ಅನುದಿನ ಕವನ-೧೧೭೭, ಹಿರಿಯ ಕವಯಿತ್ರಿ: ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಅರಳುಗಣ್ಣಿನ ಹುಡುಗಿಯ ಕರೆಯುತ್ತೇನೆ!

ಅರಳುಗಣ್ಣಿನ ಹುಡುಗಿಯ ಕರೆಯುತ್ತೇನೆ! ಕೈಕಾಲು ಸೋತಂತೆ ಅನಿಸಿ  ಕುಳಿತಾಗೆಲ್ಲ ಯಾರೂ ಮನೆಗೆ ಬರುವುದು ಬೇಡ ಎನಿಸುತ್ತದೆ ಚೈತನ್ಯ ಸೋರಿ ಖಾಲಿಯಾದ ಭಾವ ಕೋಣೆಯಲ್ಲಿ ಒಂಟಿಯಾಗಿದ್ದರೆ ಗೋಡೆಗಳೇ ವಿಚಿತ್ರ ಆಕಾರಗಳ ತಳೆಯುತ್ತವೆ, ನೆಲವೊಂದು ಆಳದ ಬಾವಿಯಂತಾಗಿ ಬಿದ್ದೇ ಹೋಗುತ್ತೇನೆಂಬ ಭಯ ಕಾಡುತ್ತದೆ ಸತ್ತಿರುವೆನೋ,…

ಅನುದಿನ ಕವನ-೧೧೭೬, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ:ಕವಿ ಮತ್ತು ಕವಿತೆ

ವಿಶ್ವ ಕಾವ್ಯ ದಿನದ ಶುಭಾಶಯಗಳು ಕವಿ ಮತ್ತು ಕವಿತೆ ಬಿರು ಬಿಸಿಲಿನ ಸೂತಕದ ಖಾಲೀ ಕಣ್ಣಿನ ಮುಗಿಲು ; ಮಾತು ಮರೆತ ಮರದ ಹಕ್ಕಿಗಳ ಬಿಕ್ಕಳಿಕೆ ಬರೆ ದುಗುಡ ದಿಗಿಲು. ಹೆರಳು ಹೆಣೆಯುತಿರುವ ಚಡಪಡಿಕೆಯ ಕೈ ಬೆರಳು; ಮಣ್ಣ ದಾರಿಯ ಮೇಲೆ…

ಅನುದಿನ ಕವನ-೧೧೭೫, ಕವಿ: ಚಲಂ ಹಾಡ್ಲಹಳ್ಳಿ, ಹಾಸನ, ಕವನದ ಶೀರ್ಷಿಕೆ: ಒಂದು ರಸ್ತೆ ನನ್ನ ಹೆತ್ತ ಊರಿಗೆ ಹೋಗುತ್ತದೆ. ಹೆತ್ತೂರಿನಿಂದ💙

ಒಂದು ರಸ್ತೆ ನನ್ನ ಹೆತ್ತ ಊರಿಗೆ ಹೋಗುತ್ತದೆ. ಹೆತ್ತೂರಿನಿಂದ…❤ ಊರೆಂದರೆ ಅಸಂಖ್ಯ ನೆನಪುಗಳು. ಸಾವಿರಾರು ಘಟನೆಗಳು ಹತ್ತಾರು ಸನ್ಮಾನಗಳ ಮೇಲೆ ನೂರಾರು ಅವಮಾನಗಳು. ಈಗ ಅಲ್ಲಿ ಬದುಕಿಲ್ಲವಾದರೂ ಊರೆಂದರೆ ಕೊನೆಗಾಲದ ಭದ್ರತಾ ಠೇವಣಿ… ನಮ್ಮವರು ತಮ್ಮವರ ನಡುವೆ ದೀಪಾವಳಿಯ ಸಂಭ್ರಮ ದೊಡ್ಡಮ್ಮನ…

