ಅನುದಿನ‌ ಕವನ-೫೮೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಹೆಗ್ಗಣಗಳು

ಹೆಗ್ಗಣಗಳು ಮೊದ ಮೊದಲು ಈ ಇಲಿಗಳು ಮನೆಯಲ್ಲಿ ಸೇರಿಕೊಂಡಾಗ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ ಇದ್ದರಿರಲಿ ಆಮೇಲೆ ನೋಡಿದರಾಯ್ತೆಂದೆವೆಲ್ಲ ಅಲ್ಲಲ್ಲಿ ಸಿಕ್ಕಿದ್ದ ಕಾಳು ಕಡಿಗಳ ಗೊತ್ತಿಲ್ಲದಂತೆ ತಿಂದುಕೊಂಡಿದ್ದುವೆಲ್ಲ ಆಮೇಲೆ ಇಲಿಗಳೆಲ್ಲ ಹೆಗ್ಗಣಗಳಾದವು ನಮ್ಮೆದುರೇ ರಾಜಾರೋಷವಾಗಿ ತಿನ್ನತೊಡಗಿದವು ನಾವು ದನಿಯೆತ್ತದಂತೆ ಕಣ್ಣು ಕೆಂಪಗೆ ಮಾಡಿದವು…

ಅನುದಿನ ಕವನ-೫೮೮, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ಕಳೆದು ಹೋದವು ಎಪ್ಪತ್ತೈದು ವರುಷಗಳು

ಕಳೆದು ಹೋದವು ಎಪ್ಪತ್ತೈದು ವರುಷಗಳು ಕಳೆದು ಹೋದವು ಎಪ್ಪತ್ತೈದು ವರುಷಗಳು, ಹರೆಯಸಂದವಳಾಗಿ ನರೆಗೂದಲ, ಮುದುಕಿಯಾದ ಭಾರತಮ್ಮನಿಗೆ, ಕಳೆದು ಹೋದವು ಎಪ್ಪತ್ತೈದು ವರುಷಗಳು. ವೈಚಾರಿಕತೆಗೆ ನಿಲುಕದ ಆಚರಣೆಗಳಲ್ಲಿ, ಭೌದ್ಧಿಕ ಬೆಳವಣಿಗೆಗೆ ಬೇಕಾಗದ ಬುದ್ಧಿ ಪ್ರದರ್ಶಕರ ವೇದಿಕೆಯಲ್ಲಿ, ಆರ್ಥಿಕ ನೆಲಗಟ್ಟುಗಳ ಮೇಲೆ ದಾಳಿಯಿಕ್ಕುವ ದಾಂಡಿಗತನದ…

ಅನುದಿನ‌ ಕವನ-೫೮೭, ಕವಿ: ಮಂಜುನಾಥ ಕಾಡಜ್ಜಿ, ನಲ್ಲಾಪುರ, ಕವನದ ಶೀರ್ಷಿಕೆ: ಮೋಸದ ಕುದುರೆ

ಮೋಸದ ಕುದುರೆ !! ಯೌವ್ವನವೆಂಬ ಮೋಸದ ಕುದುರೆ ದಾರಿತಪ್ಪಿ ಅತ್ತಿತ್ತ ಓಡುತಿದೆ !! ದುರಾಸೆಯ ಮೋಹಕೆ ಸಿಲುಕಿ ಕಂಡಕಂಡವರ ಮನಸಿಗೆ ಬಂದಂತೆ ಘಾಸಿ ಮಾಡುತಿದೆ!! ದುಡ್ಡಿನ ಸೊಕ್ಕಿಗೆ ಅಹಂಕಾರದ ವೇಷ ಧರಿಸಿ ಬಣ್ಣ ಬಣ್ಣದ ನೆರಳಲಿ ಕುಣಿಯುತಿದೆ !! ಪ್ರೇಮದ ಬಲೆ…

ಅನುದಿನ‌ ಕವನ-೫೮೬, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧ ನೀ ಮುತ್ತು ಕೊಟ್ಟ ಗಲ್ಲಕೆ; ಮುತ್ತುತಿವೆ ಇರುವೆ ದಂಡು ೨ ಆಗಾಗ ಭಾವ ಉಕ್ಕಿ; ಕವಿ ಬರೆವ ಎದೆಯ ಹಾಡು ೩ ನಾ ಬರೀ ತಂತಿ ಹರಿವ ಅಗೋಚರ ಶಕ್ತಿ ಅವಳು ೪ ತುಟಿಗಳಲಿ ತುಂಬಿ ನಿಂತ ತಾರುಣ್ಯ…

ಅನುದಿನ ಕವನ-೫೮೫, ಕವಿ: ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು, ಕವನದ ಶೀರ್ಷಿಕೆ: ಸಂತ

ಸಂತ ನೆನಪಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ. ಅರಿತವರಷ್ಟೇ ಹೃದಯದ ಬಾಗಿಲಲ್ಲಿ ಗಾಜಿನ ತಡೆಗೋಡೆಗಿಲ್ಲಿ ಎತ್ತರದ ಸಮಸ್ಯೆ ಹೆಬ್ಬೆರಳು ತುದಿಯಲ್ಲೇ ವೀಕ್ಷಣೆ ಕಣ್ತುಂಬುತ್ತವೆ ಒಡನಾಟದ ಎದೆಯ ಮಿಡಿತಕ್ಕೆ ಎದೆಗೆ ಇರಿದ ಬದುಕು ಮುರಿದ ಜೀವಕ್ಕಾಗಿಯೇ ಮೀಸಲಿರಿಸಿದ ಸಂತನೆಂಬ ಪಟ್ಟ ಉಳಿವಿಗಿಲ್ಲಿ ದೇವರ…

