ಸಮಾಜ ಸುಧಾರಣೆಗೆ ಶ್ರಮಿಸಿದವರು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು -ಶಿವಶಾಂತವೀರ ಶರಣರು

ಬಳ್ಳಾರಿ, ಜು. 16: ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತಲೇ ಆದರ್ಶ, ಜ್ಞಾನ ಮತ್ತು ತತ್ವಗಳಿಂದ ಜೀವನ ನಡೆಸಿದವರು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು ಎಂದು ಶಿವಶಾಂತವೀರ ಶರಣರು ತಿಳಿಸಿದ್ದಾರೆ. ಬಸವಭವನದಲ್ಲಿ ಭಾನುವಾರ ನಡೆದ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 28ನೇ ಪುಣ್ಯಸ್ಮರಣೆ…

ಬಳ್ಳಾರಿ: ಆ.1 ರಿಂದ ಹಮಾಲರ ಪರಿಷ್ಕೃತ ದರಪಟ್ಟಿ ಜಾರಿ

ಬಳ್ಳಾರಿ, ಜು. 15:ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ಬಳ್ಳಾರಿ ಎಪಿಎಂಸಿ ಹಮಾಲರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಿದ್ದವಾಗಿರುವ ಪರಿಷ್ಕೃತ ದರಪಟ್ಟಿಯು ಆ. 1ರಿಂದ ಜಾರಿಗೆ ಬರಲಿದೆ. ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ…

ಬಳ್ಳಾರಿ: ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಯಶಸ್ವಿ ಆಹಾರಮೇಳ

ಬಳ್ಳಾರಿ, ಜು.14: ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ  ಸ್ವತಂತ್ರ ಪ.ಪೂ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಆಹಾರ ಮೇಳವನ್ನು  ಯಶಸ್ವಿಯಾಯಿತು. ವ್ಯವಹಾರ ಕಲೆಯನ್ನು ಮಕ್ಕಳಿಗೆ ಕಲಿಸುವ ಹಾಗು ಅವರಲ್ಲಿ ಸಾಮಾಜಿಕ ಜವಬ್ದಾರಿ ಹೆಚ್ಚಿಸುವ ಸಲುವಾಗಿ…

ಶ್ರೀ ವೈ. ನಾಗೇಶ ಶಾಸ್ತ್ರಿ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ.ಎಸ್. ಮಂಜುನಾಥ ಆಯ್ಕೆ

ಬಳ್ಳಾರಿ, ಜು.9: ನಗರದ ಶ್ರ್ರೀ ವೈ ನಾಗೇಶ ಶಾಸ್ತ್ರಿ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಸಾಹಿತಿ, ಅಧ್ಯಾಪಕ ಡಾ.ಎಸ್ ಮಂಜುನಾಥ ಅವರು ಆಯ್ಕೆಯಾಗಿದ್ದಾರೆ. ಸ್ಥಳೀಯ ರಾಘವ ಕಲಾ ಮಂದಿರದಲ್ಲಿ ಆಯೋಜನಗೊಂಡಿದ್ದ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.…

‘ಬಡ, ಶೋಷಿತ ಜನರ ಕಣ್ಣೀರು ಒರೆಸಲು ರಾಜಕೀಯಕ್ಕೆ ಬಂದಿರುವೆ’ -ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

  ಬಳ್ಳಾರಿ, ಜು.2: ದುಡ್ಡು, ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಕಟ್ಟಕಡೆಯ, ಬಡ, ಶೋಷಿತ ಜನರ ಕಣ್ಣೀರು ಒರೆಸುವುದು ನನ್ನ ಆದ್ಯತೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಹೇಳಿದರು. ನಗರದ ತುಂಗಭದ್ರಾ…

ಜನಪರ ಕಾಳಜಿಯೊಂದಿಗೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪತ್ರಕರ್ತರಿಗೆ ಜನ‌ಮನ್ನಣೆ -ಹಿರಿಯ ಪತ್ರಕರ್ತ ಕಂ ಕ‌ ಮೂರ್ತಿ

ಬಳ್ಳಾರಿ, ಜೂ.28: ಯಶಸ್ವಿ ಪತ್ರಕರ್ತನಾಗಲು ಸರಳ ವ್ಯಕ್ತಿತ್ವ ಮತ್ತು ಸತತ ಅಧ್ಯಯನ ಶೀಲತೆ ಅತ್ಯಗತ್ಯ ಎಂದು ಹಿರಿಯ ಪತ್ರಕರ್ತ ಕಂ.‌ಕ ಮೂರ್ತಿ ಅವರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ…

ಕಾಪು ಶಾಸಕ ಜಿ.ಸುರೇಶ ಶೆಟ್ಟರಿಗೆ ಜು.1 ಕ್ಕೆ ಬಳ್ಳಾರಿಯಲ್ಲಿ ಅಭಿನಂದನಾ ಸಮಾರಂಭ

ಬಳ್ಳಾರಿ, ಜೂ.28: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ  ಶಾಸಕ ಗುರ್ಮೆ ಸುರೇಶ್ ಪಿ.ಶೆಟ್ಟಿ ಅವರಿಗೆ ನಗರದ ತುಂಗಭದ್ರ ಬಂಟರ ಸಂಘದಿಂದ ಬಂಟ್ಸ್ ಭವನದಲ್ಲಿ ಜು. 1 ರಂದು ಸಂಜೆ 6 ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ‌ ಹೊಟೇಲ್ ಮಾಲೀಕರ…

ಕುಡುತಿನಿ ಬಿಟಿಪಿಎಸ್‍ಗೆ ಭೇಟಿ:  ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು -ಇಂಧನ‌ ಸಚಿವ ಕೆ.ಜೆ.ಜಾರ್ಜ್

ಬಳ್ಳಾರಿ,ಜೂ.26: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು. ಜಿಲ್ಲೆಯ ಕುಡತಿನಿ ಬಳಿಯಿರುವ “ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ”ಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಂಗಾರು ವಿಳಂಬದಿಂದಾಗಿ ವಿದ್ಯುತ್ ಉತ್ಪಾದನೆಗೆ…

ಬಳ್ಳಾರಿ: ನಾಳೆಯಿಂದ(ಜೂ.23) ಮುದುಕನ ಮದುವೆ ಹಾಸ್ಯ ನಾಟಕ ಆರಂಭ – ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಿ.ಕುಮಾರಸ್ವಾಮಿ

ಬಳ್ಳಾರಿ, ಜೂ.22: ಖ್ಯಾತ ನಾಟಕಕಾರ ಪಿ.ಬಿ. ಧುತ್ತರಗಿ ಅವರು ರಚಿಸಿರುವ ಮುದುಕನ ಮದುವೆ (ಮಲ ಮಗಳು) ಹಾಸ್ಯ ನಾಟಕ ಜೂ.23 ಶುಕ್ರವಾರ ದಿಂದ ನಗರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕರ್ಮಿ, ಕಂಪನಿ ಮಾಲೀಕರು…

ಬಳ್ಳಾರಿ: ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು-ರೈತ ಸಂಘ ಒತ್ತಾಯ, ಪ್ರತಿಭಟನೆ

ಬಳ್ಳಾರಿ, ಜೂ.15: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ದ ಜಿಲ್ಲಾ ಸಮಿತಿ ಪದಾಧಿಕಾರಿಗಳು…