ಇಂದು(ಏ.28) ಸಂಜೆ ಬಳ್ಳಾರಿಗೆ ರಾಹುಲ್ ಗಾಂಧಿ

  ಬಳ್ಳಾರಿ, ಏ.28: ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು (ಏ.28) ಸಂಜೆ ನಗರಕ್ಕೆ ಆಗಮಿಸುವರು. ನಗರದ ಟಿಬಿ ಸ್ಯಾನಿಟೋರಿಯಂ ನಿಂದ 4-30 ಗಂಟೆಗೆ ಆರಂಭವಾಗುವ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗಳ‌ ಪರವಾಗಿ ಮತಯಾಚಿಸುವರು. ಸಂಜೆ…

ಬಳ್ಳಾರಿ ಜಿಲ್ಲೆ: ಇಂದು (ಏ. 17) 10 ಅಭ್ಯರ್ಥಿಗಳಿಂದ 12 ನಾಮಪತ್ರ ಸಲ್ಲಿಕೆ

ಬಳ್ಳಾರಿ,ಏ.17: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು,  ಸೋಮವಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳಿಂದ ಒಟ್ಟು 12 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು…

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ

ಬಳ್ಳಾರಿ/ಬೆಂಗಳೂರು, ಏ.7: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಡಿ. ತ್ರಿವೇಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮೇಯರ್ ಆಗಿ ಆಯ್ಕೆಯಾದ ಬಳಿಕ ತಮ್ಮ ಪಕ್ಷದ…

ಬಳ್ಳಾರಿಯಲ್ಲಿ ಅರ್ಥಪೂರ್ಣ, ಮಾದರಿ ಸೌಹಾರ್ದ ಯುಗಾದಿ ಆಚರಣೆ

ಬಳ್ಳಾರಿ, ಮಾ.22:ಪ್ರಸ್ತುತ ಸ್ವಾರ್ಥ, ಅಧಿಕಾರ ಲಲಾಸೆ, ಮತ್ತಿತರ ಕ್ಷುಲ್ಲಕ ಕಾರಣಗಳಿಗಾಗಿ ಸಾಮರಸ್ಯ ಕದಡುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದರೆ ನಗರದಲ್ಲಿ ಹಿರಿಯ ಸಾಹಿತಿಯೊಬ್ಬರ ಕುಟುಂಬ ಸೌಹಾರ್ಧ ಯುಗಾದಿ ಆಚರಿಸಿ ಗಮನ ಸೆಳೆದಿದೆ. ನಗರದ ಹಿರಿಯ ಸಾಹಿತಿ ಎಪ್ಪರೆಡರ ಹರೆಯದ ಡಾ. ವೆಂಕಟಯ್ಯ ಅಪ್ಪಗೆರೆ…

ಬಳ್ಳಾರಿ: ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ಸಾಯಿಶೃತಿ

ಬಳ್ಳಾರಿ, ಮಾ. 16: ರಂಗಭೂಮಿಯ ಖ್ಯಾತ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರ ಪುತ್ರಿ ಸಾಯಿಶೃತಿ ಹಂದ್ಯಾಳು ಅವರು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆದ ಪರೀಕ್ಷೆಯಲ್ಲಿ ಹಿಂದುಸ್ತಾನಿ ಸಂಗೀತದ ವಿದ್ವತ್ ಪದವಿಯ ಅಂತಿಮ ಪರೀಕ್ಷೆಯಲ್ಲಿ…

ಯಶಸ್ಸು ಸೋಮಾರಿಗಳ ಸ್ವತ್ತಲ್ಲ -ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್

ಬಳ್ಳಾರಿ, ಮಾ.15: ಯಶಸ್ಸು ಸೋಮಾರಿಗಳ ಸ್ವತ್ತಲ್ಲ, ಶ್ರಮ ಪಟ್ಟರೆ ಯಶಸ್ಸು ಖಂಡಿತಾ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿಗಳು ಪಿ.ಎಸ್.ಮಂಜುನಾಥ್ ಅವರು ಹೇಳಿದರು. ನಗರದ ಸನ್ಮಾರ್ಗ ಗೆಳೆಯರ ಬಳಗ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪೂರ್ವ ವಲಯ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ…

ಬಳ್ಳಾರಿ: ಪೂರ್ವ ವಲಯದ ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್

ಬಳ್ಳಾರಿ, ಮಾ.14: ಬಳ್ಳಾರಿ ಪೂರ್ವ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಯೀಮುರ್ ರಹಮಾನ್ .ಕೆ .ಎಸ್. ಅವರು ನಿಯುಕ್ತಿಗೊಂಡಿದ್ದಾರೆ. ಬುಧವಾರ( ಮಾ.15) ಬೆಳಿಗ್ಗೆ 10-30ಗಂಟೆಗೆ ಕೋಟೆಯಲ್ಲಿರುವ ಬಿಇಓ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವರು ಎಂದು ಕಚೇರಿ ಮೂಲಗಳು ಕರ್ನಾಟಕ ಕಹಳೆಗೆ ತಿಳಿಸಿವೆ. ಈಚೆಗೆ…

ಕಸಾಪ ಸಮ್ಮೇಳನದಲ್ಲಿ ಮುದ ನೀಡಿದ ‘ದನ‌ ಕಾಯೋರ ದೊಡ್ಡಾಟ’

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಬುಧವಾರ ಸಂಜೆ ರಾಘವ ಕಲಾ ಮಂದಿರದಲ್ಲಿ ಜರುಗಿದ  ದನ ಕಾಯೋರ ದೊಡ್ಡಾಟ ಹಾಸ್ಯ ನಾಟಕ ಸಭಿಕರನ್ನು ಮುದಗೊಳಿಸಿತು. ಸಾರಥಿ ಪಾತ್ರದಲ್ಲಿ ಪುರುಷೋತ್ತಮ…

ಬಳ್ಳಾರಿ: ಸಾರ್ವತ್ರಿಕ ಚುನಾವಣೆಗೆ ಬೇಕಾದ ಅಗತ್ಯ ಸಿದ್ಧತೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ

ಬಳ್ಳಾರಿ,ಫೆ.28: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಂಬಂಧಿಸಿದ ಮತಗಟ್ಟೆ ಕೇಂದ್ರಗಳ ಪರಿಶೀಲನೆ, ಯುವಕ-ಯುವತಿ ಮತದಾರರ ಸೇರ್ಪಡೆ ಹಾಗೂ ಇತರೆ ಪೂರಕ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ…

ಹಲಕುಂದಿ ಬಳಿ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ಶಿಕ್ಷಕಿ ಪುಷ್ಪಾವತಿ ವಿಧಿವಶ

ಬಳ್ಳಾರಿ, ಫೆ.16: ತಾಲೂಕಿನ ಹಲಕುಂದಿ ಗ್ರಾಮದ ವಿಬಿಎಸ್ ಮಠದ ಬಳಿ ಫೆ. 13ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗ್ರಾಮದ ಸಹಿಪ್ರಾ ಶಾಲೆಯ ಹಿರಿಯ ಶಿಕ್ಷಕಿ ಪುಷ್ಪಾವತಿ(59) ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಸುಕಿನ ಜಾವ ನಿಧನರಾದರು. ನಗರದ ಟಿಬಿ ಸ್ಯಾನಿಟೋರಿಯಂ…