ಅನುದಿನ‌ಕವನ-೧೪೭೧, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಜಾಗೃತ ಅಪ್ಪ

ಜಾಗೃತ ಅಪ್ಪ… ಅಪ್ಪ ನೋವುಂಡ ಒಬ್ಬ ಸಂತ ಮುಖದ ಬರೆಯಂತ ಗೆರೆಗಳೆ ಅವನ ಕಷ್ಟದ ಕುರಿತು ಹೇಳುತ್ತವೆ… ಅವನು ಬೆವರ ಬಸಿದಷ್ಟು ಇನ್ನಾರು ಕೂಡ ಬೆವರ ಬಸಿದಿಲ್ಲ ಮನೆಯಲ್ಲಿ ಅಕ್ಕಿ ಬೇಯುತ್ತಿತ್ತು ಅಂದರೆ ಅವನ ಬೆವರ ಹನಿಗಳೆ ಅನ್ನವಾಗಿ ಕುದಿಯುತಿದೆ ಎಂದರ್ಥ……

ಅನುದಿನ ಕವನ-೧೪೭೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು

1 ಅವಳು ಹಾಡುವುದನ್ನು ನಿಲ್ಲಿಸಿದಳು ಗಂಟಲು ಕಟ್ಟಿಯೇ ಹೋಯಿತು ಅವಳು ನರ್ತಿಸುವುದನ್ನು ನಿಲ್ಲಿಸಿದಳು ಕಾಲು ಜಡಗೊಂಡಿತು ಅವಳು ಬರೆಯುವುದನ್ನು ನಿಲ್ಲಿಸಿದಳು ಪದಗಳು ಪೆನ್ನಿನಲ್ಲಿ ಸಿಕ್ಕಿಕೊಂಡವು ಅವಳು ತನ್ನ ನುಡಿಯನ್ನೇ ಮರೆತಳು ಮಾತುಗಳು ಎಲ್ಲೋ ಹೂತು ಹೋದವು ವೀಣೆ ನುಡಿಸುವುದನ್ನು ನಿಲ್ಲಿಸಿದಳು ತುಕ್ಕು…

ಅನುದಿನ ಕವನ-೧೪೬೯, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅವಸ್ಥೆ

ಅವಸ್ಥೆ ತೂಕಡಿಸುವ ಅವಸ್ಥೆಯಲಿ ನ್ಯಾಯದ ವ್ಯವಸ್ಥೆ ತಲೆ ಕೆಡಿಸಿ ಸೋತಿದೆ… ಇದಕೆ ಲಂಗು ಲಗಾಮಿಲ್ಲದ ಸುತ್ತಲಿನ ಅವಸ್ಥೆ ಎಲ್ಲವನು ತಿರುಗಿಸಿ ಆಟವ ನೋಡುತಿದೆ… ಬೆಂಬಿಡದ ಕುತಂತ್ರ ಸಿದ್ಧಾಂತ ವನು ಎಳೆದು ತಳ್ಳಿ ಕಣ್ ಪ ಟ್ಟಿಯಲಿ ಕೊಂದು ಹಾಕಿ ವ್ಯಂಗ್ಯ ನಗೆಯಲಿ…

ಅನುದಿನ‌ ಕವನ-೧೪೬೮, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಬೀದಿಯ ಗೋಡೆಗೊರಗಿದ ಅವಳು ಅದೆಷ್ಟು ಭಾವಗಳನ್ನು ಬಿತ್ತುತಾಳೆ ಹದವರಿತ ಇವನೆದೆಯಲ್ಲಿ ಆತ್ಮೀಯತೆಯ ಮೊಳಕೆ ತೋರಲು ಬಹು ಸಮಯ ತೆಗೆದುಕೊಂಡಿಲ್ಲ ನೆನಪುಗಳು ಬದಲಾಗುತ್ತವೆ ಕನಸುಗಳು ಹರಿದಾಡುತ್ತವೆ ಅವಳಿಷ್ಟದ ಬಣ್ಣ ಇವನಿಷ್ಟದ ಹೂವು ಕೊನೆಗೆ ಆಗಸದ ತಾರೆಗಳೂ ಸಾಗರನ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುವ ಮಾತು…

