ಪ್ರೀತಿ ಅಂದರೆ ಮತ್ತೇನಿಲ್ಲ ಪ್ರೀತಿ ಅಂದರೆ ಮತ್ತೇನಿಲ್ಲ ಸ್ವಾತಂತ್ರ ಕಳೆದುಕೊಳ್ಳುವುದು ಬಯಲಲ್ಲಿ ಅವಳ ಜೊತೆ ಸೇರಿ ಆಲಯವಾಗುವುದು ಪ್ರೀತಿ ಆಂದರೆ ಮತ್ತೇನಿಲ್ಲ ನಾನು ಆವಿಯಾಗಿ ಆಕಾಶದೊಳಗೆ ಲೀನವಾಗುವುದು ಕಡಲೊಳಗೆ ಬೆರೆತ ಹನಿಯಾಗುವುದು ಪ್ರೀತಿ ಅಂದರೆ ಮತ್ತೇನಿಲ್ಲ ನಾನು ಕೆಳಗಿಳಿಯುವುದು ಅವಳ ಜೊತೆ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೪೦೮, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ
ಭೃಂಗದ ಭ್ರಮರಕ್ಕೇನು ಅರ್ಥ ಹೂವಿನ ಮಕರಂದವಿಲ್ಲದಿರಲು ಮಧುವಿನ ಮಧುರ ಗಾನಕ್ಕೇನು ಅರ್ಥ ಪುಷ್ಪಗಳಲಿ ಮಾಧುರ್ಯವಿರದಿರಲು ಹೂವಿನ ಅಂದಕ್ಕೇನು ಅರ್ಥ ಪತಂಗವ ಆಕರ್ಷಿಸದಿರಲು ಮನುಜನ ಜೀವನಕ್ಕೇನು ಅರ್ಥ ಪ್ರೀತಿಯೆಂಬ ರಸವಿಲ್ಲದಿರಲು ಉಲಿವ ಹಕ್ಕಿಗಳ ಚಿಲಿಪಿಲಿಗೇನು ಅರ್ಥ ಆಲಿಸುವ ಕಿವಿಗಳಿರದಿರಲು ಆಡುವ ಮಾತಿಗೇನುಂಟು ಅರ್ಥ…
ಅನುದಿನ ಕವನ-೧೪೦೭, ಕವಯಿತ್ರಿ: ರಜನಿ ಅಶೋಕ ಜೀರಗ್ಯಾಳ, ಗೋಕಾಕ
ಗುಡಿ ಕಟ್ಟಿ ಪೂಜೆಯಮಾಡಿ ಏನು ಸಾಧಿಸಿದೆ ಅಣ್ಣ ಹಸಿದ ಹೊಟ್ಟೆ ಅಳುತಲಿದೆ ಒಂದು ಚೂರು ಕೂಳು ಹಾಕಿ ಪುಣ್ಯ ಕಟ್ಟಿ ಕೊಳ್ಳಣ್ಣ ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ ಪರಿಹಾರ ಹುಡುಕಣ್ಣ ಕೆಲಸವಿಲ್ಲದೆ ಬೀದಿಗೆ ಬಿದ್ದವರಿಗೆ ಕೆಲಸ ಕೊಡಿಸಬೇಕಣ್ಣ ರಸ್ತೆಯೆಲ್ಲ ಹಳ್ಳಕೊಳ್ಳಗಳಾಗಿವೆ ದುರಸ್ತಿ ಮಾಡಿಸಣ್ಣ…
ಅನುದಿನ ಕವನ-೧೪೦೬, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಉಸಿರಿನ ಅಲೆಗಳು ಮೌನವಾಗುವುದರೊಳಗೆ ಕಡಲನು ಅರಿಯಬೇಕಿದೆ ಸಮಯದ ಮುಳ್ಳಿನ ಗತಿ ನಿಲ್ಲುವುದರೊಳಗೆ ಕಾಲವನು ತಿಳಿಯಬೇಕಿದೆ ಸುತ್ತೆಲ್ಲ ಹಸಿರಿದ್ದರೂ ಬಿಸಿಗಾಳಿಯ ಹೊದ್ದ ಮರುಭೂಮಿಯಾಗಿದೆ ಮನ ಅಲೆಯುವ ಕಾಲುಗಳು ಕುಸಿಯುವುದರೊಳಗೆ ನಿಜ ಬದುಕನು ನೋಡಬೇಕಿದೆ ಆಗಸದ ತುಂಬೆಲ್ಲ ಒಣಮಾತು ಅಹಮಿಕೆಯ ಬಂಜೆ ಮೋಡಗಳ…
ಅನುದಿನ ಕವನ-೧೪೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಗಂಡಸರಾದ ನಮಗೆ…
