ಹುಟ್ಟು ನಿನ್ನದಲ್ಲ ಸಾವು ನಿನ್ನದಲ್ಲ ಬದುಕು ಮಾತ್ರ ನಿನ್ನದು ನಿನ್ನೆ ನಿನ್ನದಲ್ಲ ನಾಳೆ ನಿನ್ನದಲ್ಲ ಇಂದು ಮಾತ್ರ ನಿನ್ನದು ಕಳೆದುದು ನಿನ್ನದಲ್ಲ ಬರುವುದೂ ನಿನ್ನದಲ್ಲ ಗಳಿಸಿದ್ದು ಮಾತ್ರ ನಿನ್ನದು ಹೆಸರು ನಿನ್ನದಲ್ಲ ಜೀವ ನಿನ್ನದಲ್ಲ ಜೀವನ ಮಾತ್ರ ನಿನ್ನದು ನಿಮ್ಮವರೆಂದುಕೊಳ್ಳುವವರೆಲ್ಲ ನಿನ್ನವರಲ್ಲ…
Category: ಅನುದಿನ ಕವನ
ಅನುದಿನ ಕವನ-೧೫೦೯, ಕವಯಿತ್ರಿ: ಡಾ. ನಾಗರತ್ನಾ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಝಲ್
ಗಝಲ್ ಸುರನದಿಯು ಸೂಸುವ ಬೆಳ್ನಗೆಯೆ ಮನಸೆಳೆದ ನೊರೆಯಲೆಯು ನೀನು ಕಾರ್ಮುಗಿಲ ಕೇಶರಾಶಿಯ ಲೀಲೆಯೆ ಮಂದಾನಿಲದ ಮೇಘದನಿಯು ನೀನು ಮಿನುಗುವ ಗಣ ತಾರಿಕೆಯಲಿ ಧ್ರುವತಾರೆಯಾಗಿ ಮೆರೆದು ಸೆಳೆಯುವೆಯಾ ಕಡಲೊಡಲ ಮುತ್ತಾಗಿ ಮೆರೆಯುವ ಎನ್ನೊಲವಿನ ಕಲ್ಪನೆಯು ನೀನು ಸ್ಮೃತಿವರ್ಣವ ಮಾಸಲು ಬಿಡದೆ ನೆನಪಿನಣತೆಯ ಹಚ್ಚುತ…
ಅನುದಿನ ಕವನ-೧೫೦೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನನ್ನ ಮುಗುಳ್ನಗೆಯ ಹಿಂದೆ ಬದುಕೆನ್ನುವುದೆಲ್ಲ ಅಡಗಿತ್ತು ಕೇವಲ ನಿನಗಾಗಿ ಒಲವಿನ ಕಂಗಳ ಹಿಂದೆ ನನ್ನದೆನ್ನುವುದೆಲ್ಲ ಅರ್ಪಿತವಾಗಿತ್ತು ಕೇವಲ ನಿನಗಾಗಿ ಅದೆಷ್ಟೋ ನೋವುಗಳ ಉರಿಯಲಿ ಸುಟ್ಟು ಬೂದಿಯಾಗಿತ್ತೋ ಮನವು ಮತ್ತೆ ರೆಕ್ಕೆಗಳ ಫಡಫಡಿಸಿ ನೀಲಾಗಸದಿ ಹಾರತೊಡಗಿತ್ತು ಕೇವಲ ನಿನಗಾಗಿ ಕಣ್ಣಿಲ್ಲದೆಯೂ ಕಾಮನಬಿಲ್ಲನು…
ಅನುದಿನ ಕವನ-೧೫೦೭, ಕವಿ: ಲಕ್ಷ್ಮಣ ಕೆ.ಪಿ, ಬೆಂಗಳೂರು, ಕವನದ ಶೀರ್ಷಿಕೆ: ಮನವೆಲ್ಲವೂ ಬಯಲಾಗಿದೆ
ಮನವೆಲ್ಲವೂ ಬಯಲಾಗಿದೆ ಮನವೆಲ್ಲವೂ ಬಯಲಾಗಿದೆ ಕಣ್ಣಂಚ ನೋಟವೇ ಎದೆಪದಕೆ ಪೀಠಿಕೆ ಉಸಿರೊಂದು ಕೊಳಲಾ ಹುಡುಕಿದೆ ಪ್ರೀತಿ ಪರಿಷೆ ಎದೆಯಲ್ಲಿ ತೇಲಿ ತೇರು ರಂಗೋಲಿ ಎದೆ ತಮಟೆ ಗಸ್ತಿಗೆ ನಿನ್ನ ನೋಟ ಮತ್ತಿಗೆ ಎದೆ ಕೋಡಿ ಹರಿದೂ ಹಾಡಿದೆ ರಾಗಿ ಹೊಲದ ಬಯಲಲ್ಲಿ…
ಅನುದಿನ ಕವನ-೧೫೦೬, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಪ್ರೇಮಿಗಳ ದಿನ!