ಅನುದಿನ ಕವನ-೧೪೬೭, ಕವಿ: ರವೀ ಜಿ ಹಂಪಿ,  ಕವನದ ಶೀರ್ಷಿಕೆ: ಇಂತಿ ನಿನ್ನ ಗುಲಾಮ

ಇಂತಿ ನಿನ್ನ ಗುಲಾಮ ಪ್ರೀತಿಸಿದ ಹೊಸತರಲ್ಲಿ ನಾನು ಪ್ರತಿ ಪತ್ರವನ್ನೂ “ಇಂತಿ ನಿನ್ನ ಗುಲಾಮ” ಎಂಬ ಒಕ್ಕಣಿಕೆಯಿಂದಲೇ ಮುಗಿಸುತ್ತಿದ್ದರಿಂದಲೋ ಏನೋ. ನಿನ್ನ ಕಣ್ಣುಗಳಿಗೆ ನನ್ನ ಪ್ರೀತಿ ಚಷ್ಮಾ ತೊಡಿಸಿ ಹಗಲಿರುಳೂ ನಿನ್ನ ಜಗತ್ತನ್ನು ಗುಲಾಬಿಯಾಗಿರಿಸಿದ್ದ- ಕಾರಣದಿಂದಲೋ ಏನೋ ಸಮಯ ಕಳೆದಂತೆ ಗುಲಾಮಗಿರಿ…

ಅನುದಿನ ಕವನ-೧೪೬೬, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್, ಕವನದ ಶೀರ್ಷಿಕೆ:ಅವನೆಂದೂ ಕವಿತೆಯಾಗಲಾರ

ಅವನೆಂದೂ ಕವಿತೆಯಾಗಲಾರ ನನ್ನಂತೆ ಪ್ರೀತಿಸುವ ಪ್ರೀತಿಯ ಧಾರೆಯನ್ನೆ ಹರಿಸುವ ತಾ ಕವಿಯಾಗಿ ಖುಷಿಯಿಂದ ನನ್ನ ಕವಿತೆಯಾಗಿಸುತಲಿರುವ ಆದರೂ ಅವ ಎಂದೂ ಕವಿತೆಯಾಗಲಾರ ಉಕ್ಕುಕ್ಕಿ ಬರುವ ಭಾವಗಳ ಹೆಕ್ಕಿ ಹೆಕ್ಕಿ ತೋರಿಸುತಿರುವ ಕ್ಷಣ ಕಾಲ ಅಗಲಿ ಇರೆನೆಂದು ಗುಕ್ಕುತಲೆ ತಡವರಿಸುತಿರುವ ಆದರೂ ಕವಿತೆಯಾಗಲಾರ…

ಅನುದಿನ ಕವನ-೧೪೬೫, ಕವಯಿತ್ರಿ: ಇಂಧು ಕೊತ್ವಾಲ್ ಕನ್ನಡಕ್ಕೆ :ಮಂಜುಳ ಕಿರುಗಾವಲು, ಮಂಡ್ಯ, ಕವನದ ಶೀರ್ಷಿಕೆ: ನೀ ಕಲಿಯುಗದ ‘ರಾಧೆ’

ನೀ ಕಲಿಯುಗದ ‘ರಾಧೆ’ ನೀ ಪೂಜ್ಯಳಾಗುವುದಿಲ್ಲ ನಿನ್ನ ಪ್ರೇಮ ಎಷ್ಟೇ ಅಲೌಕಿಕ ಮತ್ತು ನೈತಿಕವಾದರೂ ದೈಹಿಕವಾಗಿ ಅಳೆಯಲಾಗುವುದು ನೀ ಸ್ನೇಹ ಬಯಸುವುದಾದರೆ ಅವ ಪ್ರೇಮ ಬಯಸುವ, ನೀ ನಿನ್ನಾತ್ಮವನೇ ಸಮರ್ಪಿಸಿದರೂ ಅವ ದೇಹಾಘಾತ ನೀಡುವ ಸಂಪೂರ್ಣ ಸಮರ್ಪಿತಳಾದರೂ ನೀ ರಾಧೆಯೇ ಹೊರತು…