ಗಂಡಸರಾದ ನಮಗೆ… ಅವಳ ನೋವ ಕುರಿತು ಹೇಳುವುದು ಎರಡು ಸಾಲಿನ ಪದ್ಯ ಗೀಚಿದಷ್ಟು ಸುಲಭವಲ್ಲ… ಪ್ರತಿ ತಿಂಗಳು ಋತುಸ್ರಾವದಿ ಅವಳು ಅನುಭವಿಸುವ ನರಕ ಸದೃಶ ನೋವು ಗಂಡಸರಾದ ನಮಗೆ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ… ಆಗಾ ಅವಳಿಗೆ ವಿಶ್ರಾಂತಿ ಬೇಕು ಸಾಂತ್ವನಬೇಕು ಹಾರೈಕೆ…
ಅನುದಿನ ಕವನ-೧೪೦೪, ಕವಿ: ಟಿ.ಪಿ. ಉಮೇಶ, ಹೊಳಲ್ಕೆರೆ
ನನ್ನ ಸಾವಿನೊಂದಿಗೆ ನಿನ್ನ ನೆನಪುಗಳ ಸಾವು! ನಮ್ಮ ಪ್ರೀತಿಗಿಲ್ಲವೇ ಸಾವು?! ನಿನ್ನ ನೆನಪುಗಳ ಚೈತನ್ಯಕ್ಕಿಲ್ಲವೇ ಸಾವು! ನಿನ್ನ ಪ್ರೀತಿಸುವುದಷ್ಟೆ ನನಗೆ ಗೊತ್ತು! ನಿನ್ನ ಒಪ್ಪಿಗೆಯದು ಕಣ್ಗಳ ಕಂಬನಿಯಲ್ಲಿ ಇತ್ತು! ಮತ್ತೇಕೆ ಮಾತಿನ ವ್ಯರ್ಥಾಲಾಪ; ಹಾಡುವೆನು ಜೀವವಿರುವವರೆಗು ಸುಮ್ಮನೇ ಕೇಳು; ನಮ್ಮ ಅಮರ…
ಅನುದಿನ ಕವನ-೧೪೦೩, ಕವಯಿತ್ರಿ: ಉಷಾ ಗೊಬ್ಬೂರ, ಕಲಬುರಗಿ, ಕವನದ ಶೀರ್ಷಿಕೆ: ತಾಯ್ನುಡಿ
ತಾಯ್ನುಡಿ ಹಚ್ಚ ಬನ್ನಿ ಕನ್ನಡದ ಹಣತೆಯ ಎಲ್ಲ ಮನೆ ಮನಗಳಲ್ಲಿ ಉಸಿರನೀವ, ಬದುಕನೀವ ಸಂಜೀವಿನಿ ಈ ನುಡಿಯು ಬರಿ ಭಾಷೆಯಲ್ಲ, ಕನ್ನಡ ಮಗುವಿನ ಸ್ವಚ್ಛಂದ ನಗು, ಅರಳುವ ಸುಮದ ಚೆಲುವು, ಮುಂಜಾವಿನ ಮಂಜ ಹನಿ, ಪರಿಶುದ್ಧ ತಿಳಿ ಎಳನೀರಂತೆ ಉಸಿರನಿತ್ತ ತಾಯ್ನುಡಿಯ…
ಅನುದಿನ ಕವನ-೧೪೦೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಮತ್ತೆ ಹುಟ್ಟುವುದಾದರೆ….
ಮತ್ತೆ ಹುಟ್ಟುವುದಾದರೆ…. ಮತ್ತೆ ಹುಟ್ಟುವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ. ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣೆ-ಗೋದಾವರಿ ಗೆಳತಿಯರು ಸಿಗಲಿ. ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ. ಕಲ್ಕತ್ತೆಯ ಕಾಳಿ ಶೃಂಗೇರಿ ಶಾರದೆಗೆ ಹೂವು-ಕುಂಕುಮ…
ಅನುದಿನ ಕವನ-೧೪೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಕನ್ನಡವೆಂದರೆ….
ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…
ಅನುದಿನ ಕವನ-೧೪೦೦, ರಾಷ್ಟ್ರಕವಿ ಡಾ.ಜಿ ಎಸ್ ಶಿವರುದ್ರಪ್ಪ, ಕವನದ ಶೀರ್ಷಿಕೆ: ನನ್ನ ಹಣತೆ
🪔ದೀಪಾವಳಿ ಹಬ್ಬದ ಶುಭಾಶಯಗಳು🪔 ನನ್ನ ಹಣತೆ ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ…