ಅನುದಿನ ಕವನ-೧೨೭೬, ಕವಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಯಶದ ಬೆನ್ನೇರಿ ಸಂತಸದ ನಲಿವಿರಲು, ಹರುಷದ ನೆಲೆಯಿರಲು, ಸೊಗಸಿನಾ ಹೊನಲಿರಲು, ನನ್ನವರೇ ಎಲ್ಲರೂ. ಯಶವಿಲ್ಲದಂದು, ದೆಸೆಯಿಲ್ಲದಂದು, ಕಗ್ಗಪ್ಪ ಸುಳಿಯಲ್ಲಿ ಮನ ಸಿಲುಕಿ ನೊಂದಂದು, ದುಃಖದ ಮಡುವಲ್ಲಿ ಎದೆ ಹುದುಗಿದಂದು, ನನ್ನವರು ಯಾರಿಲ್ಲವು… ನನದೇ ನೆರಳೂ ನನದಲ್ಲವು. ನಾನು ನನ್ನದು ಎಂಬುದ ಮಾಣಿಸಿ…

ಅನುದಿನ ಕವನ-೧೨೭೫, ಕವಯಿತ್ರಿ: ಡಾ. ಸೌಗಂಧಿಕಾ ವಿ ಜೋಯ್ಸ್, ನಂಜನಗೂಡು, ಕವನದ ಶೀರ್ಷಿಕೆ: ಪಂಚಪದಿಗಳು

ಪಂಚಪದಿಗಳು 1. ತಾ ಹೊತ್ತು ನೊಂದರೂ ವಸುಂಧರೆ ಸಹನಾಮಯಿ 2. ಆ ಸೂರ್ಯ ಕಿರಣ ಜಗವನು ಪ್ರಜ್ವಲಿಸಿದೆ 3. ನೀ ಏಕೆ ಅಂಜುವೆ ಕಾಲಚಕ್ರ ಉರುಳುವುದು ✍️-ಡಾ. ಸೌಗಂಧಿಕಾ ವಿ ಜೋಯ್ಸ್, ನಂಜನಗೂಡು ——–

ಅನುದಿನ ಕವನ-೧೨೭೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ಒಳ್ಳೆಯದಾಗಲಿ ನಿಮಗೆ

ಒಳ್ಳೆಯದಾಗಲಿ ನಿಮಗೆ ಅಂದು ನೀವು ನನ್ನ ಒಬ್ಬಂಟಿಯಾಗಿಸಿ ಬಿಟ್ಟು ನಡೆದಿರಿ…. ಬದುಕಲೇಬೇಕೆಂಬ ಬಲ ಇನ್ನಷ್ಟು ಗಟ್ಟಿಯಾಯಿತು ಋಣಿಯಾಗಿರುವೆ ನಿಮಗೆ. ಅಂದು ನೀವು ನನ್ನ ಅವಮಾನಿಸದೇ ಇದ್ದರೆ… ಯಶಸ್ಸಿನ ತುತ್ತ ತುದಿಗೇರಿ ಎಲ್ಲರ ಮೆಚ್ಚುಗೆ ಗಳಿಸಲಾಗುತ್ತಿತ್ತೇ? ಧನ್ಯವಾದಗಳು ನಿಮಗೆ. ಅಂದು ನೀವು ನನ್ನ…

ಅನುದಿನ ಕವನ-೧೨೭೩, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್

ಗಜಲ್ ಕಣ್ಣೋಟದಲಿ ಮನಸೆಳೆದು ಹೃದಯ ಕೊಲ್ಲುವೆಯಲ್ಲ ರಮಣಿ ಬಿನ್ನಣವನು ತೋರುತಲಿ ನಗುವನು ಚೆಲ್ಲುವೆಯಲ್ಲ ರಮಣಿ ಅಗಣಿತ ಭಾವಗಳಿಗೆ ಮಣೆಹಾಕಿ ಪ್ರೇಮತಲ್ಪದಲಿ ಕೂರಿಸಿದೆಯೇಕೆ ಅಗಲದಂತೆ ವಲ್ಲಭನ ಕನಸುಗಳಲಿ ನಿಲ್ಲುವೆಯಲ್ಲ ರಮಣಿ ಅನುಪಮ ಸೌಂದರ್ಯದ ಗಣಿಯಾಗಿ ಮೋಹಕತೆ ತೋರಿರುವೆ ಕನಸುಗಳ ಕದಿಯುತ ನಿದಿರೆಯನು ಮೆಲ್ಲುವೆಯಲ್ಲ…

ಅನುದಿನ ಕವನ-೧೨೭೨, ಕವಿ: ರಘೋತ್ತಮ ಹೊಬ, ಮೈಸೂರು, ಕವನದ ಶೀರ್ಷಿಕೆ: ಮನು ಅಳಬೇಕು….

