ಬಳ್ಳಾರಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ -ಕಾಂಗ್ರೆಸ್  ಮುಖಂಡ ಬಿ. ವೆಂಕಟೇಶ್ ಪ್ರಸಾದ್

ಬಳ್ಳಾರಿ, ಡಿ.2: ಬಳ್ಳಾರಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಿ. ವೆಂಕಟೇಶ್ ಪ್ರಸಾದ್ ಅವರು ಹೇಳಿದರು. ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಶುಕ್ರವಾರ ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು…

ಅಧಿಕಾರಿಗಳ ವಿರುದ್ಧ ದೂರು ಕೇಳಿಬಂದರೆ ಶಿಸ್ತು ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಎಚ್ಚರಿಕೆ

ಬಳ್ಳಾರಿ,ಡಿ.2: ‘ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ ಅಂತಹ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

ಮಾನವೀಯ ಮೌಲ್ಯಗಳನ್ನು ಕೀರ್ತನೆಗಳ ಮೂಲಕ ಸಾರಿದ ಶ್ರೇಷ್ಠ ದಾರ್ಶನಿಕ ಕನಕದಾಸರು -ಡಾ. ದಸ್ತಗೀರಸಾಬ್  ದಿನ್ನಿ

ಬಳ್ಳಾರಿ, ನ. ೩೦: ಮನುಷ್ಯನ ಮನಸ್ಸಿನ ಒಳತೋಟಿ, ಬದುಕಿನ ನಿಗೂಢತೆ, ಸಾಮಾಜಿಕ ಕೆಡುಕು ಮತ್ತು ಮಾನವೀಯ ಮೌಲ್ಯಗಳನ್ನು ಕೀರ್ತನೆಗಳ ಮೂಲಕ ಸಾರಿ ಹೋದ ಕನಕದಾಸರು ಸರ್ವ ಶ್ರೇಷ್ಠ ಚಿಂತಕರಾಗಿದ್ದಾರೆ ಎಂದು  ಕನ್ನಡ ವಿಭಾಗದ ಮುಖ್ಯಸ್ಥರಾದ   ಡಾ. ದಸ್ತಗೀರಸಾಬ್  ದಿನ್ನಿ ಅವರು…

ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಶೀಘ್ರ ಶುಭ ಸಂದೇಶ ರವಾನೆ! -ಯುವ ಸಬಲೀಕರಣ, ಕ್ರೀಡಾ ಸಚಿವ ಬಿ.ನಾಗೇಂದ್ರ

ಬಳ್ಳಾರಿ, ನ.೩೦:   ತಮ್ಮ ಸೇವೆಯನ್ನು ಖಾಯಂ ಗೊಳಿಸಲು ಒತ್ತಾಯಿಸಿ ಕಳೆದ ಏಳು ದಿನಗಳಿಂದ ಅನಿರ್ಧಿಷ್ಟಾವಧಿ  ಮುಷ್ಕರ ನಡೆಸುತ್ತಿರುವ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಶೀಘ್ರ ಶುಭ ಸಂದೇಶ ತಲುಪಲಿದೆ!? ಹೌದು! ಈ ವಿಷಯವನ್ನು  ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ…

ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಬರ ಪರಿಹಾರ ನಮ್ಮ ಹಕ್ಕು; ಕೃಷಿ ಸಚಿವ ಎನ್ ಚಲುವರಾಯಸ್ವಾಮಿ

ಬಳ್ಳಾರಿ. ನ. 29: ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ ರಾಜ್ಯದ ಪಾಲು ಕೇವಲ 30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ .ಬರ ಪರಿಹಾರ ನಮ್ಮ ಹಕ್ಕು ನ್ಯಾಯಸಮ್ಮತವಾಗಿ ನೀಡಬೇಕಿದೆ ಎಂದು…

ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ ಬಳ್ಳಾರಿಯಲ್ಲಿ ಏಳನೇ ದಿನದತ್ತ!

ಬಳ್ಳಾರಿ, ನ.28: ತಮ್ಮ ಸೇವೆಯ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೈಗೊಂಡಿರುಪ ಅನಿರ್ಧಿಷ್ಟಾವಧಿ ಧರಣಿ ಆರನೇ ದಿನವಾದ ಮಂಗಳವಾರವೂ ಮುಂದುವರೆಯಿತು. ನಗರದ ಎಸ್ ಎಸ್ ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಮುಂದುಗಡೆ…

ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ -ನ್ಯಾಯವಾದಿ ಕೆ.ಜಿತೇಂದ್ರ

ಬಳ್ಳಾರಿ, ನ.28: ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದು ವಕೀಲ ಹಾಗೂ ಪೊಲೀಸ್ ಜಿಮ್ ಖಾನಾ ಅಧ್ಯಕ್ಷ ಕೆ.ಜಿತೇಂದ್ರ ಅಭಿಪ್ರಾಯಪಟ್ಟರು. ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ…

ಬೌದ್ಧ ತಾತ್ವಿಕತೆ ಪೂರ್ಣ ಪ್ರಮಾಣದ ಯಾನ   -ಡಾ.ನಟರಾಜ ಬೂದಾಳು 

ಬಳ್ಳಾರಿ ,ನ 26: ಬೌದ್ಧ ತಾತ್ವಿಕತೆ ಎನ್ನುವುದು ಅದೊಂದು ಜೀವನ ಮಾರ್ಗ ಎಂದು ಹಿರಿಯ ಚಿಂತಕ ಡಾ.ನಟರಾಜ್ ಬೂದಾಳು ಅವರು ತಿಳಿಸಿದರು. ನಗರದ ಎಸ್.ಎಸ್.ಎ  ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಭಾಗ ಆಯೋಜಿಸಿದ್ದ  ‘ ‘ಬೌದ್ಧ ತಾತ್ವಿಕತೆಯ ಪ್ರಸ್ತುತತೆ’…

ರಜನಿ ಲಕ್ಕ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಸಚಿವ ನಾಗೇಂದ್ರ, ಡಿಸಿ ಅಭಿನಂದನೆ

ಬಳ್ಳಾರಿ,ನ.23:  ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಸ್ಥಳೀಯ ಗಾಂಧಿನಗರದ ಈಜು ತರಬೇತುದಾರರಾದ ರಜನಿ ಲಕ್ಕ ಅವರು ಭಾಜನರಾಗಿದ್ದಾರೆ. ಗುರುವಾರ ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…

ಪುಕ್ಕಟೆ ಭಾಗ್ಯ ನೀಡುವ ಬದಲು ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಿ – ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ ಒತ್ತಾಯ

ಬಳ್ಳಾರಿ,ನ.23: ರಾಜ್ಯ ಸರಕಾರ ಪುಕ್ಕಟೆ ಭಾಗ್ಯ ನೀಡುವ ಬದಲು ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ ಅವರು ಒತ್ತಾಯಿಸಿದರು. ತಾಲೂಕಿನ‌ ಶಿಡಿಗನಮೊಳ, ಮೀನಳ್ಳಿ ಹಾಗೂ ಬೈಲೂರು ಗ್ರಾಮಗಳಲ್ಲಿ ಜೆಡಿಎಸ್ ಪಕ್ಷ ಮಠಾಧೀಶರ ಜತೆ ಬರ…