ಅನುದಿನ ಕವನ-೧೩೮೦, ಹಿರಿಯ ಕವಿ: ಎಂ.ಎಸ್.‌ರುದ್ರೇಶ್ವರ ಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮೋಹದ ಹೆಂಡತಿ

ಮೋಹದ ಹೆಂಡತಿ… ನಿನ್ನಲ್ಲಿರುವ ಗೋಲಿಗಳು ಗಾಜಿನವು ವಜ್ರದ ಹರಳುಗಳಲ್ಲ, ಎಂದರು ವಜ್ರ- ದ ವ್ಯಾಪಾರಿಗಳು ನನ್ನಲ್ಲಿರುವ ಗೋಲಿಗಳು ನಾನು ನನ್ನ ಬಾಲ್ಯದಲ್ಲಿ ಗೆಳೆಯರ ಜೊತೆ ಆಟವಾಡಿ, ಸೋತುಗೆದ್ದು; ಮನಸ್ಸಿನ ಮೂಲೆಯಲ್ಲಿ ಬಚ್ಚಿಟ್ಟುಕೊಂಡ ಅಪರೂಪದ ನೆನಪುಗಳು; ಈ ಗೋಲಿಗಳು ವ್ಯಾಪಾರಿಗಳಿಗೆ ಗಾಜಿನವು. ನನ್ನಲ್ಲಿರುವ…

ಅನುದಿನ ಕವನ-೧೩೭೯, ಕವಯಿತ್ರಿ: ಪ್ರತಿಭಾ ಪಾಟೀಲ್, ಧಾರವಾಡ, ಕವನದ ಶೀರ್ಷಿಕೆ: ಇಳೆಯ ಯಾತ್ರೆ

ಇಳೆಯ ಯಾತ್ರೆ ಹಸಿರೆಲೆಗಳ ಟೊಂಗೆಯಲಿ ರಸ ತುಂಬಿದ ಹಣ್ಣಿನ ಜಾತ್ರೆ ಮೂಡಣದಿ ರವಿ ನಗಲು ಶುರುವಾಗುವದು ಇಳೆಯ ಯಾತ್ರೆ ಹಕ್ಕಿಯ ಚಿಲಿಪಿಲಿ ರಾಗಕ್ಕೆ ಮನಸೋತು ಇಳೆಯು ಸುರಿದಿದೆ ಆನಂದ ಭಾಷ್ಪ ಇಬ್ಬನಿಯಾಗಿ ಮಬ್ಬಲಿ ತೇಲಿ ತಬ್ಬಿಕೊಂಡಿಹುದು ನಾಚುತಲೆ ಪುಷ್ಪ ಕಬ್ಬಕ್ಕಿಗಳ ಹಿಂಡು…

ಅನುದಿನ ಕವನ-೧೩೭೮, ಹಿರಿಯ ಕವಿ: ಸಿದ್ದು ಯಾಪಲಪರವಿ, ಗದಗ, ಕವನದ ಶೀರ್ಷಿಕೆ:ಉತ್ಸವಗಳಿಗಾಗಿ ಕವಿ ಆಗಿನಿ

ಉತ್ಸವಗಳಿಗಾಗಿ ಉತ್ಸಾಹದಿಂದ ಕವಿ ಆಗಿನಿ ಕವಿ ಆಗೋಣ ಬರ್ರಿ ಕೇಳೋ ಕಿವಿಗಳು ಇಲ್ಲಂದ್ರ ಏನಾತು ಉತ್ಸವಗಳಿಗೆ ಓದಾಕ ನೀವು ಛಲೋತ್ನ್ಯಾಗ ಊದರಿ ಭಾಜಾ ಭಜಂತ್ರಿನ ಭಾಳ ಛಲೋ ಟಿಎ ಕೊಡತಾರಂತ ದೊಡ್ಡ ಹೋಟೆಲ್ದಾಗ ಇಳಸ್ತಾರಂತ ಯಾರ ಕೇಳಿದ್ರೇನು ಬಿಟ್ರೇನು ವ್ಹಾ ವ್ಹಾ…

