ಅನುದಿನ ಕವನ-೧೨೪೧, ಕವಿ: ಲಕ್ಷ್ಮಿಕಾಂತ ಮಿರಜಕರ .ಶಿಗ್ಗಾಂವ, ಕಾವ್ಯ ಪ್ರಕಾರ: ಗಜಲ್

ಗಜಲ್ ಮನಸು ಮಾರಿಕೊಂಡು ಉಘೇ ಎನ್ನುವ ಭಕ್ತರಿರುವಾಗ ನಾನೇಕೆ ಹೆದರಲಿ ತಪ್ಪು ಮಾಡಿದರೂ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ ಹುಸಿ ಭ್ರಮೆಗಳ ಉನ್ಮಾದ ತೇಲಿಸುವ ಮಾರಕ ಅಮಲಿನಂತೆ ನಾನು ಹಸಿಹಸಿ ಸುಳ್ಳು ಹೇಳಿದರೂ ನಂಬಿ ಕುಣಿಯುವ ಭಕ್ತರಿರುವಾಗ ನಾನೇಕೆ ಹೆದರಲಿ…

ಅನುದಿನ ಕವನ-೧೨೪೦, ಹಿರಿಯ ಕವಯಿತ್ರಿ: ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಗೆಳತಿಯರೆ

ಗೆಳತಿಯರೆ, ಒಳಗೊಂದು ಹಾಡಿದ್ದು ಮುಚ್ಚಿಡಬಾರದು ಹಾಡಿಬಿಡಿ, ಆಕಾಶದವಕಾಶದಲಿ ತೂರಿಬಿಡಿ ಕೇಳುವವರಿಗಾಗಿ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು ಬಣ್ಣವಿದ್ದು ಅಳಿಸಬಾರದು ಜಗತ್ತಿನ ಕ್ಯಾನ್ ವಾಸಿನಲ್ಲಿ ಚಿತ್ರಿಸಿಬಿಡಿ ಮೆಚ್ಚುವವರಿಗೆಂದೂ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು ಹೂಗನಸಿದ್ದು ಬಾಡಿಸಬಾರದು ನೆಲ ಕಂಡ ಕಡೆಯೆಲ್ಲ ಬಿತ್ತಿ, ಬೆಳೆಸಿ, ಅರಳಿಸಿ ನೋಡುಗರಿಗಾಗಿ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು…

ಅನುದಿನ ಕವನ-೧೨೩೯, ಕವಯಿತ್ರಿ: ಅಂಕಲಿ ಬಸಮ್ಮ ವಡ್ಡು, ಬಳ್ಳಾರಿ, ಕವನದ ಶೀರ್ಷಿಕೆ: ಬುದ್ಧನ ಬುತ್ತಿ

ಬುದ್ಧನ ಬುತ್ತಿ ನನ್ನೊಳಗೊಬ್ಬ ಬುದ್ದ ಎದ್ದು ಬರಲಿ, ನಾನು ನನ್ನದೆಂಬ ಅಹಂ ತೊರೆದು ಸಕಲ ವಿಕಲ ಜೀವಕೋಟಿ ಸುಖ ಬಯಸಲಿ . ಬುದ್ಧ ಹಚ್ಚಿದ ದೀಪ ಸದಾ ಉರಿಯುತ್ತಿರಬೇಕು, ನನ್ನೊಳಗಿನ ಶಾಂತ ತೈಲ ದಿನ ಎರೆಯುತ್ತಿರುತ್ತೇನೆ, ನನ್ನೊಳಗಿನ ನನ್ನನ್ನು ಸದಾ ಎಚ್ಚರಗೊಳಿಸಲು,…

ಅನುದಿನ ಕವನ-೧೨೩೮, ಕವಿ: ಟಿಪಿ.ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ಗುಲ್ಮೊಹರ್…

