ಅನುದಿನ ಕವನ-೧೨೫೯, ಕವಿ: ರವೀ ಹಂಪಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಹೂವು ಅರಳುವ ಸಂಭ್ರಮ…. ಹೂವಿನ ಸಂಭ್ರಮ, ಸಂಜೆ ಕಮರುವುದು ಸಹಜ ಮಳೆಯ ಸಂಭ್ರಮ, ಭಾಷ್ಪವಾಗುವುದು ಸಹಜ ದಕ್ಕದ ಪ್ರೇಮ ಕನವರಿಕೆಯಾಗುವುದು ಸಹಜ ಕುಕ್ಕಿ ಇಕ್ಕಿದ ಕೂಳು ವಿಷವಾಗುವುದು ಸಹಜ ಸುಟ್ಟುದನೇ ಸುಟ್ಟರೆ ಪುಡಿಯಾಗುವುದು ಸಹಜ ಕಾಲ ಮೀರಿದರೆ ಖುಷಿಯೂ ಮರೆವುದು…

ಅನುದಿನ ಕವನ-೧೨೫೮, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಗದಗ,, ಕಾವ್ಯ ಪ್ರಕಾರ: ಶಾಹಿರಿ

ಶಾಯಿರಿ ೧ ವಿಳಾಸವಿಲ್ಲದ ಊರಿನಲ್ಲಿ ವಾಸ್ತವ್ಯ ನನ್ನದು ಹುಡುಕಾಡಬೇಡ ಗೆಳತಿ ಅಲ್ಲಿ ಗೋರಿಗಳ ಮನೆಗಳೆ ಹೆಚ್ಚು  ನನ್ನದು ನಿನ್ನ ಹೆಸರಿನ ಆ ಗೂಡು. ೨ ಕೆನ್ನೆಯ ಮೇಲೆ ಜಾರಿದ ಹನಿಗೆ ನಾನೆಂದೂ ಸಾಕ್ಷಿಯಾಗಲಾರೆ ಅದು ನನ್ನ ನೆನಪಿನ ಒರತೆ ಜೀನುಗಿರಬಹುದಲ್ಲವೆ? ೩…

ಅನುದಿನ ಕವನ-೧೨೫೭, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ

ಎಲ್ಲಿ ಹೋದಳೋ ಅವಳು ಭಾವಗಳ ಜೊತೆಯಲ್ಲೇ ಇರುವೆನೆಂದವಳು ನೀನಲ್ಲದೇ ಬೇರೇನಿಲ್ಲವೆಂದವಳು ನೀನೇ ನಾನೆಂದವಳು ಚೈತ್ರದ ಚಿಗುರಿನಲಿ ಜೊತೆಗಿದ್ದವಳು ಇದೀಗ ಅದೇ ನೋವಿನಲಿ ಅನುದಿನವೂ  ಕೂಗಿ ಕರೆಯುತಿಹೆನು ಅವಳಿಗದು ಕೇಳುವುದೋ ಇಲ್ಲವೋ ಉಳಿದ ಕೇಳುಗರೆಲ್ಲ ಮಾತ್ರ ಆಹಾ ! ಕೋಗಿಲೆಯ ಕಂಠವೇ ಎಂದು…

ಅನುದಿನ ಕವನ-೧೨೫೬, ಕವಿ: ಲಕ್ಷ್ಮಣ್ ವಿ. ಎ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಕನ್ನಡಕ

ಒಂದು ಕನ್ನಡಕ ಈಗಷ್ಟೇ ಲಾಠಿ ಚಾರ್ಜು ಮುಗಿದ ಬಯಲಿನಲ್ಲೊಂದು ಮುರಿದ ಕನ್ನಡಕ; ಯಾರ ಕಣ್ಣಿನಿಂದ ಜಾರಿ ಬಿದ್ದುದೋ ? ಕಾಯುತ್ತಿರಬಹುದು ಕನ್ನಡಕ ಕೂಡ ಕಳೆದು ಹೋದ ತನ್ನ ಕಣ್ಣುಗಳಿಗಾಗಿ. ಸುರಿದ ಕಣ್ಣೀರು‌ ಜಗದ ಮರೆ ಮಾಡಿ ನಕ್ಕ  ಜೀವ ಈಗ ಅಳು…

ಅನುದಿನ‌ ಕವನ-೧೨೫೫, ಕವಿ: ಚಲಂ ಹಾಡ್ಲಹಳ್ಳಿ, ಹಾಸನ.