ಅನುದಿನ ಕವನ-೧೩೭೭, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲಾ, ಉತ್ತರ ಕನ್ನಡ

ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ ಬರಿದೆ ಕಾಯುವುದು ದಕ್ಕದ ಅರಿವಿದ್ದರೂ ನಿರೀಕ್ಷೆ ತಪ್ಪುವುದಿಲ್ಲ ಬರಿದೆ ಕಾಯುವುದು ಗರ್ಭಕಟ್ಟಿ ಮಗು ಜನಿಸಲು ಒಂಬತ್ತು ತಿಂಗಳಾದರು ಕಾಯಬೇಕು ತುದಿಗಾಲಲ್ಲಿ ಕಾದರೂ ಪ್ರಸವವಾಗುವುದಿಲ್ಲ ಬರಿದೆ ಕಾಯುವುದು ಒಂದು ಪಿಸುನುಡಿಗಾಗಿ ಅದೆಷ್ಟು ಕಾಲ ತಪಸ್ಸು ಮಾಡಬೇಕು ಹೇಳು ಯಾವುದೇ ಕೋರಿಕೆಯನ್ನು…

ಅನುದಿನ ಕವನ-೧೩೭೬, ಕವಿ: ವಿಲ್ಸನ್ ಕಟೀಲ್, ಮಂಗಳೂರು

ಎದೆಯಲ್ಲಿ ಕಿಚ್ಚಿತ್ತು                                                ನಾನು ಬೆಂಕಿಯ ಬಗ್ಗೆ ಬರೆದೆ   …

ಅನುದಿನ‌ ಕವನ-೧೩೭೫, ಹಿರಿಯ ಕವಿ: ನಾದಾನಂದನಾಥ ಸ್ವಾಮೀಜಿ, ಮೈಸೂರು, ಕವನದ ಶೀರ್ಷಿಕೆ: ಅಮ್ಮ

ಅಮ್ಮ ಅಮ್ಮಎಂದು ಕೂಗಿದೊಡನೆ ಓಡಿ ಬಂದು ಎತ್ತಿಕೊಂಬ ತಾಯಿಗಿಂತ ದೈವ ಉಂಟೆ ಹೇಳು ಮನುಜನೆ!! ನವಮಾಸ ಹೊತ್ತು ಕೊಂಡು ಗರ್ಭದೊಳಗೆ ಪಾಠ ಮಾಡಿ ಲೋಕದೊಳಗೆ ಬಿಟ್ಟ ತಾಯಿ ದೇವರಲ್ಲವೇ !!! ಆಸೆ ನೂರು ಇಟ್ಟುಕೊಂಡು ಬಾಳು ಪೂರ್ಣ ದುಡಿವ ತಾಯಿ ತನ್ನ…

ಅನುದಿನ ಕವನ-೧೩೭೪, ಕವಿ: ಲೋಕಿ, ಬೆಂಗಳೂರು

ಮಾತಾಡಿಕೊಂಡ ಭಾವಗಳು ಧೂಳು ಹಿಡಿದಿದ್ದು ಎದೆಗೆ ಬಾಗಿಲು ಹಾಕಿದ ಮೇಲೆ ಅರಿತ ಎದೆಯಲ್ಲೂ ನನ್ನವರ ಹುಡುಕಿಕೊಡುವ ಸಮಯವೂ ವಿನಾ ಪರೀಕ್ಷಿಸುತ್ತದೆ ಒಂಟಿಯಾಗಿಸಿ ಎಲ್ಲರೊಡನೆ ನಗುವ ಬದುಕು ಸವಾಲೇ ಸರಿ ಕಡೆ ಪಕ್ಷ ಉತ್ತೀರ್ಣನಾಗುವ ಪರಿಗೆ ಬರೆದ ಕವಿತೆ ಭಿನ್ನಾಭಿಪ್ರಾಯಗಳ ವೈರುದ್ಯಕ್ಕೆ ಪದಗಳು…

ಅನುದಿನ ಕವನ-೧೩೭೩, ಹಿರಿಯ‌ ಕವಿ: ಹುರಕಡ್ಲಿ ಶಿವಕುಮಾರ್, ಬಾಚಿಗೊಂಡನಹಳ್ಳಿ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಬೀಳ್ಕೊಂಡೆನಯ್ಯಾ…..

