ಅನುದಿನ ಕವನ-೪೭೧, ಕವಯತ್ರಿ:ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಬಾ ಮಳೆಯೇ ಬಾ

ಬಾ ಮಳೆಯೇ ಬಾ ಕಳೆದ ಸಾರಿ ಹೀ…ಗೇ…ಬಂದು ಹಾಗೆ ಹೋದವನು ಮತ್ತಿದೇ ಸಮಯಕ್ಕೆ ಬಂದೇ ಬರುವಿಯೆಂಬ ಕಣ್ಣ ಕಾತರದಲ್ಲಿದೆ ಮಳೆ‌ನಕ್ಷತ್ರದ ಚಾತಕಪಕ್ಷಿ. ಹೊಸ್ತಿಲಲಿ ನಿಂತೇ ಕನವರಿಕೆಗಳಲಿ ನಾನು ಹಾಡುವ ನಿನ್ನ ಹಾಡು ಕೇಳುತ್ತಿಲ್ಲವೇ ಗೆಳೆಯಾ? ಬತ್ತುತ್ತಿರುವ ನದಿಗಂತೂ ನಿನ್ನದೇ ಧ್ಯಾನ, ಗೊತ್ತೇ?…

ಅನುದಿನ‌ ಕವನ-೪೭೦, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಅರ್ಪಣೆ

ಅರ್ಪಣೆ ಬಾಬಾಸಾಹೇಬರ ಜೀವನ ಚರಿತ್ರೆ ಬರೆಯಬೇಕಿದೆ ಎಲ್ಲಿಂದ ಬರೆಯಲಿ ಹೇಗೆ ಬರೆಯಲಿ ಯಾವ ಶೈಲಿಯ ಬಳಸಲಿ ಯಾವ ಕಾವ್ಯದ ಮಾದರಿ ಅನುಸರಿಸಲಿ ವಿದ್ಯೆಯ ಪರ್ವತವಾದುದ ಬರೆಯಲೇ ವಿನಯದ ಕೀರುತಿ ಮೆರೆದುದ ಬರೆಯಲೇ ಗಾಡಿಯಿಂದ ನೂಕಲ್ಪಟ್ಟ ದೌರ್ಜನ್ಯದ ಧೂಳ ದೂರದಿ ವಿದೇಶದಿ ಜಾತಿಯ…

ಅನುದಿನ‌ ಕವನ-೪೬೯, ಕವಿ: ಡಾ. ಬಿ. ಆರ್. ಕೃಷ್ಣಕುಮಾರ್, ಚಾಮರಾಜನಗರ. ಕವನ್ ಶೀರ್ಷಿಕೆ: ಜೈಭೀಮ್

ಜೈ ಭೀಮ್ ಜೈ ಭೀಮ್ ಎಂದರೆ ಹಸಿರು ಬಹುಜನರ ಉಸಿರು. ಜೈ ಭೀಮ್ ಎಂದರೆ ನಲಿವು ನೋಡುವ ಕಣ್ಗಳ ಹಸಿವು. ಜೈ ಭೀಮ್ ಎಂದರೆ ಒಲವು ಸೋತ ಜನಗಳ ಗೆಲುವು. ಜೈ ಭೀಮ್ ಎಂದರೆ ಪ್ರಾಣ ಬಡವನೆದೆಯ ತ್ರಾಣ. ಜೈ ಭೀಮ್…

ಅನುದಿನ‌ ಕವನ-೪೬೮, ಕವಿ: ಡಾ. ನೆಲ್ಲಿಕಟ್ಟಿ ಎಸ್ ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ, ಕವನದ ಶೀರ್ಷಿಕೆ: ಆತ್ಮಗೌರವದ ಆದಿತ್ಯ

ಆತ್ಮಗೌರವದ ಆದಿತ್ಯ ಆತ್ಮಗೌರವದ ಆದಿತ್ಯ ಅಂಬರಕ್ಕೆ ಹಾರಿ, ನೆಲದ ಉರಿಗೆ ಬೆಚ್ಚಿಬಿದ್ದು ಉರಿಯ ಹುಟ್ಟಾಡಗಿಸಲು ಹೋರಾಡಿದ ಧೀರನೇ|| ಭಾರತದೊಳಗಿನ ಭಗ್ನಕ್ಕೆ ಮಾನವೀಯತೆಯ ಕವಚ ತೊಡಿಸಿ ಬಾಂಧವ್ಯದ ಬೆಸುಗೆಯಲ್ಲಿ ಭವ್ಯ ಭಾರತದ ಕನಸ್ಸು ಕಂಡು ನನಸ್ಸಾಗಲು ಹಗಲಿರುಳು ಹೋರಾಡಿದ ವೀರನೇ|| ಅಕ್ಷರವೇ ಅಭಿವೃದ್ಧಿಗೆ…

ಅನುದಿನ ಕವನ: ೪೬೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ವೃದ್ಧಾಶ್ರಮ

ವೃದ್ಧಾಶ್ರಮ ನಾನೀಗ ಒಂಟಿ ಜೀವ ಜೀವಂತ ಶವ ! ಸಪ್ತಪದಿ ತುಳಿದವಳು ಈಗಿಲ್ಲ ಹೋಗಿಹಳು ದೂರ ತೀರಕೆ ಮರಳಿಬಾರದ ಲೋಕಕ್ಕೆ ನಾನೀಗ ಒಂಟಿ ಜೀವ ಒಂಟಿ ಜೀವನದ ಅನುಭವ ಯಾವುದರಲ್ಲೂ ಇಲ್ಲ ಆಸೆ ಆಸಕ್ತಿ ಆದರೂ ಬದುಕಲೇಬೇಕು ದೇಹದೊಳಗಿರುವ ತನಕ ಶಕ್ತಿ…

