೋಯ್ಸ್, ನಂಜನಗೂಡು ——–