ಏನೆಂದು ಹೆಸರಿಡಲಿ!? ಬರಬಿದ್ದ ಮನಕೆ ಮಧುರ ಮಳೆ ಸುರಿದ ಒಲವೇ.. ಮನದ ಮರುಭೂಮಿಯಲಿ ಹಸಿರುಕ್ಕುವಂತೆ ಮಾಡಿದ ಒಲವೇ.. ಉರಿಗಾಳಿಗೆ ಸಿಲುಕಿ ನೊಂದ ಜೀವಕ್ಕೆ ಸಾಂತ್ವನದ ತಂಪೆರೆದ ಒಲವೇ.. ಕತ್ತಲಾದ ಬಾಳಿಗೆ ಪ್ರೀತಿಯ ಕಿರುದೀಪ ಹಚ್ಚಿಟ್ಟ ಒಲವೇ.. ಸೋತ ಉಸಿರಿಗೆ ಭರವಸೆಯ ಹೆಗಲು…
Category: ಅನುದಿನ ಕವನ
ಅನುದಿನ ಕವನ-೧೩೭೦, ಕವಯಿತ್ರಿ: ಮಮತಾ ಅರಸೀಕೆರೆ, ಹಾಸನ ಜಿ., ಕವನದ ಶೀರ್ಷಿಕೆ:ಆರಾಧನೆ
ಆರಾಧನೆ ಯಾವುದೊ ಹಾಡೊಂದು ಗುಂಗಾಗಿದೆ ಪ್ರೇಮವಾಗಿದೆಯೆಂದು ತಿಳಿಯಬೇಕು ಯಾವುದೊ ದನಿಯೊಂದು ಸೆಳೆಯುತ್ತಿದೆ ಅನುರಕ್ತಿಯಾಗಿಯೆಂದು ಅರಿಯಬೇಕು ಯಾವುದೊ ಬಿಂಬವೊಂದು ಕಣ್ಣಲ್ಲೇ ಕುಳಿತಿದೆ ವ್ಯಾಮೋಹವಾಗಿದೆಯೆಂದು ತಿಳಿಯಬೇಕು ಯಾವುದೊ ಬಾಂಧವ್ಯವೊಂದು ಕಾಡುತ್ತಿದೆ ಪ್ರಣಯವಾಗಿದೆಯೆಂದು ಅರಿಯಬೇಕು ಯಾವುದೊ ದಾರಿಯೊಂದು ಸೆಳೆದಿದೆ ಅನುರಾಗವಾಗಿದೆಯೆಂದು ತಿಳಿಯಬೇಕು. ಯಾರದೋ ಚಿತ್ರವೊಂದು ಎದೆಯಲ್ಲಿ…
ಅನುದಿನ ಕವನ-೧೩೬೯, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ., ಕವನದ ಶೀರ್ಷಿಕೆ:ಎದುರಾಬದುರಾ ಕೂತು
ಎದುರಾಬದುರಾ ಕೂತು ನಾವಿಬ್ಬರೂ ಎದುರಾಬದುರಾ ಕೂತು ಎಷ್ಟು ಶತಮಾನವಾಯಿತು ಆಗ ನೀನು ಆಡಿನಮರಿಯ ಹಾಗೆ ಛಂಗನೆ ಜಿಗಿಯುತ್ತಿದ್ದೆ ನನ್ನ ಮಡಿಲಿಗೆ ಹುಸಿಮುನಿಸು ಮಾಡಿ ಚಂಡು ಮುಂದೆ ಮಾಡಿ ಗುದ್ದಲು ಬರುತ್ತಿದ್ದೆ ಪಾದ ಮುತ್ತುವ ಲಂಗವ ಎತ್ತಿಕಟ್ಟಿ ಕುಂಟಲಿಪಿ ಆಡುವಾಗ ನಾನು ನಿನ್ನ…
ಅನುದಿನ ಕವನ-೧೩೬೮, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ:ಬದುಕುವ ಕಲೆ
ಬದುಕುವ ಕಲೆ “ಉಸಿರುಗಟ್ಟಿಸುತ್ತಿದ್ದ ಧ್ವೇಷವನ್ನು ಉಫ್ ಎಂದು ಮೇಲಕ್ಕೆಸೆದುಬಿಟ್ಟೆ/ ಮೋಡಗಟ್ಟಿದ ಬಾನು ಕಪ್ಪಾಗಿ ಮರುದಿನವೇ ಮಳೆ/ಬಿಸಿಲಿಗೊಣಗಿದ ಕೆರೆಕಟ್ಟೆಯನು ತುಂಬುತ್ತಿದೆ/ತಬ್ಬಿ ಪ್ರೀತಿಯ ಸೆಲೆ. ಹತಾಷೆ ಒಂಟಿತನ ವಿಷಾದದ ಬೀಜಗಳನ್ನೆಲ್ಲಾ/ತೂರಿ ಬೀಸಿದೆ ಮನೆಯ ಹಿಂದಿನ ಹಿತ್ತಲಿನೊಳಗೆ/ ತಿಂಗಳೊಳಗೇ ಮಲ್ಲಿಗೆ ಗುಲಾಬಿ ಪಾರಿಜಾತಗಳು/ಘಮಘಮಿಸಿ ಅರಳಿ ಹೂ…
ಅನುದಿನಕವನ-೧೩೬೭, ಕವಿ: ನಾಗತಿಹಳ್ಳಿರಮೇಶ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ನೆನಪು….
ಅವ್ವನ ನೆನಪು.. ತಾಯೇ ಓ ನನ್ನ ತಾಯೇ ನಿನ್ನ ನೆನಪು ನಾಲಗೆಯಲಿ ಉಕ್ಕುವ ತಿಳಿ ಕಡಲು ಈಸುತ್ತಿರುವ ಜಲಚರವಾಗಿ ಚಿಪ್ಪೊಳು ಮುತ್ತಾಯ್ತು. ನಿನ್ನ ಮೇಲೆ ಬರೆ ಎಳೆದ ಅಡ್ಡ ಗೆರೆಯ ಸಾಲು; ಆಕಾಶಕ್ಕೇ ಬರೆ ಇಟ್ಟಂತೆ ಸುಳಿ ಮಿಂಚು ಕಣ್ಣಿನಾಳದಿಂದ ಉಕ್ಕುಕ್ಕಿ…
ಅನುದಿನ ಕವನ-೧೩೬೬, ಕವಿ: ಡಾ.ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ:ಮೂಕರಾಗ ಹೇಗೆ ಅರ್ಥವಾದೀತು?
ಮೂಕರಾಗ ಹೇಗೆ ಅರ್ಥವಾದೀತು? ಇದ್ದದ್ದು ಒಂದೇ ಮರ ನೆರಳಿಗೂ ತಂಪಿಗೂ ಹಣ್ಣಿಗೂ ಹಕ್ಕಿವಾಸಕ್ಕೂ ಮಕ್ಕಳ ತೂಗುಯ್ಯಾಲೆಗೂ ನೂರಾರು ವರ್ಷಗಳ ಇತಿಹಾಸ ಆ ಮರದ್ದು ಜಾತಿ ನೋಡಲಿಲ್ಲ ಬಣ್ಣ ಕೇಳಲಿಲ್ಲ ಧರ್ಮ ಎನ್ನಲಿಲ್ಲ ಎಲ್ಲರನ್ನೂ ಪೋಷಿಸುತ್ತಿತ್ತು ಎಲ್ಲರಿಗೂ ತಂಪೆರೆಯುತ್ತಿತ್ತು ಒಂದೇ ಗರ್ಭದ ಮಕ್ಕಳೆಂಬಂತೆ…
ಅನುದಿನ ಕವನ-೧೩೬೫, ಹಿರಿಯ ಕವಿ: ಎಂ.ಎಸ್.ರುದ್ರೇಶ್ವರ ಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ರೂಪಕಗಳ ಮಾತು….
ರೂಪಕಗಳ ಮಾತು… ಈ ಉಸಿರು ನನ್ನ- ನಿನ್ನ ನಡುವಿನ ಸೇತುವೆ, ಅಂದೆ. ಕಲ್ಪನಾ ಲೋಕ ಕವಿಗಳದು; ವಿಜ್ಞಾನ- ಲೋಕ ವಾಸ್ತವ, ಅಂದಳವಳು. ಅದು ಕಲ್ಪನೆ ಅಲ್ಲ; ಅದೊಂದು ರೂಪಕ ಅಂದೆ. ‘ರೂಪಕ’ ಅಂದರೆ, ಮತ್ತೆ ಕೊಂಕು ನುಡಿದಳು. ಮೂರ್ತ ಅಮೂರ್ತ- ಗಳ…
ಅನುದಿನ ಕವನ-೧೩೬೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ:ಇರದ ಇರುವಿನ ತಾವು
ಇರದ ಇರುವಿನ ತಾವು ಇದ್ದೇನೆ ಇದ್ದೂ ಇರದಂತೆ ಈ ಜಗದ ಸಂತೆಯೊಳಗೆ; ಮಾಗಿಯೂ ಹಣ್ಣಾಗದ ಮಾವಿನ ಹಾಗೆ. ಮುಟ್ಟಿ ನೋಡುತ್ತಾರೆ ಮೂಸಿ ಹಿಚುಕಿ ಮತ್ತೆ ಇರುವಲ್ಲೇ ಇಟ್ಟಿದ್ದಾರೆ ತೂಕಕೂ ಹಾಕದೆ. ಇಲ್ಲೂ ಇದ್ದೇನೆ ನೀರಿರದ ಬಾವಿಯೊಳಗಿಳಿಬಿಟ್ಟ ಕೊಡದ ಹಾಗೆ; ಮೇಲೆ ಯಾರೋ …
ಅನುದಿನ ಕವನ-೧೩೬೩, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ನೀನಿರದೆ ಹಸ್ತದ ರೇಖೆಯಲ್ಲಿ
ನೀನಿರದೆ ಹಸ್ತದ ರೇಖೆಯಲ್ಲಿ ನೀ ತೊರೆದು ಹೋದಂದಿನಿಂದ; ನನಗಿಲ್ಲಿ ಕವಿತೆಯೊಂದೇ ಆಸರೆಯಾಗಿದೆ! ನೀನಿಲ್ಲದೆ ಬೇಗೆ ಬೇಸರದಿಂದ; ಕವಿತೆಯಲ್ಲೆ ಹುಡುಕುತ್ತಿಹೆ ನಿನ್ನ ಒಲವನ್ನೆ! ಏನೆಲ್ಲ ಇದ್ದರು ನಾನಿಲ್ಲಿ ಏಕಾಂಗಿ; ನೀನಿರದೆ ಎದೆ ಉಸಿರಲ್ಲಿ! ಏನೆಲ್ಲ ಸಿಕ್ಕರು ನನಗಿಲ್ಲವೆ ಖುಷಿ; ನೀನಿರದೆ ಹಸ್ತದ ರೇಖೆಯಲ್ಲಿ!…
ಅನುದಿನ ಕವನ-೧೩೬೨, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಬುದ್ಧನಿಗೆ ನಮನ
ಬುದ್ಧನಿಗೆ ನಮನ ನೀನು ಕರುಣಿಸಿದೆ ಕಾರುಣ್ಯದಿಂದ ಲೋಕ ಬೆಳಗಿಸುವ ಪಾಠವನ್ನು ಬೋಧಿಸಿದೆ ಬೋಧಿವೃಕ್ಷದ ಕೆಳಗೆ ಮಹಾಮೌನದ ಬಳ್ಳಿ ಹಬ್ಬಿಸಿ ಹೂವು…