ಕ್ಯಾಂಪ್ ಫೈರ್ ನ ಉರಿಕೆಂಡದ ಮುಂದೆ ಹಲ್ಲು ಬಿಗಿ ಹಿಡಿದು ಕೈ ಮುಂಚಾಚಿ ಚಳಿ ಕಾಯಿಸುತ್ತಾಳೆ ಆ ಚೆಲುವೆ ಒಮ್ಮೆ ತನ್ನ ಗಲ್ಲಕ್ಕೂ ಇನ್ನೊಮ್ಮೆ ಅವನ ಗಲ್ಲಕ್ಕೂ ಸಂತಸದಿ ಬೆಚ್ಚನೆಯ ಬೆರಳು ಸವರುತ್ತಾ ಕೈಕೈ ಹಿಡಿದು.. ಶಕ್ತಿ ಒಬ್ಬರಿಂದ ಒಬ್ಬರಿಗೆ ವಿನಿಮಯವಾಗುವದೊಂದು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೨೧೨, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ:ನಿನ್ನ ನೋವಿಗೆ ನೀನೆ ಔಷಧ
ನಿನ್ನ ನೋವಿಗೆ ನೀನೆ ಔಷಧ ನೋವಾದಾಗ ಹಾಡಿಬಿಡು ಇಲ್ಲಾ ಬರೆದುಬಿಡು ಹಾಡಾಗಿ ಹರಿದು ಹೋಗಲಿ ಎದೆಯೊಳಗಣ ಕಿಚ್ಚು ಕವಿತೆಯಾಗಿ ಮರೆಸಿಬಿಡಲಿ ಮನದೊಳಗಣ ಹುಚ್ಚು ಬೆಚ್ಚದಿರು, ಬೆದರದಿರು ನೆಚ್ಚಿ ನೆರಳೀವರು ನಿನ್ನಿಚ್ಚೆಯಲಿ ಹಾಡಿದಾಗ ಮೆಚ್ಚಿ ಮೈದಡವುವರು ಅಚ್ಚು ಮೆಚ್ಚಿನಲಿ.. ಕೊಚ್ಚಿ ಹೋಗದಿರು ಮೋಸದ…
ಅನುದಿನ ಕವನ-೧೨೧೧, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ:ಮೈ ಮನದ ಸುಳಿಯಲ್ಲಿ…..
ಮೈ ಮನದ ಸುಳಿಯಲ್ಲಿ….. ಶಶಿ ತೋರುಬೆರಳು ಮೊಗ್ಗಿನ ಮೈಸವರಿದಾಗ ಹೂವಿನ ಘಮಲು ಮೂಡುತ್ತಿತ್ತು ! ಕನ್ಯೆಯ ಕುಡಿನೋಟ ಬೆಳದಿಂಗಳ ಬಿದ್ಹಾಂಗ ಬೆವರಿನ ಪರಿಮಳ ಹರಡುತ್ತಿತ್ತು ! -೧ – ಕೆನ್ನೆಯ ಕನ್ನಡಿಗೆ ಹರೆಯ ನಸುನಗೆ ಕಾಡಿದರೆ ಕಣ್ಣಾನ ಗೊಂಬೆ ಮರಗುತ್ತಿತ್ತು !…
ಅನುದಿನ ಕವನ-೧೨೧೦, ಕವಿ: ಶ್ರೀ…. ಬೆಂಗಳೂರು, ಕವನದ ಶೀರ್ಷಿಕೆ: ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ…..
ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ . ಕೆದರಿದ ಕೂದಲನ್ನು ಸುಮ್ಮನೆ ಹಾಗೆ ಹಿಂದೆ ಸರಿಸಿ ಮುಡಿ ಕಟ್ಟುತ್ತಾಳೆ ಕಣ್ಣು ಕಾಡಿಗೆ ಮರೆತು ಯಾವ ಕಾಲವಾಯ್ತೊ ? ತುಟಿಗಂಟಿದ ಬಣ್ಣ ಎಲ್ಲಿ ಕಳೆದು ಹೋಯ್ತೊ ? ಕೆನ್ನೆ…
ಅನುದಿನ ಕವಿ-೧೨೦೯, ಹಿರಿಯ ಕವಿ: ಎಚ್.ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬೇಸಿಗೆ ಹೈಕುಗಳು
ಬೇಸಿಗೆ ಹೈಕುಗಳು -೧- ಬೇಸಿಗೆ ಕಾಲ ನಿನ್ನೆದೆಯ ಫ್ರಿಜ್ಜಲ್ಲಿ ತಣ್ಣಗಿರುವೆ -೨- ಬಳ್ಳಾರಿಯಲ್ಲೂ ಸೆಖೆ ಆಗುವುದಿಲ್ಲ ಸಖಿ ಇದ್ದರೆ -೩- ಕಾಯಿಸುವುದು ಪ್ರೀತಿಯ ಮಳೆಯಲ್ಲಿ ತೋಯಿಸಲಿಕ್ಕೆ -೪- ಸಹಿಸಲಾರೆ ಅವಳ ಬೆಂಕಿ ಮಾತು ಬೇಸಿಗೆ ವಾಸಿ -೫- ಅವಳು ಜೀವ ನದಿ…
ಅನುದಿನ ಕವನ-೧೨೦೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಅಮ್ಮಾ ಎಂದರೆ…
ಅಮ್ಮಾ ಎಂದರೆ… ಎಣ್ಣಿ ಹಚ್ಚಿ ತಲೆ ತಟ್ಟಿ ಮೆದುಳನು ಹದಮಾಡಿದವಳು ಕಣ್ಣು ಹುಬ್ಬನು ತೀಡಿ ದೃಷ್ಟಿಗೆ ಸೃಷ್ಟಿ ತೋರಿಸಿದವಳು. ಅಮ್ಮಾ ಎಂದರೆ.. ಜೋಗುಳ ಕಿವಿಗೆ ಕೇಳಿಸಿ ಜಗಕೆ ಜ್ಯೋತಿಯಾಗೆಂದವಳು ನಾಲಿಗೆಗೆ ನುಡಿವುದ ಕಲಿಸಿ ಅದಕೆ ಹಿತ ಮಿತದ ಮದ್ದಿಟ್ಟವಳು ಅಮ್ಮಾ ಎಂದರೆ..…
ಅನುದಿನ ಕವನ-೧೨೦೭, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಇದಲ್ಲವೇ ಪ್ರೀತಿ?