ನಿಮಗೊಂದು ಗುಟ್ಟು ಹೇಳುವೆ ನಿಮ್ಮಲ್ಲೇ ಇರಲಿ.. ಸೊಂಟದ ತಿರುವಲ್ಲಿ ಅವಳು ಕಚಗುಳಿ ಇಟ್ಟುಕೊಂಡಿದ್ದಾಳೆ ಅಕಸ್ಮಾತ್ ಮುಟ್ಟಿದರೆ ಸಿಟ್ಟಿನ ಮುಖವಾಡ ಹಾಕುತ್ತಾಳೆ ಅದ್ಯಾಕೆ ಆ ಕಚಗುಳಿಯನ್ನು ಹಾಗೆ ಬಂದಿಸಿದ್ದಾಳೋ… ನಿಮ್ಮಲ್ಲೇ ಇರಲಿ ಒಂದಷ್ಟು ಮಾತಿನ ನಂತರ ಅಪ್ಪಿತಪ್ಪಿ ಸ್ಪರ್ಶಕ್ಕೆ ಅವಕಾಶವಾಯಿತಾದರೆ ಅವಳ ತೋಳು,…

ಅನುದಿನ ಕವನ-೧೨೫೪, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ: ನೇಗಿಲ‌ ಯೋಗಿ

ನೇಗಿಲ ಯೋಗಿ ತಾಸ್ಹೊತ್ತು ಏರಿದರೆ ಕರುಳಿನ ಚೀರಾಟ ಹಸಿವಿನ ಮದ್ದಲೆ ನುಡಿದಾಂಗ  / ದ್ಯಾವರೆ ವಾಡ್ಯಾದ ನೆರಳು ನಗೆಯಾಡಿ ! – ೧ – ಕಾಲಿಗೆ ಕಸುವಿಲ್ಲ ತೋಳಿಗೆ ಬಲುವಿಲ್ಲ ಮಾಗಿದ ಮಣ್ಣಿಗೆ ಋಣವಿಲ್ಲ / ದ್ಯಾವರೆ ಫಲವಿಲ್ಲದ ಮೋಡ ಮರಗ್ಯಾವ…

ಅನುದಿನ ಕವನ-೧೨೫೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಬುದ್ಧನಾಗುವುದೆಂದರೆ….(ಗಜ಼ಲ್)

ಬುದ್ಧನಾಗುವುದೆಂದರೆ….(ಗಜ಼ಲ್) ಯಾರೂ ನನ್ನವರಲ್ಲ ಎಂಬ ಸತ್ಯ ತಿಳಿದಾಗಲೇ ನೀ ಬುದ್ಧನಾಗುವೆ ಎಲ್ಲರೂ ನನ್ನವರೇ ಎಂಬ ಸತ್ಯ ಅರಿತಾಗಲೇ ನೀ ಬುದ್ಧನಾಗುವೆ ಲೋಕದ ದುಃಖಕೆ ಮೂಲ ಹುಡುಕಿ ಹೊರಡಬೇಕು ಬಿಡುವಿಲ್ಲದಂತೆ ಇರುವುದೆಲ್ಲವ ತೊರೆದು ನಿತಾಂತ ನಡೆದಾಗಲೇ ನೀ ಬುದ್ಧನಾಗುವೆ ಜಾತಿ-ಮತಗಳ ಹಂಗು ಹರಿದು…