ಅನುದಿನ ಕವನ-೧೧೭೪, ಕವಿ: ರಾಜೇಂದ್ರ ಪ್ರಸಾದ್, ಮಂಡ್ಯ

ಪ್ರೇಮ ಒಂದಿರದಿದ್ದರೆ ಎಷ್ಟು ನಷ್ಟ ಎಷ್ಟು ಕಷ್ಟ ಒಂದು ಕವಿತೆ ಹುಟ್ಟದಷ್ಟು ಒಂದು ಮಾತು ಉಳಿಯದಷ್ಟು ಸನಿಹ, ದೂರಗಳ ನಡುವೆ ಅಂತರ ಏನೂ ಅನಿಸದಷ್ಟು! ಕಣ್ಣಿನೊಳಗೆ ಕನಸು ಕಟ್ಟದಷ್ಟು ಎದೆಯೊಳಗೆ ಸೊಗಸು ಸಿಗದಷ್ಟು ಎಷ್ಟು ಕಷ್ಟ ಪ್ರೇಮ ಒಂದಿರದಿದ್ದರೆ ಬಣ್ಣಗಳು ಬರಿದು…

ಅನುದಿನ ಕವನ-೧೧೭೩, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಒಂದು ಹಗಲು

ಒಂದು ಹಗಲು ಬೆಳ್ಳಿ ಚುಕ್ಕಿ ಮೂಡಿದರೆ ಸಾಕು ಮುದಗೊಳ್ಳುವುದು ನವ ಚೈತನ್ಯ ತುಂಬಿ ಆಕಾಶ ಭೂಮಿ ತಂಗಾಳಿ ಬೀಸಿ ಹೊಂಬಿಸಿಲು ಕಂಗೊಳಿಸುವುದು ನಡೆದಷ್ಟು ದುಡಿದಷ್ಟು ಬಾರದು ಬೇಸರಿಕೆ ನಡು ಹೊತ್ತು ಘನ ಗಾಂಭೀರ್ಯ ಪ್ರಕಾಶಮಾನ ಸುಡು ಬಿಸಿಲು ಸಂಜೆಗೆ ಸೂರ್ಯನೇ ಕೆಂಪು…

ಅನುದಿನ ಕವನ-೧೧೭೨, ಹಿರಿಯ ಕವಿ:ಲಿಂಗಾರೆಡ್ಡಿ ಶೇರಿ, ಸೇಡಂ, ಕಲಬುರ್ಗಿ ಜಿಲ್ಲೆ, ಕವನದ ಶೀರ್ಷಿಕೆ: ಅನುದಿನವೂ….

ಅನುದಿನವೂ…. ದಿನದಿನವೂ ಹೂಗಳು ಅರಳುತ್ತವೆ , ಬಾಡುತ್ತವೆ. ಮತ್ತೆ ಮೊಗ್ಗು ಹುಟ್ಟುತ್ತವೆ , ಅರಳುತ್ತವೆ . ಏನೂ ಅನಿಸಲಿಲ್ಲ. ವರ್ಷಕ್ಕೊಮ್ಮೆ ಎಲೆಗಳು ಹಣ್ಣಾಗಿ ನೆಲಕ್ಕೆ ಉದುರಿ ಬೀಳುತ್ತವೆ ಮತ್ತೆ  ಚಿಗುರುತ್ತವೆ  . ಏನೂ ಅನಿಸಲಿಲ್ಲ . ಯಾರೋ ಒಬ್ಬ ಅರಿವುಗೇಡಿ ಟೊಂಗೆ…

ಅನುದಿನ‌ ಕವನ-೧೧೭೧, ಹಿರಿಯ ಕವಿ: ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ

ನಾನು ಎಷ್ಟೇ ಕವಿತೆ ಬರೆದರೂ ನೀವ್ಯಾರೂ ಓದುವುದಿಲ್ಲ. ನನಗೆ ಗೊತ್ತಿಲ್ಲ ನಿಮಗಿಷ್ಟದಂತೆ ಬರೆಯುವ ಕವಿತೆ. ವಿಚಿತ್ರ… ಗೊತ್ತಿದೆ ಬರೆಯುವುದು ಮಾತ್ರ. ನಿಮಗೆ ಕವಿತೆಗಳ ಬಗ್ಗೆ ಅಸಡ್ಡೆಯೆ? ಹಾಗೆಂದುಕೊಂಡರೆ ಅಂಡರೆಸ್ಟಿಮೇಟು. ಹೋಗಲಿ ನೀವು ಅರಸಿಕರೆ? ಅದೂ ಅಲ್ಲ. ನೀವು ಮೆಚ್ಚಿದ ಕವಿತೆಗಳನ್ನ ನಾನೋದಿರುವೆ.…