ಇದಲ್ಲವೇ ಪ್ರೀತಿ? ಯೋಚಿಸಿ ನೋಡಿ ಇದಲ್ಲವೇ ಪ್ರೀತಿಯ ರೀತಿ? ಸಾಮಾನ್ಯ ವಿಷಯಗಳಲ್ಲೂ ಇದು ದಕ್ಕುವ ರೀತಿ! ಪಿಂಗಾಣಿ ಕಪ್ಪು ಬಿಗಿಯಾಗಿ ಹಿಡಿದಿಟ್ಟುಕೊಂಡ ಕಾಫಿ ಹೆಜ್ಜೆ ಇಟ್ಟಾಗಲೆಲ್ಲ ತುಸುವೇ ತುಳುಕುತ್ತಾ ನಲಿವಂತೆ ನಾವು ಕುಳಿತಾಗಲೆಲ್ಲಾ ನಮಗಾಸರೆಯಾಗಿ ಕುರ್ಚಿಯ ನಾಲ್ಕುಕಾಲುಗಳು ಭದ್ರವಾಗಿ ನಿಲ್ಲುವಂತೆ ನಡೆದಾಡುವಾಗ…
ಅನುದಿನ ಕವನ-೧೨೦೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್, ಕವನದ ಶೀರ್ಷಿಕೆ: ಮಳೆಯ ಸದ್ದು
ಮಳೆಯ ಸದ್ದು ಇಡಿ ಆಗಸವೆಲ್ಲ ಉರಿವ ಕೆಂಡದ ಬಿಸಿಲು ಆಹಾ..! ಬಿಸಿಲೆ…! ಏನು ನಿನ್ನ ಲೀಲೆ..! ನಿನ್ನ ಝಳದ ಸಾಲೆ ಬೆವರು ತಂದಿತಲ್ಲೆ..! ಒಂದಿಷ್ಟು ಶಪಿಸಿದೆ ಮಳೆ ಛೇ…ಮಳೆ ಬರಬಾರದಿತ್ತೆ..? ಸಂಜೆಯಾಗಿತ್ತು..! ಆಗಸದ ಮೋಡಗಳು ಚದುರಿ ಮೋಡಗಳು ಕರಿಸೀರೆ ಹೊದ್ದಂತಿತ್ತು..! ಮನೆಯ…
ಅನುದಿನ ಕವನ-೧೨೦೫, ಕವಯಿತ್ರಿ: ಡಾ. ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ: ಇಳೆಯ ತಪನೆ
ಇಳೆಯ ತಪನೆ ಹೇ ಗಂಗೆಯೇ….. ಅರೆಕ್ಷಣವಾದರೂ ಪರಶಿವನೊಂದಿಗೆ ಮುನಿದು ಧರೆಗಿಳಿಯಬಾರದೆ ಇಳೆಗೆ ತಂಪಾಗಿ ಸೊಂಪಾಗಿ… ಹಸಿರಾಗಿ… ಬಸಿರಾಗಿ… ಮಡಿಲು ತುಂಬಿಕೊಳ್ಳುವಾಸೆ ಈ ಇಳೆಗೋ ಸಿರಿ ಸಂಭ್ರಮ ಮಿಂಚನ್ನೇ ವಾಡ್ಯಾಣವಾಗಿಸಿ ವೈಯಾರಿಯಾಗಿಬಿಡುವ ಬಿರು ಅಹಮಿಕೆ ವರ್ಷದ ಹನಿಗಳು ಸ್ಪರ್ಶಸಿದರೆ ಮಾತ್ರವೇ ಅರಳುವ ಕಾನನ…
ಅನುದಿನ ಕವನ-೧೨೦೪, ಕವಿ: ಜಹಾಂಗೀರ್.ಎಂಎಸ್, ಮರಿಯಮ್ಮನಹಳ್ಳಿ
ಎರೆಹುಳು ಎಂದು ಹೇಳಿ ಹೆಗಲೇರಿ ನಡು ಬೆನ್ನಿಗಿಳಿದ ಮೇಲೆ ತಾನು ಕೊಳಕು ಮಂಡಲ ಎಂದು ಉಸಿರ ಬಿಟ್ಟರೆ ಹೇಳುವುದಕ್ಕೇನಿದೆ ? ಅಜ್ಜ ಮುತ್ತಜ್ಜಂದಿರ ಕಾಲದಿಂದಲೂ ಮನುಷ್ಯ ಎರೆಹುಳು. ಕೊಳಕು ಮಂಡಲ, ಕ್ರಿಮಿ- ಕೀಟ ರೋಗ-ರುಜಿನಿ ಪೀಡೇ-ಭಾದೆಗಳೊಂದಿಗೆ ಬದುಕಿದ್ದು… ಒಪ್ಪತ್ತಿನ ಕೂಳಿಗಾಗಿ ನಾಳೆಯ…