ಅನುದಿನ‌ ಕವನ-೫೮೪, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಜಲ್ ಪರಿತಪಿಸಿ ಪ್ರಲಾಪಿಸುತಿರುವೆ ಬದಲಿಸು ನಿನ್ನ ನಿಲುವ ನೊಂದು ಬೆಂದು ಬೇಯುತಲಿರುವೆ ಬದಲಿಸು ನಿನ್ನ ನಿಲುವ ಕಾಡಿಬೇಡಿ ಬಳಲುತ್ತಲಿರುವೆ ಕನಸ ಕರುಣಿಸು ಕೆಲವು ಕಿಡಿ ನೋಟದಿ ದುರುಗುಟ್ಟಿದರೂ ಸರಿಯೇ ಬದಲಿಸು ನಿನ್ನ ನಿಲುವ ಪಾಪ ಪುಣ್ಯ ಸುಖ ದುಃಖಗಳ ಲೆಕ್ಕ ಹಾಕುತ…

ಅನುದಿನ‌ ಕವನ-೫೮೩, ಕವಿ: ಎಂ.ಎಂ‌. ಶಿವಪ್ರಕಾಶ್, ಹೊಸಪೇಟೆ, ಕವನದ ಶೀರ್ಷಿಕೆ: ಕಾವ್ಯಕನ್ಯೆ! ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ

ಕಾವ್ಯಕನ್ಯೆ!!! ಸದಾ ಉತ್ಸಾಹ ನಗುಮುಖದ ಇವಳು ಕ್ರಿಯಾಶೀಲವಾಗಿ ಹರಿಯುವ ಜೀವಂತ ನದಿಯಂತೆ . ಉಕ್ಕಿ ಹರಿದ ನದಿಯಂತೆ ಇವಳು ನಗು. ಭಂಗಿ ಮೋಹಕ. ನೋಟ ಮನಮೋಹಕ. ಜಂಬ ಒನಪು ವೈಯಾರದ ನಡಿಗೆ. ಹುಣ್ಣಿಮೆಯ ಚಂದಿರನಂತಿರುವ ಮುಖಕ್ಕೆ ಕಪ್ಪು ಕನ್ನಡಕ. ಬಿರು ಬಿಸಿಲಿನಲ್ಲಿಯು…

ಅನುದಿನ ಕವನ-೫೮೨, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಆರಾಧನೆ…!

“ಬರೆಯುತ್ತಲೇ ಅತ್ಯಂತ ಖುಷಿ ಕೊಟ್ಟ ಕವಿತೆ. ಓದಿ ನೋಡಿ.. ಮುದ ನೀಡಿ ನಿಮ್ಮ ಹೃನ್ಮನಗಳನ್ನು ಪುಳಕಗೊಳಿಸುತ್ತದೆ. ಇಲ್ಲಿ ಹೃದ್ಯ ಬಂಧಗಳ ಸೌಂದರ್ಯದ ಅನಾವರಣವಿದೆ. ಅನನ್ಯ ಅನುಬಂಧಗಳ ಮಾಧುರ್ಯದ ರಿಂಗಣವಿದೆ. ಅವಿನಾಭಾವ ಆಂತರ್ಯಗಳ ಅಂತಃಕರಣ ಹೂರಣವಿದೆ. ಓದಿ…ಪ್ರತಿಕ್ರಿಯಿಸುವಿರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇…

ಅನುದಿನ ಕವನ-೫೮೧, ಕವಯತ್ರಿ: ಮಂಜುಳಾ‌ ಕಿರುಗಾವಲು, ಮಂಡ್ಯ, ಕವನದ ಶೀರ್ಷಿಕೆ: ನನ್ನದೇನೂ ಅಭ್ಯಂತರವಿಲ್ಲ….

ನನ್ನದೇನು ಅಭ್ಯಂತರವಿಲ್ಲ ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಈಗಿನಂತೆಯೇ ಬಟ್ಟೆ ತೊಡು, ಆದರೆ, ತೋಳಿಲ್ಲದ, ಮೊಣಕಾಲುಗಳು ಕಾಣಿಸುವಂತವು ಬೇಡವಷ್ಟೇ… ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ ಹಚ್ಚು ಆದರೆ, ಹಣೆಗೆ ಬೊಟ್ಟು ಇಡಲೇಬೇಕಷ್ಟೇ… ನನ್ನದೇನು…

ಅನುದಿನ‌ ಕವನ-೫೮೦, ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಯಾಕೋ…!?

ಯಾಕೋ….!? ಎಲ್ಲವೂ ಖಾಲಿಯಾಗಿದೆ ನನ್ನೊಳಗೇನಿಲ್ಲ ಏನೂ ಉಳಿದಿಲ್ಲ ಖಾಲಿಯವನೆಂದು ಖಾಲಿ ಕೈಯವನೆಂದು ಜರಿದ ಜನರೆಷ್ಟೋ ಜನ ದೂರಮಾಡಿಕೊಂಡವರೆಷ್ಟೋ ಜನ ನನಗದು ಖುಷಿ ಮತ್ತೆ ನನಗದು ಹೆಮ್ಮೆ ಅವರು ನನ್ನ ಖಾಲಿ ಎಂದು ಜರಿದುದಕ್ಕೆ ಖಾಲಿ ನಾನೆಂದು ನನಗೆ ಮತ್ತೆ ಮತ್ತೆ ಗೊತ್ತುಮಾಡಿಸಿದುದಕ್ಕೆ…