ಎರೆಹುಳು ಎಂದು ಹೇಳಿ ಹೆಗಲೇರಿ ನಡು ಬೆನ್ನಿಗಿಳಿದ ಮೇಲೆ ತಾನು ಕೊಳಕು ಮಂಡಲ ಎಂದು ಉಸಿರ ಬಿಟ್ಟರೆ ಹೇಳುವುದಕ್ಕೇನಿದೆ ? ಅಜ್ಜ ಮುತ್ತಜ್ಜಂದಿರ ಕಾಲದಿಂದಲೂ ಮನುಷ್ಯ ಎರೆಹುಳು. ಕೊಳಕು ಮಂಡಲ, ಕ್ರಿಮಿ- ಕೀಟ ರೋಗ-ರುಜಿನಿ ಪೀಡೇ-ಭಾದೆಗಳೊಂದಿಗೆ ಬದುಕಿದ್ದು… ಒಪ್ಪತ್ತಿನ ಕೂಳಿಗಾಗಿ ನಾಳೆಯ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೨೦೩, ಕವಯಿತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ:ಅರಿವೆಂಬ ದೀವಟಿಗೆ ಹಿಡಿದಾತ
ಅರಿವೆಂಬ ದೀವಟಿಗೆ ಹಿಡಿದಾತ ಸಮಯದ ಹಿಡಿತಕ್ಕೆ ಸಿಲುಕದ ತುಡಿತಗಳೇ ಹೀಗೆ.. ಕಡುಗತ್ತಲಿನ ನಡುವೆ ಯಾರ ಕೈಗೂ ಸಿಗದ ಮಿಂಚಿನ ಹುಳದಂತೆ ಗರಿ ಬಿಚ್ಚಿ ಹಾರುತ್ತವೆ ತಮ್ಮಷ್ಟಕ್ಕೇ ತಾವೇ.. ತೊಟ್ಟ ಚಾಳೀಸಿನೊಳಗೇ ಗಡಿಗಳ ಮೀರುತ ಕಡಲಿನಾಳದ ಆಕ್ಟೋಪಸ್ ಆಗಸದಾಚೆಯ ಗ್ಯಾಲಕ್ಸಿ ಇಳೆಯ ಮೇಲಿನ…
ಅನುದಿನ ಕವನ-೧೨೦೨, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನನ್ನ ಅಂಬೇಡ್ಕರ…..
ನನ್ನ ಅಂಬೇಡ್ಕರ…. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ ಜಗತ್ತಿನೊಬ್ಬ ನಾಯಕ ನನ್ನ ಅಂಬೇಡ್ಕರ… ಜನರ ತೋರುಬೆರಳಲ್ಲಿ ದೇಶದ ಭವಿಷ್ಯದ ಬಟನ್ ಒತ್ತಿಸಿದ ಛಲಗಾರ ನನ್ನ ಅಂಬೇಡ್ಕರ… ನೀಲಿಶಾಹಿ ಹಿಡಿದು ಬಿಳಿಹಾಳೆಯ ಮೇಲೆ ಬದುಕಿನಕ್ಷರಗಳ ಮೂಡಿಸಿ ಗುಡಿಸಲಿನಲ್ಲಿ ಕತ್ತಲೆನಿಸಿ ಕುಂತ ಈ ನೆಲದ ಶೋಷಿತ ಅಸ್ಪೃಶ್ಯರಿಗೆ…
ಅನುದಿನ ಕವನ-೧೨೦೧, ಕವಿ:ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಅಪ್ಪನ ಹೆಸರಿಟ್ಟಿದ್ದೇವೆ ಮಗನಿಗೆ