ಗುಲ್ಮೊಹರ್… ವಿಚಿತ್ರ ಆಕರ್ಷಣೆಯೇ ಹೌದು ಅದೊಂದೇ ಭಿಕಾರಿ ಹೂವಿನ ಮೇಲೆ. ವಿಕಾರವಾದರು ಅಮಲೆ ಮಾರಿ ಕೆಂಡದುಂಡೆ ಮೇಲಿನ ನಡಿಗೆ. ಚಂದವಿಲ್ಲ ಅಂದವಿಲ್ಲ ದುಂಡು ದಂಡು ಅಳತೆಯಿಲ್ಲ ವಕ್ರ ಚಕ್ರ ರೂಪುಯಿಲ್ಲ ಹಿಡಿದು ಮುಡಿಯೆ ಒಗೆತವಿಲ್ಲ ಬಣ್ಣದೊಂದು ಕುಣಿತ ಎತ್ತರದಲಿ ಗೋಧೂಳಿ ಮಿಂಚ…

ಅನುದಿನ ಕವನ-೧೨೩೭, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್, ಚಿತ್ರ ಕೃಪೆ: ಶಿವಶಂಕರ‌ ಬಣಗಾರ, ಹೊಸಪೇಟೆ

ಗಜಲ್ ಎದೆಯೊಳಗೆ ವಿರಹದ ಸಾವಿರ ರೆಕ್ಕೆಗಳು ಫಡಫಡಿಸುತಿವೆ ಏನು ಹೇಳಲಿ ಕಂಗಳೊಳಗೆ ಅಗಲಿಕೆಯ ಅಲೆಗಳು ಭೋರ್ಗರೆಯುತಿವೆ ಏನು ಹೇಳಲಿ ನಮ್ಮಿಬ್ಬರ ನಡುವೆ ದೂರವೆಂಬುದೂ ಎಷ್ಟೊಂದು ಯಾತನೆಯ ಇರಿತ ಬುವಿ ತಾಕದ ನೋವಿನಲಿ ಮೋಡಗಳು ಅಂಡಲೆಯುತಿವೆ ಏನು ಹೇಳಲಿ ಅಡಿಗಡಿಗೆ ಕಡಲ ಅಲೆಗಳು…

ಅನುದಿನ ಕವನ-೧೨೩೬, ಕವಿ: ಆನಂದ ಸಿ ಲಕ್ಕೂರು, ಕೋಲಾರ, ಕವನದ ಶೀರ್ಷಿಕೆ:ಒಂದು ಕಪ್ ಕಾಫಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ರಿ ಪುರಸ್ಕೃತ ಯುವಕವಿ, ಸಂಶೋಧಕ, ಅನುವಾದಕ ಸಾಹಿತಿ “ಲಕ್ಕೂರು ಸಿ. ಆನಂದ” ಭಾನುವಾರ ರಾತ್ರಿ ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿಯ ಕಡಗಂಚಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಆನಂದ ಲಕ್ಕೂರ ಅವರ ‘ಒಂದು ಕಪ್ ಕಾಫಿ’ ಜನಪ್ರಿಯ ಕವಿತೆ ಪ್ರಕಟಿಸುವ ಮೂಲಕ…

ಅನುದಿನ ಕವನ-೧೨೩೫, ಹಿರಿಯ ಕವಿ: ವಿಜಯರಾಘವನ್ ರಾಮಕುಮಾರ್, ಕೋಲಾರ, ಕವನದ ಶೀರ್ಷಿಕೆ:ನನ್ನ ಕುಡಿದ ಕವನ

ನನ್ನ ಕುಡಿದ ಕವನ ಎಂದೋ ಹೋಗಿಬಿಟ್ಟ ಮತ್ತು ಚಿರಂತನ ಬದುಕಿರುವ ನನ್ನ ಪ್ರಿಯ ಗೆಳೆಯನೇ, ನೀನು ಅಂದಿನ ಆ ನಟ್ಟಿರುಳಿನಲ್ಲಿ ನಿನಗೆ ನಾನು ಅನನ್ಯ ಗಳಿಗೆಗಳ ನಮ್ಮಿಂದ ಕಸಿವ ಯಾವುದನ್ನು ನನಗೆಂದು ತರಬಾರದೆಂದು ವಿಧಿಸಿದ್ದ ಕಟ್ಟಪ್ಪಣೆಯನ್ನು ಧಿಕ್ಕರಿಸಿ ನಿನ್ನ ದೀರ್ಘ ಚರಮಗೀತೆಯ…