ಅನುದಿನ ಕವನ-೧೧೭೦, ಕವಿ: ಡಾ. ಸುರೇಶ ನೆಗಳಗುಳಿ, ಮಂಗಳೂರು, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಎಡವಟ್ಟುಗಳು

ಎಡವಟ್ಟುಗಳು ನಡೆಯುವಲ್ಲೆಲ್ಲಾ ಎಡವುತ್ತೇನೆ ಮನೆಯೊಳಗೆ ಕಾಲಿಡಲು ಹೊಸಿಲು ದಾಟುವಾಗ ಇನ್ನೇನು ಚಪ್ಪಲಿ ಹಾಕಬೇಕೆಂದು ಕಾಲು ತೂರುವಾಗ ನಡೆಯುತ್ತಾ ರಸ್ತೆ ಬದಿಯ ದೊಡ್ಡದಾದ ಫ್ಲೆಕ್ಸ್ ಅದರಲ್ಲಿ ಜೀವಂತಿಕೆ ಮೂಡಿರುವ  ಚಿತ್ರನಟಿ ಜಾಹೀರಾತಿಗೆ ಕೊಡುವ ಫೋಸು ನೋಡುತ್ತಾ ಕಾಲೆಡವಿ ಬಿದ್ದಾಗಲೇ ಗೊತ್ತಾಗುತ್ತದೆ ನಾನು ತಲಪಲಿರುವ…

ಅನುದಿನ ಕವನ-೧೧೬೯, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಸಂವಿಧಾನ

ಸಂವಿಧಾನ…. ಎಲ್ಲರೂ ಅವರವರ ಹೆಜ್ಜೆಗೆ ಬೆಳಕುಡುಕುತ್ತಿದ್ದರು ಆದರೆ ನೀನೊಬ್ಬನೆ ಭೀಮ ಕತ್ತಲ ಜನಕ್ಕೆ ಬೆಳಕಿನಕ್ಷರದ ಪುಸ್ತಕ ಬರೆದವನು… ಎಲ್ಲರು ಅವರವರ ಹಾದಿಗೆ ಬೆಳಕತ್ತಿಸಿಕೊಂಡು ಹೊರಟರು ಆದರೆ ನೀನೊಬ್ಬನೆ ಭೀಮ ಬಡವರ ಹಸಿವಿಗೆ ಬೆಳಕಿನಕ್ಷರದ ಪುಸ್ತಕವಾಗಿ ಕೈ ತುತ್ತಾದವನು… ಎಲ್ಲರು ಅವರವರ ಪಾಡಿಗೆ…

ಅನುದಿನ ಕವನ-೧೧೬೮, ಕವಿ:ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ರಾಯಚೂರು ಜಿ., ಕವನದ ಶೀರ್ಷಿಕೆ: ಮೃದು ಮನ

ಮೃದು ಮನ ಕದಡದಿರಿ ಮನವ ಕದಡದಿರಿ ದ್ವೇಷ , ವೈಷಮ್ಯ ಮಾತ್ಸರ್ಯಗಳ ಹುಚ್ಚು ಕಲ್ಪನೆ ಒಳ ಬಿತ್ತಿ ಮೃದು ಮನವನೆಂದೂ ಕದಡದಿರಿ. ಮನವೊಂದು ಜೀವ ಹಂದರ ಜಾತಿ ಧರ್ಮಗಳ ತೇಪೆ ಹಾಕದಿರಿ ಮತೀಯ ಭ್ರಾಂತಿಗೆ ಹರಿದು ದಾರ ಕರುಣೆಯ ಕೊಲೆ ಮಾಡದಿರಿ.…