ನಿನ್ನನಿಷ್ಟು ಹುಡುಕುವಾಗ ನಾನೇಷ್ಟು ಕಳೆದು ಹೋಗುತ್ತಿರುವುದು ಹೂಗಳಿಷ್ಟು ಅರಳಿ ಉದುರಿ ನೆಲದೊಲವಲ್ಲಿ ಮಿಲನಗೊಳ್ಳುತ್ತಿದ್ದರೂ ನಿನಗೊಂದಿಷ್ಟು ನೆನಪಿನ ಪರಿಮಳ ಬೀಸದಿರುವುದು ಪದಗಳಿಷ್ಟು ಹರಡಿಕೊಂಡು ನಿನಗಷ್ಟೇ ಕವಿತೆಗಳು ರೂಪುಗೊಳ್ಳುತ್ತಿದ್ದರೂ ನೀ ಓದದೆ ಇರುವುದು ಇಷ್ಟೊಂದು ಅಲೆಗಳು ದಡವ ತಲುಪುತ್ತಿದ್ದರೂ ನಿನ್ನದೊಂದು ಬೆರಳಿಗೂ ತಾಕದಿರುವುದು ಹಗಲು…
Category: ಸಾಹಿತ್ಯ-ಸಂಸ್ಕೃತಿ
ಸಿರಿಗನ್ನಡ ವೇದಿಕೆ ನೂತನ ಅಧ್ಯಕ್ಷರಾಗಿ ಜಿ.ಎಸ್.ಗೋನಾಳ್, ಕಾರ್ಯಾಧ್ಯಕ್ಷರಾಗಿ ಡಾ.ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಡಾ.ಎಂ.ಆರ್.ನಾಗರಾಜರಾವ್ ಆಯ್ಕೆ
ಬೆಂಗಳೂರು, ಮೇ 16: ಸಿರಿಗನ್ನಡ ವೇದಿಕೆ ರಾಜ್ಯ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಿರಿಗನ್ನಡ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾಗಿ ಕೊಪ್ಪಳದ ಜಿ.ಎಸ್.ಗೋನಾಳ್, ಕಾರ್ಯಾಧ್ಯಕ್ಷರಾಗಿ ಬೀದರಿನ ಡಾ..ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಬೆಂಗಳೂರಿನ ಡಾ.ಎಂ.ಆರ್.ನಾಗರಾಜರಾವ್ ಅವರು ಅವಿರೋಧವಾಗಿ…
ಅನುದಿನ ಕವನ-೧೨೩೧, ಕವಿ: ಎ.ಎನ್.ರಮೇಶ್.ಗುಬ್ಬಿ.
“ಇಲ್ಲಿವೆ ಮೂರು ಸಾಲಿನ ಆರು ಹನಿಗವಿತೆಗಳು. ಬದುಕಿನ ಅಂಗಳಕೆ ನೂರಾರು ಭಾವಾರ್ಥಗಳ ಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ನಮ್ಮ-ನಿಮ್ಮದೇ ಬದುಕು-ಬೇಗುದಿಗಳ ಅನಾವರಣವಾಗುತ್ತದೆ. ಪ್ರಸಕ್ತ ವಿದ್ಯಮಾನಗಳ ವಿಕಾರ-ವಿಕೃತಿಗಳ ವಿಶ್ವದರ್ಶನವಾಗುತ್ತದೆ. ಬೆಳಕು-ಬೆಂಕಿಯ ಆಂತರ್ಯಗಳ ಸಾಕ್ಷಾತ್ಕಾರವಾಗುತ್ತದೆ. ಬದುಕು ಬೆಂಕಿಯಾಗದೆ ಬೆಳಕಾದರಷ್ಟೆ ಬಾಳು ಸಾರ್ಥಕ್ಯ. ಜೀವ-ಜೀವನಗಳ…