ಬೀಳ್ಕೊಂಡೆನಯ್ಯಾ….. ಸದಾ ಪಾಪಪುಣ್ಯವೆಂದು ವಟಗುಡುತ್ತಾ ಪೀಳಿಗೆ ಪೀಳಿಗೆಯನ್ನೇ ಭ್ರಮಾಧೀನಗೊಳಿಸುತ್ತಾ ಕತ್ತಲ ಕೋಣೆಯಲ್ಲಿ ಲೋಲಾಡುವ ಸ್ವಾಮಿಗಳನ್ನು ಕಂಡೆನಯ್ಯಾ! ಬೂಸಾ ಸಾಹಿತ್ಯವನ್ನೇ ಹೊಸೆದರೂ ವಶೀಲಿ ಬಾಜಿಯಿಂದಲೇ ಪ್ರಶಸ್ತಿ ಪಡೆದರೂ ಧೀಮಂತನಂತೆಯೇ ಪೋಜು ಕೊಡುವ ಸಾಹಿತಿಯನ್ನು ಕಂಡೆನಯ್ಯಾ! ದೇಶವನ್ನೇ ಬಾಧಿಸುವ ಬಡತನವ ನೋಡಿ ಅದರ ನಿರ್ಮೂಲನೆಗಾಗಿ…

ಅನುದಿನ ಕವನ-೧೩೭೨, ಕವಯಿತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಗುಂಗು

ಗುಂಗು ಮೆಲ್ಲಗೆ ಕರಗಲಾರಂಭಿಸಿದ್ದೇನೆ ನಿನ್ನೊಳಗೆ ಬಣ್ಣವಾಗಿ ದಿನವೂ ನಿನ್ನೊಡನಾಡುತ್ತಾ ನಿನ್ನಸ್ತಿತ್ವಕ್ಕೆ ಬೆರಗಾಗಿ ಮಾತಿಗೂ ಮೀರಿದ ಭಾವಗಳು ಸುಳಿದಾಡುತ್ತವೆ ಕಂಗಳಲ್ಲಿ ಸೋಲುವುದು ಮನ ನಿನಗೋ, ನಿನ್ನೊಳಗಿನ ಪ್ರೀತಿಗೋ ತಿಳಿಯದಿಲ್ಲಿ ಅದೆಂಥದ್ದೋ ಗುಂಗಿನ ಸೆಳೆತದಲ್ಲಿ ಕಳೆದುಹೋದಂತೆ ಸುಮ್ಮನೆ ನಿನ್ನನರಸುತ್ತದೆ ಮನ ನನಗೇ ಗೊತ್ತಿಲ್ಲದಂತೆ ಹತ್ತಿರವಿದ್ದೂ…

ಅನುದಿನ ಕವನ-೧೩೭೧, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಏನೆಂದು ಹೆಸರಿಡಲಿ!?

ಏನೆಂದು ಹೆಸರಿಡಲಿ!? ಬರಬಿದ್ದ ಮನಕೆ ಮಧುರ‌ ಮಳೆ ಸುರಿದ ಒಲವೇ.. ಮನದ ಮರುಭೂಮಿಯಲಿ ಹಸಿರುಕ್ಕುವಂತೆ ಮಾಡಿದ ಒಲವೇ.. ಉರಿಗಾಳಿಗೆ ಸಿಲುಕಿ ನೊಂದ ಜೀವಕ್ಕೆ ಸಾಂತ್ವನದ ತಂಪೆರೆದ ಒಲವೇ.. ಕತ್ತಲಾದ ಬಾಳಿಗೆ ಪ್ರೀತಿಯ ಕಿರುದೀಪ ಹಚ್ಚಿಟ್ಟ ಒಲವೇ.. ಸೋತ ಉಸಿರಿಗೆ ಭರವಸೆಯ ಹೆಗಲು…