ಕೂಡ್ಲಿಗಿಯ ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಹದಿನೆಂಟು ಮೇಕೆ ಬಲಿ

ಕೂಡ್ಲಿಗಿ: ಬಿರುಸಿನ ಸಿಡಿಲ ಹೊಡೆತಕ್ಕೆ ಸೋಮವಾರ 18ಮೇಕೆಗಳು ಬಲಿಯಾದ ಘಟನೆ ತಾಲೂಕಿನ ನೆಲಬೊಮ್ಮನಹಳ್ಳಿಯಲ್ಲಿ ಸಂಭವಿಸಿದೆ. ಮದ್ಯಾಹ್ನ ಸಿಡಿಲ ಹೊಡೆತಕ್ಕೆ ಭೀಮಸಮುದ್ರದ ಮನೆ ಮುಂದಿನ ತೆಂಗಿನಮರಕ್ಕೆ ಬೆಂಕಿ ಬಿದ್ದಿದೆ. ಈಚೆಗಷ್ಟೇ ತಾಲೂಕಿನ ಗ್ರಾಮವೊಂದರ ಇಬ್ಬರು ಕುರಿಗಾಯಿಗಳನ್ನು ಸಿಡಿಲು ಬಲಿ ತೆಗೆದುಕೊಂಡ ಘಟನೆ ಮರೆಯುವ…

ಅಂತಾರಾಷ್ಟ್ರೀಯ ಕ್ರೀಡಾಪಟು ಕೆ.ದಯಾನಂದ್ ಗೆ ಕಾಲೇಜ್ ಸಹಪಾಠಿಗಳಿಂದ ನುಡಿನಮನ

ಹೊಸಪೇಟೆ: ಇತ್ತೇಚೆಗೆ ಅಕಾಲಿಕವಾಗಿ ವಿಧಿವಶರಾದ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ತರಬೇತುದಾರ, ಕ್ರೀಡಾಪಟು ಕೆ. ದಯಾನಂದ ಅವರಿಗೆ ಭಾನುವಾರ ಕಾಲೇಜ್ ಸಹಪಾಠಿಗಳು ನುಡಿ ನಮನ ಸಲ್ಲಿಸಿದರು. ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ 1984 ರಿಂದ 1989ರವರೆಗೆ ಪಿಯುಸಿ-ಬಿಕಾಂ ವಿದ್ಯಾಭ್ಯಾಸ ಮಾಡಿದ ಸಹಪಾಠಿಗಳು ದಯಾನಂದ ಅವರಿಗೆ…

ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ: ಡಿಸಿ ಪವನಕುಮಾರ ಮಾಲಪಾಟಿ

ಬಳ್ಳಾರಿ: ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ. ಜನರು ಈ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಸುದ್ದಿಗಾರೊಂದಿಗೆ ಭಾನುವಾರ ಮಾತನಾಡಿದರು. ರೋಗಲಕ್ಷಣಗಳು ನಿರ್ಲಕ್ಷಿಸಬೇಡಿ,…

ಸಾರ್ಥಕ. ಸೇವೆಯ ಕೊನೆಯಲ್ಲಿ ನೋವಲ್ಲಿ ವಿದಾಯ ಹೇಳಿದ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ

ಬಳ್ಳಾರಿ: ಸರ್ಕಾರಿ ಅಧಿಕಾರಿಯಾಗುವುದು ಸೇವೆ ಮಾಡಲು ದೇವರು ನೀಡಿದ ಅವಕಾಶ ವೆಂದೇ ಭಾವಿಸಿ ತಮ್ಮ ವೃತ್ತಿ ಬದುಕಿನ ಅತ್ಯಂತ ದಕ್ಷ ಆಡಳಿತಗಾರರಾಗಿ ,ಪ್ರಾಮಾಣಿಕವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಬಳ್ಳಾರಿ ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ ಅವರು…

ಬಳ್ಳಾರಿ-ವಿಜಯನಗರ ಜಿಲ್ಲೆಗಳ ಕೋವಿಡ್ ಸ್ಥಿತಿಗತಿ: ವಿಸಿ ಮೂಲಕ ಪರಿಶೀಲಿಸಿದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬಳ್ಳಾರಿ: ಕೋವಿಡ್ ಸೊಂಕಿತರಾಗಿ ಹೋಂಐಸೋಲೇಶನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತು ಗುಣಮುಖರಾಗುವವರೆಗೆ ಅವರ ಆರೋಗ್ಯದ ಮೇಲೆ ಸದಾ ನಿಗಾವಹಿಸ ಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಅವರು ಬುಧವಾರ ಬಳ್ಳಾರಿ ಮತ್ತು ವಿಜಯನಗರ…