ಅನುದಿನ ಕವನ-೧೨೩೦, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಬದುಕ ಅಕ್ಷರ ತಿದ್ದುತಾ…
ಬದುಕ ಅಕ್ಷರ ತಿದ್ದುತಾ… ಅವಳು ಅಕ್ಷರ ಜೋಡಿಸುತ್ತಾಳೆ ಭಾವದ ಹೊಳೆಯಲ್ಲಿ ಸಿಕ್ಕ ಮುತ್ತಿನ ಚಿಪ್ಪಂತೆ ಪದಗಳಾಗಬಹುದವು. ಅಕ್ಷರ ಓದುವ ನಿಮಗೆ ಯಾವುದೋ ಅರ್ಥ ತಗುಲಬಹುದು ತಗುಲದಿರಬಹುದು. ಅವಳ ಭಾವಕ್ಕೆ ಅಪಥ್ಯ ಬದುಕಿನ ತಪ್ಪೆಜ್ಜೆ ತಿದ್ದುವ ತಾಲೀಮಿನ ಶಬ್ದ ಮಿಡಿದಾಗಲೆಲ್ಲ ಮತ್ತೆ ಮತ್ತೆ…
ಅನುದಿನ ಕವನ-೧೨೨೯, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ, ಕವನದ ಶೀರ್ಷಿಕೆ: ಮುಖ-ಮುಖವಾಡ
ಮುಖ-ಮುಖವಾಡ ಪ್ರತಿಜ್ಞೆ ಮಾಡಿದೆ ಈಗ: ನಾನೇ ಹಾಕಿಕೊಂಡ ನನ್ನ ಮುಖಕ್ಕಂಟಿಕೊಂಡಿದ್ದ ಮುಖವಾಡಗಳ ಕಿತ್ತೊಗೆದು ನಿಜದ ನೆಲೆಯಲ್ಲಿ ನಿಲ್ಲಲು . ಒಂದೊಂದಾಗಿ ಕಿತ್ತು ಬೆಂಕಿಗೆಸೆಯುತ್ತಾ ಮುಖ ಯಾವುದು ಮುಖವಾಡ ಯಾವುದು ಎಂಬುದೇ ತಿಳಿಯದೆ ನನ್ನ ನಿಜ ಮುಖವನ್ನೇ ಕಿತ್ತೆಸೆದದ್ದು ಗೊತ್ತಾಗಲೇ ಇಲ್ಲ ನನಗೀಗ…
ಅನುದಿನ ಕವನ-೧೨೨೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಸುಖ
ಸುಖ ಸತ್ಯವನ್ನೇ ಮುಚ್ಚಿಹಾಕುವುದಾದರೆ ಬರಿ ಸುಳ್ಳಿನೊಳಗೆ ಏನು ಸುಖವಿದೆ ಹೇಳು|| ಪ್ರೀತಿಯನ್ನೇ ಕಟ್ಟಿಹಾಕುವುದಾದರೆ ಬರಿ ದ್ವೇಷದೊಳಗೆ ಏನು ಸುಖವಿದೆ ಹೇಳು|| ಮುದ ತುಂಬಿದ ಎದೆಯ ಗೂಡಲ್ಲಿ ನಿತ್ಯ ಒಲವಿನೋಕುಳಿ| ಭಾವಗಳನ್ನೇ ಕೊಲ್ಲುವುದಾದರೆ ಬರಿ ಭೋಗದೊಳಗೆ ಏನು ಸುಖವಿದೆ ಹೇಳು|| ಕೂಡಿ ಉಂಡುಟ್ಟು…
ಅನುದಿನ ಕವನ-೧೨೨೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಝಲ್