ಅನುದಿನ ಕವನ-೧೨೩೪, ಕವಿ: ಆರಿಫ್ ರಾಜಾ, ಇಳಕಲ್, ಕವನದ ಶೀರ್ಷಿಕೆ:ಅರ್ಧಕ್ಕೇ ನಿಂತ ಕವಿತೆ

ಅರ್ಧಕ್ಕೇ ನಿಂತ ಕವಿತೆ ಒಂದು ಚಿಟ್ಟೆಯ ರೆಕ್ಕೆ ಬಿರುಗಾಳಿಯ ದಿಕ್ಕು ಬದಲಿಸಬಲ್ಲದು ಒಂದು ಅಡ್ನಾಡಿ ಶಬ್ದ ಅರ್ಧಕ್ಕೇ ನಿಂತ ಕವಿತೆಯ ನಾಡಿ ಹಿಡಿಯಬಹುದೆ? ಶೋಕವನ್ನು ಹೃದಯದಿಂದ ಸಾವನ್ನು ಬದುಕಿನಿಂದ ಅರ್ಥವನ್ನು ಶಬ್ದಗಳಿಂದ ಅಗಲಿಸಿಬಿಟ್ಟರೆ? ರೋಷವನ್ನು ನೆತ್ತರಿನಿಂದ ಹಸಿವನ್ನು ಒಡಲಿನಿಂದ ಮನುಷ್ಯತ್ವವ ಮನುಷ್ಯನಿಂದ…

ಅನುದಿನ ಕವನ-೧೨೩೩, ಕವಿ: ಶಿವೈ(ವೈಲೇಶ.ಪಿ.ಎಸ್) ಕೊಡಗು. ಕವನದ ಶೀರ್ಷಿಕೆ:ಕೊಟ್ಟೆ ಮೆಟ್ಟಿತೇ

ಕೊಟ್ಟೆ ಮೆಟ್ಟಿತೇ ಭೋಗ ಭಾಗ್ಯವೆಲ್ಲ ಬಲ್ಲ ಭಾಗ್ಯಧಾತನಿತ್ತನಲ್ಲ ಯೋಗವಿರದ ಹಳ್ಳಕೇಕೆ ಜೋಗದೋಗ್ಯತೆ| ಈಗಲೀಗ ಹೊಟ್ಟೆಕಿಚ್ಚು ರಾಗ ದ್ವೇಷವೆಲ್ಲ ಬಿಟ್ಟು ಬೀಗದಂತೆ ಬಾಗಿದಾಗಲದುವೆ ಯೋಗ್ಯತೆ|| ಆನುತಾನುಯೇನದೇನು ನಾನುಯೆಂಬ ಹೇನು ನೀನು ಭಾನಿನಂತೆ ಬಾನತುಂಬ ಚೆಲ್ಲು ಬೆಳಗನು| ಕಾಣದಂತ ಸಕಲ ಸಿದ್ಧಿ ಕಾಣ್ವೆಯಾಗ ತಿಳಿಯೊ…

ಮನಂ-ಪದ ಸಂಪತ್ತು [ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು]

ಮನಂ-ಪದ ಸಂಪತ್ತು ಮಾಳ – ಹೊಲ, ಗದ್ದೆ, ಮೈದಾನ, ತೆರೆದ ಪ್ರದೇಶ ಸಂತೆ ಮಾಳ – ಸಂತೆ ನಡೆಯುವ ನೆಲ ಗದ್ದೆ ಮಾಳ, ರಾಗಿ ಮಾಳ, ಭತ್ತದಮಾಳ, ಮೆಣಸಿನ ಮಾಳ ಇತ್ಯಾದಿಯಾಗಿ ಮಾಳ ಗಳಿವೆ ಮಳವಳ್ಳಿಯಲ್ಲಿ ಇ ಎಲ್ಲಾ ಪದಗಳಿವೆ ಹೆಣಿನ…