ಮನು ಅಳಬೇಕು…. ಪೇಟೆ ಬೀದಿಯಲ್ಲಿ ಬಿಜಿನೆಸ್ ಕಾಂಪ್ಲೆಕ್ಸ್ ನಲ್ಲಿ ಎಲ್ಲೊ ಒಂದು ಅಂಗಡಿ ಮಳಿಗೆ ಖಾಲಿಯಾದಾಗ ಅಲ್ಲಿ ನಮ್ಮವರದೊಂದು ಅಂಗಡಿ ಬರಬೇಕೆಂದು ಆಸೆ ಪಡುತ್ತೇನೆ ಸಂತೆಪೇಟೆಯಲ್ಲಿ ಸುಂದರ ಮಳಿಗೆಯೊಂದರಲ್ಲಿ ದಲಿತ ಯುವಕನೊಬ್ಬ ವ್ಯಾಪಾರ ವ್ಯವಹಾರ ಮಾಡುವುದ ಕಂಡು ಏನೋ ಸಾಧಿಸಿದ ತೃಪ್ತಿಯಿಂದ…

ಅನುದಿನ‌ಕವನ-೧೨೭೧, ಹಿರಿಯ ಕವಯಿತ್ರಿ: ಎಂ. ಆರ್.‌ಕಮಲ, ಬೆಂಗಳೂರು

ನಿಮಗೆ ಮುದಿತನ ಬರುತ್ತದೆ ನಿಮಗೆ ಮುದಿತನ ಬರುತ್ತದೆ ಕನ್ನಡಿ ನೋಡಿ ಖುಷಿ ಪಡದಿದ್ದರೆ ಹೊಸತನ್ನು ಕಲಿಯದೆ, ಕೇಳದಿದ್ದರೆ ನಿಮಗೆ ಮುದಿತನ ಬರುತ್ತದೆ ಕನಸು ಕಾಣುವುದನ್ನು ನಿಲ್ಲಿಸಿದ್ದರೆ ಪ್ರೀತಿಸುವವರೇ ಇಲ್ಲವೆಂದುಕೊಂಡರೆ ನಿಮಗೆ ಮುದಿತನ ಬರುತ್ತದೆ ಗಿಡಗಳೊಂದಿಗೆ ಗಿಡವಾಗದಿದ್ದರೆ ಹೊಸ ಬೀದಿಗಳಲ್ಲಿ ಅಲೆಯದಿದ್ದರೆ ನಿಮಗೆ…

ಅನುದಿನ‌ ಕವನ-೧೨೭೦, ಕವಿ: ಸಿದ್ದುಜನ್ನೂರ್, ಚಾಮರಾಜ‌ನಗರ, ಕವನದ ಶೀರ್ಷಿಕೆ:ಮಾನವತೆಯ ತೇರು…

ಮಾನವತೆಯ ತೇರು… ನೀನು ಮಳೆಯಂತೆ ತಂಪು ತಂಗಾಳಿ ಭುವಿಗೆ ಮನಕೆ ಜನಕೆ ನೊಂದವಗೆ ನೀನು ಹೂವಂತೆ ಸೊಗಸು ಘಮ ಧರೆಗೆ ಪ್ರೀತಿ ನಿನ್ದೆ ನಮ್ಮೆದೆಗೆ ನೀನೆ ಸಮತೆ ಹಚ್ಚಿ ಹಣತೆ ನಿಂತ ನಿನಗೆಈ ನೆಲ ಶರಣಾಗತ ನಿನಗೆ ನಿನಗೆ ಶರಣಾಗತ ಈ…

ಅನುದಿನ ಕವನ-೧೨೬೯, ಕವಯಿತ್ರಿ: ರೇಣುಕಾ ರಮಾನಂದ್,, ಅಂಕೋಲಾ, ಕವನದ ಶೀರ್ಷಿಕೆ: ಇವಳು ನನ್ನವ್ವ

ಇವಳು ನನ್ನವ್ವ ನಿಂತು ನೋಡಬಹುದು ನೀವೆಲ್ಲ…. ಪುಟ್ಟ ಪ್ಲಾಸ್ಟಿಕ್ ಬಳೆಗಳ ಪೋರಿ ಮುದ್ದು ವೈಶಾಲಿ ನನ್ನ ಮಗಳು ಇವಳು ಹುಟ್ಟಿದ ವರುಷ ಧೋ ಧೋ ಮಳೆ ಬಣಿವೆ,ಕಣಜಗಳೆಲ್ಲ ತುಂಬಿ ಗುಡ್ಡದ ಕರಿಕಾನಮ್ಮನಿಗೆ ಊರ ಗೌಡನ ಹಿಂಗಾರಗೊನೆಯ ಪೂಜೆ ರಣರಣ ಮಧ್ಯಾಹ್ನ ತುಸು…

ಅನುದಿನ ಕವನ- ೧೨೬೮, ಹಿರಿಯ ಕವಿ: ಸತ್ಯಾನಂದ ಪಾತ್ರೋಟ, ಬಾಗಲಕೋಟೆ, ಕವನದ ಶೀರ್ಷಿಕೆ: ಮಗಳು

ಮಗಳು ಮಗಳೆಂದರೆ ಇವಳು ಮಗಳು ಯಾರಿಗೂ ಆಗಿಲ್ಲ ಮಗ್ಗಲ ಮುಳ್ಳು ಇವಳು ಬೆಳ್ಳಂ ಬೆಳಗಿನ ಹೂಗನಸಿನ ಎಸಳು ಮಲ್ಲಿಗೆಯ ಮೊಗ್ಗು ಹುಟ್ಟಿದಳು, ಬೆಳೆದಳು ಬೆಳೆದು, ಬೆಳೆಯುತ್ತ ಅವರಿವರಿಗೆ ನೆರಳಾದಳು ನೆರೆ, ಹೊರೆಯವರಿಗೆ ಕಣ್ಣಾದಳು, ಕಿವಿಯಾದಳು ತನ್ನ ಮನೆಗೆ ತಾನೇ ಕಾವಲಾದಳು ತನಗೇ…

ಅನುದಿನ ಕವನ-೧೨೬೭, ಕವಿ:ಸಿದ್ದಲಿಂಗಪ್ಪ ಬೀಳಗಿ.ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧                                                         …