ಅನುದಿನ‌ಕವನ-೪೬೬, ಕವಯತ್ರಿ: ಚೇತನಾ ತೀರ್ಥ ಹಳ್ಳಿ, ಬೆಂಗಳೂರು

ಸಮ್ಮರಿನಲ್ಲೂ ಚೆಂದಕ್ಕೆ ತೊಟ್ಟ ಜಾಕೆಟ್ಟಿನಲ್ಲಿ ಹಿತವಾದ ಬೆವರು. ಮೈಗಂಟಿದ ಮೋಹಕ ಗಂಧದಲಿ ಕರಗಿ ಗಾಳಿಯಲಿ ಹರಡುತ್ತ ದಣಿದ ಘಮಲಿಗೆ ಸಿಕ್ಕು ಮಿಲನ, ಬೆಂಗಳೂರಿನ ಕಡು ಮಧ್ಯಾಹ್ನ. ಅಂಗಾತ ಚಾಚಿ ಮಲಗುವುದು, ಕಾವಲಿಯ ಮೈಮೇಲೆ ಕಾಲು ನಿಡಿದುದ್ದ ನೀಡಿ, ಹೊರಳುವಂತೆ ಕಾಲ. ಸೂರ್ಯ…

ಅನುದಿನ‌ ಕವನ-೪೬೫, ಕವಿ: ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ

ಹೊಳೆ ದಡದಲಿ ಹುಣ್ಣಿಮೆ ಮೀಯುವ ಹೊತ್ತು… ಅವಳ ಕಿಟಿಕಿಯ ಬಳಿ ಗಾಳಿ ಪಿಸುಗುಟ್ಟಿತು… ಗುಟ್ಟೊಂದು ರಟ್ಟಾಗಿ ನೈದಿಲೆಯ ಮೊಗ್ಗು ಬೆವರಿ ಬಿರಿಯಿತು ಬೆಳದಿಂಗಳ ತಾಪಕೇ! -ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ *****

ಅನುದಿನ ಕವನ-೪೬೪, ಕವಯತ್ರಿ: ಅನಿತಾ ಸಿಕ್ವೇರಾ, ಉಡುಪಿ, ಕವನದ ಶೀರ್ಷಿಕೆ: ಆ ಬೆಳದಿಂಗಳ ರಾತ್ರಿಗಳು

ಆ ಬೆಳದಿಂಗಳ ರಾತ್ರಿಗಳು ಆ ಸುಂದರ ಬೆಳದಿಂಗಳ ರಾತ್ರಿ ಹಳ್ಳಿ ಮನೆಯ ಕಣ್ತುಂಬುವ ಚಿತ್ರಣ ಸೆಗಣಿ ಸಾರಿಸಿದ ಸೊಗಸಿನ ಅಂಗಳ ಅಪ್ಪಾ ಅಮ್ಮ ಬಂಧು ಬಳಗ ಒಡಹುಟ್ಟಿದವರೊಂದಿಗೆ ಸಡಗರ ಬಾನಲ್ಲಿ ನಗುವ ಹುಣ್ಣಿಮೆಯ ಚಂದಿರ ಮಕ್ಕಳ ತುಂಟಾಟ ಹಿರಿಯರ ಓಡಾಟ ಕಂದಮ್ಮಗಳೊಂದಿಗೆ…

ಅನುದಿನ ಕವನ-೪೬೩, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ನನ್ನ ಜನಗಳು

ನನ್ನ ಜನಗಳು ಮುಗಿಲಿಗೆ ಹೆಗಲ ಕೊಟ್ಟವರು ಮುಗಿಯದ ಕಥೆಯ ಕರ್ತೃಗಳು ಮೂಡಣ ಹಾದಿಯ ಕೆಂಪುಗಳು ನನ್ನ ಜನಗಳು ಚೋಮನ ಕುಡಿಗಳು ಕತ್ತಲ ನಾಡಿನ ದನಿಗಳು ಬೆಟ್ಟಕೆ ಬೆವರು ಇಳಿಸಿದವರು ಹಸಿವನು ಹೆತ್ತ ಮನಸುಗಳು ನನ್ನ ಜನಗಳು ಚೋಮನ ಕುಡಿಗಳು ಸಾಕವ್ವನ ಒಡಲಿನ…

ಅನುದಿನ ಕವನ-೪೬೨, ಕವಯತ್ರಿ: ವಿನುತಾ ಎಸ್, ಬೆಂಗಳೂರು

ಅರ್ಧಂಬರ್ಧ ಗೀಚಿದ ಕವಿತೆಯೊಂದಿದೆ, ಯಾವ ನೋವಿಗಿಂತ ಕಡಿಮೆಯೇನಲ್ಲ ಅಪೂರ್ಣ ಕವಿತೆಯೊಂದಿಗೆ ಕಳೆಯುವುದು, ರಾತ್ರಿಯೆಲ್ಲಾ ವಿಪರೀತ ಕಾಡುತ್ತದೆ ಪದಗಳಿಗಾಗಿ ತಡಕಾಡುತ್ತದೆ… ಪದಕೆ ಪದ ಜೋಡಿಸಿ, ಪ್ರಾಸಗಳ ಹೆಣೆದು, ಕಟ್ಟಲಾಗಲಿಲ್ಲ ಕವಿತೆಯನ್ನು ಅರ್ಧ ಕವಿತೆ ಪೂರ್ತಿಯಾಗಲಿಲ್ಲ, ಸುಲಭವೇನಲ್ಲ ಕವಿತೆ ಕಟ್ಟುವುದು… ಕೊನೆಗೊಮ್ಮೆ ತಿಳಿಯಿತು ಕವಿತೆ…