ಅನುದಿನ ಕವನ-೧೪೬೪, ಕವಯಿತ್ರಿ: ಸಬಿತಾ ಬನ್ನಾಡಿ, ಕುಂದಾಪುರ, ಕವನದ ಶೀರ್ಷಿಕೆ: ಅವ್ವ

ಅವ್ವ ಮರವಾಗಿ ಚಿಗಿತಿದ್ದಾಳೆ ಮೈತುಂಬಾ ಹೂಬಿಟ್ಟು ನಳನಳಿಸುತ್ತಿದ್ದಾಳೆ ಎಸೆದ ಕಲ್ಲುಗಳ ಕಟ್ಟೆಯಾಗಿಸಿದಳು ತೂರಿದ ಮಣ್ಣುಗಳ ಬುಡವಾಗಿಸಿದಳು ಎರಚಿದ ಸಗಣಿಯ ಸಾರವಾಗಿಸಿದಳು ಅವ್ವ ಸಾವಿತ್ರವ್ವ ಬಿತ್ತಿದ ಬಿತ್ತುಗಳಿಗೆ ತಿಳಿವಿನ ನೀರುಣಿಸಿ ಮರದ ಎಲೆ ಎಲೆಯಲ್ಲೂ ಅವಳ ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಮರಿ ಮರಿ…

ಅನುದಿನ ಕವನ-೧೪೬೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕೊರಗು ನನ್ನ‌ ಸ್ವತ್ತು….

ಕೊರಗು ನನ್ನ ಸೊತ್ತು…… ನೋಡ್ತಿದ್ದೆ ಈಗೀಗ ಬುದ್ಧಿಯ ತಳಮಳ ಚಡಪಡಿಕೆ ಅಡಿಗಡಿಗೆ ಬಲು ನಿರ್ಲಿಪ್ತ ಮನದ ಮೊಗ ಬಲು ನಿಶ್ಯಬ್ದ ಮೌನ ತಳವಿಲ್ಲದು ಮೌನ ಕೆದರಿ ಕೆದಕದೆ ನಾನೂ ಹುಯಿಲು ಒಮ್ಮೆಲೆ ಮನವರಳಿ ಇದೇನು ಕಿರಿಚಾಟ ಕುಣಿದಾಟ ನಿಶ್ಯಬ್ದ ತುಂಬ ಶಬ್ದ…

ಅನುದಿನ‌ಕವನ-೧೪೬೨, ಕವಿ: ಸಿದ್ದು‌ ಜನ್ನೂರು, ಚಾಮರಾಜ‌ನಗರ, ಕವನದ ಶೀರ್ಷಿಕೆ: ಮಗಳು

ಹೊಸ ವರುಷದ ಹೊಸ ಕವಿತೆ ‘ಮಗಳು’ ಮಲ್ಲಿಗೆ ಹೂ ಪರಿಮಳದಂತೆ ನಿನ್ನ ನಗೆ ಹೊಸ ವರುಷದ ಹೊಸ ಹಾಡಿನ ಸಾಲು ನಿನ್ನ ನಗೆ… ನೀ ಎನಗೆ ಸಂಭ್ರಮ ಗರಿಗೆದರಿ ಹಬ್ಬಿದ ಮಳೆಬಿಲ್ಲು ಬಾನ್ನೀಲಿಯಲ್ಲಿ ಕೊನೆಯಿಲ್ಲದ ಬಣ್ಣಗಳ ತೋರಣ ತಿಳಿಗೊಳದಲ್ಲಿ ಕೊನೆ ಇರದಷ್ಟು…