ಅಪ್ಪನ ಹೆಸರಿಟ್ಟಿದ್ದೇವೆ ಮಗನಿಗೆ ನಿನ್ನೆ ನಮ್ಮ ಬುದ್ಧ ಕುಟೀರಕೆ ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು ಮನೆಯಂಗಳದಲಿ ಆಡುತಿದ್ದ ಹಾಲುಗಲ್ಲದ ಹಸುಗೂಸನೆತ್ತಿಕೊಂಡು ಸಂಕವ್ವೆ ಕೇಳಿದಳು ‘ಮಗಾ ಹೆಸರೇನೆಂದು?’ ಮಗು ‘ಭೀಮರಾವ್’ ಎಂದುಲಿಯಿತು ಆಮೇಲೆ ಅಕ್ಕ ಮಗುವಿನ ನೆತ್ತಿ ನೇವರಿಸಿ ಹಣೆಗೆ ಮುತ್ತಿಟ್ಟು ಪಡೆದ…
ಅನುದಿನ ಕವನ-೧೨೦೦, ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅಂದೇ ನನ್ನ ಜನುಮ ದಿನ
ಅಂದೇ ನನ್ನ ಜನುಮ ದಿನ ಅಂಬಲಿ ಸಿಕ್ಕಿದ್ದೇ… ಅಂಬೇಡ್ಕರರನ್ನೇ ಮರೆತಿರಿ ಸೂರು ಕಂಡಿದ್ದೇ… ಮೈಮರೆತು ನಿದ್ದೆ ಹೋದಿರಿ… ವಿದ್ಯೆ-ವಿನಯ- ಸಿದ್ಧಿ-ಸಮ್ಮಾನ ಪಡೆಯಲೇನು ಮಾಡಿದಿರಿ..? ರಥದ ಚಕ್ರಗಳು ತುಕ್ಕು ಹಿಡಿದಿವೆ ಹೊಕ್ಕು ನೋಡಿರಿ ಸೋದರರೇ… ಕೆಟ್ಟಗೆ ನೋಡಿದನೇ.. ಕೆಟ್ಟಗೆ ಆಡಿದನೇ… ಕೆಟ್ಟದು ಮಾಡಿದನೇ..…
ಇಂದು(ಏ.14) ಬಳ್ಳಾರಿಯಲ್ಲಿ ಕುಂಬಾರ ಭುವನೇಶ ಮೋಕಾ ಅವರ ಧರೆಗೆ ದೊಡ್ಡವರು ಕಥಾಸಂಕಲನ ಬಿಡುಗಡೆ
ಬಳ್ಳಾರಿ, ಏ.13: ಕಥೆಗಾರ ಕುಂಬಾರ ಭುವನೇಶ ಮೋಕಾ ಅವರ ಧರೆಗೆ ದೊಡ್ಡವರು ಕಥಾಸಂಕಲನ ಬಿಡುಗಡೆ ಸಮಾರಂಭ ಏ.14 ರಂದು ಭಾನುವಾರ ನಗರದ ರಾಘವ ಕಲಾ ಮಂದಿರದಲ್ಲಿ ಬೆ. 10-30 ಗಂಟೆಗೆ ಜರುಗಲಿದೆ. ಹಿರಿಯ ಚಿಂತಕ, ಲೋಹಿಯಾ ಪ್ರಕಾಶನದ ಸಿ. ಚನ್ನ ಬಸವಣ್ಣ…
ಅನುದಿನ ಕವನ-೧೧೯೯), ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ಅಪ್ಪಾ…..
ಅಪ್ಪಾ….. ಕಾಗಿಕಾಲು ಗುಬ್ಬಿಕಾಲುಗಳಂತೆ ಅಕ್ಷರಗಳು ಕಾಣಿಸಿದಾಗ ವಿದ್ಯಾರ್ಥಿನಿಯೊಬ್ಬಳ ಕಿವಿಗೆ ಹಳ್ಳಿಟ್ಟು ಹೆಬ್ಬೆರಳು ತೋರು ಬೆರಳುಗಳಿಂದ ಬಿಗಿಯಾಗಿ ಒತ್ತಿದಾಗ, ‘ಅಪ್ಪಾ’ ಅನ್ನುತ್ತ ನೋವು ತಾಳದೆ ವೇದನೆಯಿಂದ ಚೀರಿಕೊಂಡಳು ಜೋರಾದ ಸದ್ದಿಗೆ ಬೆಚ್ಚಿಬಿದ್ದು ‘ನಾನೇನು ನಿಮ್ಮಪ್ಪನಲ್ಲ ನೀ ಅತ್ತರೆ ಸುಮ್ಮನಿರೋಕೆ’ ಅಂದವನೇ ಮತ್ತೊಂದು ಕಿವಿಗೆ…
ಅನುದಿನ ಕವನ-೧೧೯೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಎರಡೂ ತಟಸ್ಥ!