ಪ್ರೇಮಿಗಳ ದಿನ! ಅಪರಿಚಿತರು ತೀರಾ ಪರಿಚಿತರಾಗಿ ಸಂಗಮದತ್ತ ಕೂಡಿ ನಡೆದು ಅಲ್ಲಮರ ಅಂಗಳದಲ್ಲಿ ಅರಳಿ ಅಂತರಜಾತಿ ವಿವಾಹಕ್ಕೆ ನಾಂದಿಯಾದರು ನಾಂದಿಯ ದಿನವನ್ನೇ ಅವರು ಪ್ರೇಮಿಗಳ ದಿನವೆಂದರು ಇವರು ಧರ್ಮವಿರೋಧಿ ದಿನವೆಂದರು ಪ್ರೀತಿಯ ವಿರೋಧಿಗಳು ವಚನದ ಕಟ್ಟು ಸುಟ್ಟು ಶರಣ ಕುಸುಮಗಳ ಹೊಸಕಿದರು…
ಅನುದಿನ ಕವನ-೧೫೦೫, ಕವಯಿತ್ರಿ: ನಂದಿನಿ ಹೆದ್ದುರ್ಗ
ಎಷ್ಟೊಂದು ಪ್ರೇಮಪದ್ಯಗಳಿವೆ ನನ್ನ ಹಳೆಯ ಸಂಗ್ರಹದಲ್ಲಿ! ಅಕ್ಷರಗಳ ಆಕಾರ ಬಣ್ಣ ನೇವರಿಸಿ ಭಾವ ನೋವು ಗ್ರಹಿಸಿ ಬೆವರ ವಾಸನೆ ಅರಸಿ… ವಿಳಾಸ ಹುಡುಕುವ ಹುಚ್ಚು ನನಗೆ!! ಹಣೆಯ ಮೇಲಿದ್ದ ಹೆರಳು ಸರಿ ಮಾಡಿ ಸಣ್ಣಗೇನೋ ಹೇಳಿದವನನ್ನೇ ಮೆಲ್ಲ ನೋಡಿದೆ. ಗಲ್ಲ ಹಿಡಿದೆತ್ತಿ…
ಅನುದಿನ ಕವನ-೧೫೦೪, ಕವಿ: ಗೋಪಾಲ್ ಯಡಗೆರೆ, ಶಿವಮೊಗ್ಗ ಕವನದ ಶೀರ್ಷಿಕೆ: ಅಪ್ಪ ಅವನೇ ನನ್ನಪ್ಪ
ಅಪ್ಪ ಅವನೇ ನನ್ನಪ್ಪ ಅರಿವನೆರೆದ ಅರಿವಾಗುವವರೆಗೂ ಪೊರೆದ ಸದ್ದಿಲ್ಲದೆ ದೂರಕೆ ಸರಿದು ದಿಟ್ಟಿಸಿದ್ದ ಅವನೇ ಅಪ್ಪ, ನನ್ನಪ್ಪ.. ಬಿದ್ದಾಗ ಬೆರಳ ನೀಡಿ ಏಳೆಂದ ಎದ್ದಾಗ ಅಪ್ಪಿ ಭೇಷ್ ಎಂದ ಹೆಜ್ಜೆಯೊಂದ ಮುನ್ನಡೆಸಿ ಬೆನ್ನ ಹಿಂದೆ ನಿಂತಿದ್ದ ಅಪ್ಪ, ಅವನೇ ನನ್ನಪ್ಪ ಗುರಿಯ…
ಅನುದಿನ ಕವನ-೧೫೦೩, ಹಿರಿಯ ಕವಯಿತ್ರಿ: ಡಾ.ಹೇಮ ಪಟ್ಟಣಶೆಟ್ಟಿ, ಧಾರವಾಡ, ಕವನದ ಶೀರ್ಷಿಕೆ: ಬೆಳದಿಂಗಳು
ಫೆ. 11 ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಜನುಮದಿನ. ಈ ಹಿನ್ನಲೆಯಲ್ಲಿ ಇವರ ಬೆಳದಿಂಗಳು ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಸಂತಸ ಪಡುತ್ತದೆ ಜತೆಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ. (ಸಂಪಾದಕರು) ಬೆಳದಿಂಗಳು ಈಗಷ್ಟೇ ಅಮ್ಮೀ…
ಅನುದಿನ ಕವನ-೧೫೦೨, ಕವಿ:ಸಿದ್ದು ಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಋತುಗಳ ರಾಣಿ
ಋತುಗಳ ರಾಣಿ… ಮರೆತಂತೆ ನಟಿಸೋದು ಚೆನ್ನ ನಿನ್ನ ನಗೆ ನನ್ನೊಳಗೆ ನೂರಾರು ಬಣ್ಣ ನೋಡುತ್ತ ನೀ ಹಾಗೆ ನನ್ನ ತುಂಬಿ ಹೋಗಿರುವೆ ಈ ನನ್ನ ಕಣ್ಣ ನಿನ್ನದೆ ಬಿಂಬ ಸಾಲು ಮೂಡಿದೆ ಗಾಳಿ ಕೆನೆ ಪದರು ಋತುಗಳ ರಾಣಿ ಅಳಿಸಲಾರೆ ಇನ್ನೂ…
ಅನುದಿನ ಕವನ-೧೫೦೧, ಹಿರಿಯ ಕವಿ:ಡಾ. ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ:ಶ್ವಾನಾಕ್ರೋಶ
ಶ್ವಾನಾಕ್ರೋಶ ತಿದ್ದಲಾಗದ ನಿಮ್ಮ, ಉದ್ದುದ್ದ ಡೊಂಕುಗಳ, ನನ್ನ ಬಾಲಕ್ಕೇಕೆ ಹೋಲಿಸುವಿರಿ; ನನ್ನದೋ ಕಾಯಗುಣ, ನಿಮ್ಮದು ಭ್ರಷ್ಟಮನ, ಎಲ್ಲಿಂದ ಸಂಬಂಧ ಕಲ್ಪಿಸುವಿರಿ? -ಡಾ.ಬಸವರಾಜ ಸಾದರ, ಬೆಂಗಳೂರು