ಅಧಿಕಾರಿಗಳು ಕೋವಿಡ್-19ನ ನಿಯಂತ್ರಣಕ್ಕೆ ಅಗತ್ಯ, ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು -ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್

ವಿಜಯನಗರ: ಜಿಲ್ಲೆಯ ಅಧಿಕಾರಿಗಳು ಕೋವಿಡ್-19ನ ನಿಯಂತ್ರಣಕ್ಕೆ ಅಗತ್ಯ, ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೂಲ ಸೌಕರ್ಯ ಅಭಿವೃದ್ದಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು. ಹೊಸಪೇಟೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಭಾನುವಾರ…

ಹೊಸಪೇಟೆ: ನಗರಸಭೆವತಿಯಿಂದ ಮ್ಯಾನುವಲ್ ಸ್ಕಾವೆಂಜರ್ ನಿಷೇಧ ಕುರಿತ ಬೀದಿ ನಾಟಕ ಪ್ರದರ್ಶನ

ಹೊಸಪೇಟೆ(ವಿಜಯನಗರ): ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮ್ಯಾನುವಲ್ ಸ್ಕ್ಯಾವೆಂಜರ್ಸ್ ನಿಷೇಧ ಕುರಿತ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಬೀದಿ ನಾಟಕವು ಸೋಮವಾರ ಹೊಸಪೇಟೆ ನಗರಸಭೆಯ ಆವರಣದಲ್ಲಿ ಪ್ರದರ್ಶನಗೊಂಡಿತು. ಮ್ಯಾನುವಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013 ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ…

ದರೋಜಿ ಕರಡಿಧಾಮಕ್ಕೆ ಅರಣ್ಯ ಸಚಿವ ಲಿಂಬಾವಳಿ ಭೇಟಿ, ಪರಿಶೀಲನೆ

ವಿಜಯನಗ(ಹೊಸಪೇಟೆ): ಬಳ್ಳಾರಿ ವೃತ್ತದ ಅರಣ್ಯಾಧಿಕಾರಿಗಳ ಸಭೆಯನ್ನು ಜಿಲ್ಲೆಯ ಕಮಲಾಪುರದ ಪ್ರಕೃತಿ ವಿಶ್ಲೇಷಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಸಭೆಯ ಅದ್ಯಕ್ಷತೆಯನ್ನು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ವಹಿಸಿದ್ದರು. ಜಿಲ್ಲೆಯ ಅರಣ್ಯ ಭವನಕ್ಕೆ ಭೇಟಿ ನೀಡಿದ ಸಚಿವರು ಅರಣ್ಯ ಇಲಾಖೆಯ…

ರಾಜ್ಯ ಸರ್ಕಾರಿ ಕಚೇರಿ ವೇಳೆ ಬದಲಾವಣೆ: ಏ.12ರಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರವರೆಗೆ

ಬಳ್ಳಾರಿ: ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಾಗುವ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಮತ್ತು ಕಲಬುರಗಿ ವಿಭಾಗದ ಏಳು ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಏ.12ರಿಂದ ರಾಜ್ಯ…

ವಿದ್ಯಾರ್ಥಿಗಳ ಹೊಸ ವಿಚಾರ ಮತ್ತು ಚಿಂತನೆಗಳಿಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯ -ಕುಲಪತಿ ಡಾ ಸ.ಚಿ.ರಮೇಶ

  ಹೊಸಪೇಟೆ: ಗುರು ದೇವರಗಿಂತ ದೊಡ್ಡವನು. ಗುರು ಕಲಿಸಿದ ವಿದ್ಯೆ ಜೀವನದಲ್ಲಿ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ಗುರುಗಳು ಸದಾ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾ ಸಾರ್ಥಕತೆ ಮೆರೆಯುತ್ತಾರೆ ಎಂದು ಕನ್ನಡ ವಿಶ್ವವಿದ್ಯಾವಲಯದ ಕುಲಪತಿ ಡಾ ಸ. ಚಿ.…