ಎರಡೂ ತಟಸ್ಥ! ನನಗೀಗ ಹೊಳೀತು ಒಂದಂಶ ಏದುತ್ತ ಉಸಿರಿತು ಮನ ಬುದ್ಧಿಗೆ ಹುಬ್ಬೇರಿಸಿ ಕಣ್ಣರಳಿಸಿ ಬುದ್ಧಿ ಕೇಳಿತು ಅದೇನಂಥ ವಿಚಾರ ಹೇಳಬಾರದೆ ಉಸಿರೆಳೆದು ನುಂಗಿ ಎಂಜಲು ಕುಳಿತು ವಿರಾಮಾಸನದಿ ಚೊಕ್ಕಾಗಿ ಹೇಳಿತು ಮನ ಕೇಳಿಲ್ಲಿ ಚಿತ್ತವಿಟ್ಟು ಎಲ್ಲಾ ಸುಳ್ಳು ಬರಿದೆ ಏನಿಲ್ಲ…
ಅನುದಿನ ಕವನ-೧೧೯೭, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, ಚಿತ್ರ: ಸಿದ್ಧರಾಮ ಕೂಡ್ಲಿಗಿ
ಬಗೆದಷ್ಟು ಆಳ ಈ ಭುವಿ ತೆರೆದಷ್ಟು ವಿಶಾಲ ಈ ವ್ಯೋಮ ಬೇಧಿಸಬಹುದೇ ಈ ರಹಸ್ಯವ ನಿಲುಕದಷ್ಟು ನಿಗೂಢ ಈ ಬ್ರಹ್ಮಾಂಡ ಲೆಕ್ಕವಿಲ್ಲದಷ್ಟು ತಾರೆಗಳಿವೆ ಎಲ್ಲೆಲ್ಲೂ ಕತ್ತಲು ಚಂದಿರನು ಒಬ್ಬನೇ ಹಾಲು ಬೆಳದಿಂಗಳು ಒಬ್ಬನೇ ಸೂರ್ಯ ಸಾಕು ಓಡಿಸಲು ತಮಂಧವ ಏನೆಂಬೆ ಮನುಜ…
ಅನುದಿನ ಕವನ-೧೧೯೬, ಜನ ಕವಿ: ಪದ್ಮಶ್ರೀ ಡಾ.ಸಿದ್ಧಲಿಂಗಯ್ಯ, ಕವನದ ಶೀರ್ಷಿಕೆ: ಯುಗಾದಿ
ಯುಗಾದಿ ನೆಲದ ಹೆರಿಗೆಯ ನೋವು ಅಂಗುಲಂಗುಲ ಕರಗಿ ಹಸಿರು ಚಿಗುರಿನ ಕುಣಿತ ಹೂನಗೆಯ ನೋಟ ಅವಳಿ ಫಲ ತಂದಿತ್ತು ಆಕಾಶದೊರೆನಂಟು ಮರಗಿಡದ ಬಳಗಕ್ಕೆ ಉಡುಗೊರೆಯ ಹಬ್ಬ ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು ಬೆಟ್ಟಕ್ಕೆ ಎದೆಯೆತ್ತಿ ನಿಲ್ಲುವ ಧೈರ್ಯ ಹೊಳೆಯ ನೀರಿಗೆ…