ಅನುದಿನ ಕವನ-೧೨೫೨, ಹಿರಿಯ ಕವಯಿತ್ರಿ: ಎಂ.ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಮರವೊಂದು ಕವಿತೆ

ವಿಶ್ವ ಪರಿಸರ ದಿನದ ಶುಭಾಶಯಗಳೊಂದಿಗೆ, ಮರವೊಂದು ಕವಿತೆ ಒಳಗಿನ ಸಂಭ್ರಮವ ಚಿಗುರಿ ಹೊರಚೆಲ್ಲುತ್ತದೆ ನೊಂದಾಗ ಎಲೆ ಕಳಚಿಕೊಂಡು ಬೋಳಾಗಿ ನಿಲ್ಲುತ್ತದೆ ಮರವೊಂದು ಹಾಡು ಕೊಂಬೆ ಮೇಲೆ ಹಕ್ಕಿಗಳ ಸಾಲಾಗಿರಿಸಿ ತಾನೂ ಹಾಡುತ್ತದೆ ಇಲ್ಲವೇ ಗೂಡಿನಲ್ಲಿನ ಲಾಲಿ ಗೀತೆಗಳ ಬೆರಗಿನಲ್ಲಿ ಕೇಳುತ್ತದೆ ಮರವೊಂದು…

ಅನುದಿನ ಕವನ-೧೨೫೧, ಕವಿ: ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್

ತರಹೀ ಗಜಲ್ ಮಿಸ್ರಾ : ಮಹಾಂತೇಶ ನವಲಕಲ್ ( ಸತ್ತ ಪಾರಿವಾಳ ಹಿಡಿದು ) ಸತ್ತ ಪಾರಿವಾಳ ಹಿಡಿದು ಬಂದಿದ್ದಾಳೆ ಅವಳು ಮುಳ್ಳು ಮಾತುಗಳನು ಹೊತ್ತು ತಂದಿದ್ದಾಳೆ ಅವಳು. ತಣ್ಣನೆಯ ಹೂ ಮುತ್ತನಿಟ್ಟು ನಿಂತಿದ್ದಾಳೆ ಅವಳು ಹರಿವ ಯಮುನೆಯ ನೋಡುತ ಕುಂತಿದ್ದಾಳೆ…

ಅನುದಿನ ಕವನ-೧೨೫೦, ಕವಯಿತ್ರಿ: ಎಚ್.ಎಸ್.ಮುಕ್ತಾಯಕ್ಕ, ರಾಯಚೂರು, ಕವನದ ಶೀರ್ಷಿಕೆ: ಎರಡು ಕವಿತೆಗಳು…..

ಎಚ್. ಎಸ್.ಮುಕ್ತಾಯಕ್ಕ ಅವರ ಎರಡು ಕವಿತೆಗಳು 1. ನನ್ನೊಲವೆ,ಎಲ್ಲಿಯಾದರೂ ನಾವಿಬ್ಬರೇ ಹಾಡುವಂಥ ಹಾಡುಗಳಿರಬೇಕಲ್ಲವೇ? ಕನಸುಗಳನ್ನಾರಿಸುವ ಶರಧಿಯ ದಂಡೆಯಿರಬೇಕಲ್ಲವೇ? ಮತ್ತೆ, ನಾವು ಎಂದಿಗೂ ಅಗಲದಂಥ ಮಾಂತ್ರಿಕ ಕ್ಷಣಗಳಿರಬೇಕಲ್ಲವೆ? ಚಂದ್ರ ರಾತ್ರಿಯನು ಮೋಹಿಸುವಾಗ, ನಾವಿಬ್ಬರೇ ಅಲೆಯುವಂಥ ಇರುಳುಗಳಿರಬೇಕಲ್ಲವೇ ಎಲ್ಲಿಯಾದರೂ? ಯಾವ ಸರಿ ತಪ್ಪುಗಳಿರದ, ಅಗಣಿತ,…