ಗಝಲ್ ಎಷ್ಟು ಪ್ರೀತಿ ಕೊಟ್ಟರೂ ಮೌನವಾಗಿ ಇರಿಯುವ ಮನಸುಗಳಿವೆ ಇಲ್ಲಿ ಬಟ್ಟೆ ಕಳಚಿದಂತೆ ಬಣ್ಣ ಒರೆಸಿಕೊಂಡಂತೆ ಬಳಸಿ ಬಿಸಾಡುವ ಮನಗಳಿವೆ ಇಲ್ಲಿ ಒಲಿದ ಜೀವವೂ ಒಮ್ಮೊಮ್ಮೆ ಒಂಟಿಯಾಗಿಸಿ ಮೋಜು ನೋಡುವುದು ಭಾವನೆಗಳ ಜೊತೆ ಚೆಲ್ಲಾಟವಾಡಿ ಚುಚ್ಚುವ ಮನಗಳಿವೆ ಇಲ್ಲಿ ಕಟ್ಟಿಕೊಂಡ ಕನಸುಗಳೆಲ್ಲ…
ಅನುದಿನ ಕವನ-೧೨೨೬, ಕವಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ:ಒಂದಿಷ್ಟು ಪ್ರಾರ್ಥನೆಗಳು
ಒಂದಿಷ್ಟು ಪ್ರಾರ್ಥನೆಗಳು ಮೋಡಗಳು ಕದಡಿ ಮಳೆ ಸುರಿಯಲಿ ಬಿದ್ದ ಮಳೆ ಬದುಕಿನ ಬೀದಿಗಿಡದಿರಲಿ…. ಅನ್ನದಾತ ಕುಣಿಕೆಗೆ ಕೊರಳೊಡ್ಡದಿರಲಿ ಮನೆಯಲ್ಲಿ ಮೂರೊತ್ತು ಒಲೆ ಉರಿಯಲಿ… ಹಸುಗೂಸು ಕಸದ ಬುಟ್ಟಿಯಲಿ ಅಳದಿರಲಿ ಹೆತ್ತವರು ವೃದ್ಧಾಶ್ರಮದ ವಿಳಾಸ ಕೇಳದಿರಲಿ… ಹೂ ಮಾರುವ ಹುಡುಗಿ ಬೀದಿ ಹೆಣವಾಗದಿರಲಿ…
ಅನುದಿನ ಕವನ-೧೨೨೫, ಕವಯಿತ್ರಿ: ವಸು ವತ್ಸಲೆ, ಬೆಂಗಳೂರು
ಎಲ್ಲೋ ಬಿದ್ದ ಬೀಜ ನಾನು ಕಲ್ಲು ಪೊಟರೆಗಳ ನಡುವಿಂದ ಸದ್ದಿಲ್ಲದೆ ಮೊಳಕೆ ಹೊಡೆದು ಚಿಗುರಿಕೊಂಡೆ ಚಿವುಟುವವರ ನಡುವೆಯೂ ತೋಳುಗಳರವಿ ನೀರು-ನಿಡಿ ಇಲ್ಲದೆ ಜೀವ ತುಂಬಿಕೊಂಡೆ ನಡು ನಡುವೆ ಆಡು ಕುರಿಗಳಿಗೂ ಕುಡಿಗಳರ್ಪಿಸಿ, ಮೆಲ್ಲೆನೆ ಗೆಲ್ಲುಗಳರಡಿದೆ ಜೋಕಾಲಿ ಜೀಗಿ ಗೆಲ್ಲುಗಳ ಮುರಿದವರಿಗೂ ಯಾವ…
ಅನುದಿನ ಕವನ-೧೨೨೪, ಹಿರಿಯ ಕವಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆಯಾಗಿಬಿಡಿ!
ಕವಿತೆಯಾಗಿಬಿಡಿ! ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು ಗಾಳಿ ಮರಗಳ ವೀಣೆ ನುಡಿಸುತ್ತೆ ಮೌನವಾಗಿ, ತಾನಕ್ಕೆ ಮುದಗೊಳ್ಳಿ ಗಾಳಿ ಗೀಳು, ಗಾಳಿ ಗೋಳು ಪದಗಳ ಕಿತ್ತೆಸೆದು ಹಾಗೇ ಕಿವಿಯೊಡ್ಡಿಕೊಳ್ಳಿ ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು…