ಚೆಲುವಿನ ಕನ್ನಿಕೆ ಸುಂದರ ನಾರಿಯು ನಾಚುತ ನಿಂತಳು ಬೆಡಗಿನ ಹುಡುಗಿಯು ಯಾರಿವಳು? ಚೆಂದದ ನಗೆಯಲಿ ಮುಖವನು ಮುಚ್ಚುತ ಹೂವಿನ ಬುಟ್ಟಿಯ ಹಿಡಿದಿಹಳು|| ನಲ್ಲನ ಮಾತನು ಮನದಲಿ ನೆನೆಯುತ ಕನಸಿನ ಲೋಕಕೆ ತೆರಳಿಹಳು| ತಲ್ಲಣ ತೊರೆಯುತ ಭಾವನೆಯರಳಿಸಿ ಮೋಹಕ ನಗೆಯನು ಬೀರಿಹಳು|| ಬದುಕಿನ…
Category: ಅನುದಿನ ಕವನ
ಅನುದಿನ ಕವನ-೪೯೬, ಕವಯತ್ರಿ:ಲಾವಣ್ಯಪ್ರಭ, ಮೈಸೂರು
ಸುಡುಬಿಸಿಲ ಧಗೆ ವಿರಹ ಮುಕ್ತಾಯಗೊಳ್ಳುವ ಮುನ್ಸೂಚನೆಯಂತೆ ಹೀಗೆ ಹನಿಹನಿ ಹಜ್ಜೆಯಿಟ್ಟು ಹತ್ತಿರವಾದಂತೆಲ್ಲಾ ನೀ ಸನಿಹ…. ಕತ್ತಲ ಸೆರಗನ್ನು ಒದ್ದೆಮುದ್ದೆಯಾಗಿಸಿದ ಉತ್ಸವಕ್ಕೆ ಉಸಿರು ಚೆಲ್ಲಾಪಿಲ್ಲಿ ಬಲುಜೋರು ಬೀಸುಗಾಳಿ ತೂಗುಯ್ಯಾಲೆ ಎಲೆ ಹೂವು ಗಿಡ ಬಳ್ಳಿ ಕಿವಿಗಡಚಿಕ್ಕುವ ಗುಡುಗೋ ಸಿಡಿಲೋ? ಏರುಪೇರಾದ ಎದೆಬಡಿತದ ಹುಯಿಲೋ…?…
ಅನುದಿನ ಕವನ-೪೯೫, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುಪ್ತಗಾಮಿನಿ
ಗುಪ್ತಗಾಮಿನಿ ಅವಳು ತ್ಯಾಗಮಯಿ ಸಹನಾಮಯಿ ತ್ಯಾಗದ ಪ್ರತೀಕವೇ ತಾಯಿ ! ಮಕ್ಕಳ ಬೇಕು ಬೇಡಗಳನ್ನು ತೀರಿಸುವುದರಲ್ಲಿಯೇ ಅವಳ ಆಯುಷ್ಯ – ಭವಿಷ್ಯ ಆಕೆಯೊಂದು ತಪಸ್ವಿ ಸತ್ಸಂಗಗಳೆಲ್ಲವನ್ನೂ ತೊರೆದು ತನ್ನ ಜೀವನವನ್ನೇ ಧಾರೆಯೆರೆಯುವ ಅವಳೊಂದು ದೇವತೆ ಪೂಜ್ಯ ಪುನೀತೆ ! ತನ್ನೊಡಲ…
ಅನುದಿನ ಕವನ-೪೯೪, ಕವಿ: ಕುಮಾರ ಚಲವಾದಿ, ಹಾಸನ. ಕವನದ ಶೀರ್ಷಿಕೆ: ಕೋಟಿ ದೇವರಿಗೂ ಮಿಗಿಲು
ಕೋಟಿ ದೇವರಿಗೂ ಮಿಗಿಲು ಬರೆಯಬೇಕಿದೆ ಕವನ ಅವ್ವನ ಬಗೆಗೆ ಶಬ್ಧಗಳಿಲ್ಲ ನಿಘಂಟುವಿದ್ದರೆ ಕಳಿಸಿ ನನಗೆ ನೆಲ ಮುಗಿಲನೆಲ್ಲ ಮೀರಿ ನಿಂತವಳು ಭೂಮಿ ಭಾರವ ತಾ ಹೊತ್ತು ನಕ್ಕವಳು ಎದೆಯಾಮೃತ ಸವಿಗೆ ಯಾವ ಹೆಸರಿಡಲಿ ತಲೆಯ ನೇವರಿಕೆಗೆ ಏನೆಂದು ಕತೆಯಲಿ ಮಡಿಲ…
ಅನುದಿನ ಕವನ-೪೯೩, ಕವಿ: ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನವ್ವ
🙏ವಿಶ್ವ ತಾಯಂದಿರ ದಿನದ ಶುಭಾಶಯಗಳು 🙏🏻 ನನ್ನವ್ವ ನನ್ನವ್ವ ನೋವ ನುಂಗಿ ನಗುವ ನೆಲ ನನ್ನವ್ವ ವಿಷವುಂಡು ಸವಿ ನೀಡುವ ಜೀವ ಜಲ ನನ್ನವ್ವ ಹಚ್ಚ ಹಸಿರಿನ ಫಲವಂತಿಕೆ ನನ್ನವ್ವ ಹಸಿದವರಿಗೆ ಕೈತುತ್ತನಿತ್ತ ಜೀವಂತಿಕೆ ನನ್ನವ್ವ ಮೈತ್ರಿ ಒಡಲ ಚಿಗುರು ನನ್ನವ್ವ…
ಅನುದಿನ ಕವನ-೪೯೨, ಕವಯತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ರಂಹೊ ಐದು ಹನಿಗವಿತೆಗಳು!
ರಂಹೊ ಐದು ಹನಿಗವಿತೆಗಳು! ೧ ಕಲ್ಲುಗಳನ್ನೂ ಸ್ಪರ್ಶಿಸುವುದು ಹೂಗಳಿಗೂ ಗೊತ್ತು ಒಣ ಧಿಮಾಕಿನ ಮನುಷ್ಯನದು ಬರೀ ಗತ್ತು!!! ೨ ಬೇಯಬೇಕು… ಬೆಳಕೇ ಆಗಲು..! ನೋಯಬೇಕು.. ಕವಿತೆ ಗೆಲ್ಲಲು..! ೩ ಇದೆ ಎಲ್ಲೋ ಭರವಸೆಯ ತುಣುಕು ಅಳುಕದಿರು ಮನವೇ ಕತ್ತಲೆಗಳ ಕತ್ತು ಹಿಸುಕಿ…
ಅನುದಿನ ಕವನ-೪೯೧, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ದೀಪ್ತಿ
” ಪ್ರೇಮದ ಮಧುರ ಸಂವೇದನೆಗಳ ಕವಿತೆ. ಒಲವ ಸುಂದರ ಹೊಂಬೆಳಕಿನ ಭಾವಪ್ರಣತೆ ಹೃನ್ಮನಗಳ ಪುಳಕಿಸುವ ಪ್ರೀತಿ, ಪ್ರತಿ ಹೆಜ್ಜೆಗೂ ಸ್ಫೂರ್ತಿಯಷ್ಟೇ ಅಲ್ಲ, ನಡೆವ ಹಾದಿ ಬೆಳಗುವ ಚಿರಂತನ ದೀಪ್ತಿ. ಮುದಗೊಳಿಸುವ ಸಾಲುಗಳ ಅಭಿವ್ಯಕ್ತಿಗೆ ಒಪ್ಪುವ ಮೋಹಕ ಚಿತ್ರ. ಏನಂತೀರಾ..?” – ಪ್ರೀತಿಯಿಂದ…
ಅನುದಿನ ಕವನ-೪೯೦, ಕವಯತ್ರಿ: ಅನಿತಾ ಸಿಕ್ವೇರಾ ಉಡುಪಿ, ಕವನದ ಶೀರ್ಷಿಕೆ: ಅಮ್ಮನಿಗೆ ವಯಸ್ಸಾಗಲಿಲ್ಲ
ಅಮ್ಮನಿಗೆ ವಯಸ್ಸಾಗಲಿಲ್ಲ ಸಾದಾ ಸೀರೆ ಕೂದಲಗಂಟು ನಿರಾಡಂಬರ ಸುಂದರಿ ಅಮ್ಮ. …
ಅನುದಿನ ಕವನ-೪೮೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಲೇಖನಿ
ಲೇಖನಿ ಕನ್ನಡ ಸಾಹಿತ್ಯ ಸಾಗರದ ಪರಿ ಬಣ್ಣಿಸಲಸದಳ ಅದರ ಭವ್ಯ ವೈಭವದ ಸಿರಿ ! ಸೂರ್ಯ, ಚಂದ್ರ, ಭೂಮಿ, ಬಾನು ಹೇಗೋ ಆದಿ – ಅಂತ್ಯವಿರದ ಈ ಸಾಹಿತ್ಯವೂ ನಿರಂತರ ಅಮರ ದಿಗ್ಗಜರುಗಳಾದ ರನ್ನ, ಜನ್ನ, ಪೊನ್ನ, ಹರಿಹರ-ರಾಘವಾಂಕ ಕವಿವರ್ಯರು ಸಾಹಿತ್ಯದ…
ಅನುದಿನ ಕವನ-೨೮೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಒಮ್ಮೆ ಕ್ಷಮಿಸುಬಿಡು ಅಣ್ಣ
ಒಮ್ಮೆ ಕ್ಷಮಿಸಿಬಿಡು ಅಣ್ಣ ಕ್ಷಮಿಸಿಬಿಡು ಅಣ್ಣ ಜಾತಿ, ಧರ್ಮಗಳ ಮೀರಿದ ನಿನ್ನನ್ನು ಜಾತಿ, ಧರ್ಮಗಳ ಮಧ್ಯೆ ಬಂದಿಯಾಗಿಸಿದ್ದಕ್ಕೆ, ಸ್ಥಾವರಕ್ಕಳಿವುಂಟು ಎಂದ ನಿನ್ನನ್ನೇ ಸ್ಥಾವರವನ್ನಾಗಿಸಿದ್ದಕ್ಕೆ – ಕ್ಷಮಿಸಿಬಿಡು ಅಣ್ಣ ಎಲ್ಲರೊಳೊಂದಾಗಿರಬೇಕೆಂದ ನಿನ್ನನ್ನೇ ದೇವರನ್ನಾಗಿಸಿ ದೂರವಿರಿಸಿದುದಕ್ಕೆ ನಿನ್ನ ಹೆಸರಿನ ಭಜನೆಯಿಂದಲೇ ಹೊನ್ನು ಪಡೆಯುತಿರುವುದಕ್ಕೆ –…