ಕೊಟ್ಟ ಮಾತಿನಂತೆ ರಾಜ್ಯದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದೇವೆ -ಸಿಎಂ ಸಿದ್ದರಾಮಯ್ಯ

ಮೈಸೂರು, ಅ. 3: ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ…

ಟೀಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ: ಇಂದು ಊಹಾ ಪತ್ರಿಕೋದ್ಯಮವೇ ಹೆಚ್ಚಾಗಿದೆ -ಸಿ.ಎಂ.ಸಿದ್ದರಾಮಯ್ಯ ಬೇಸರ

ಬೆಂಗಳೂರು ಅ 2: ಗಂಡ ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮನಾ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ‌ ಇಲಾಖೆ ವಾರ್ತಾ ಸೌಧದಲ್ಲಿ  ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತಿ, ಟೀಯೆಸ್ಸಾರ್, ಮೊಹರೆ ಹಣಮಂತರಾಯ…

ಅನುದಿನ ಕವನ-೧೩೭೧, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಏನೆಂದು ಹೆಸರಿಡಲಿ!?

ಏನೆಂದು ಹೆಸರಿಡಲಿ!? ಬರಬಿದ್ದ ಮನಕೆ ಮಧುರ‌ ಮಳೆ ಸುರಿದ ಒಲವೇ.. ಮನದ ಮರುಭೂಮಿಯಲಿ ಹಸಿರುಕ್ಕುವಂತೆ ಮಾಡಿದ ಒಲವೇ.. ಉರಿಗಾಳಿಗೆ ಸಿಲುಕಿ ನೊಂದ ಜೀವಕ್ಕೆ ಸಾಂತ್ವನದ ತಂಪೆರೆದ ಒಲವೇ.. ಕತ್ತಲಾದ ಬಾಳಿಗೆ ಪ್ರೀತಿಯ ಕಿರುದೀಪ ಹಚ್ಚಿಟ್ಟ ಒಲವೇ.. ಸೋತ ಉಸಿರಿಗೆ ಭರವಸೆಯ ಹೆಗಲು…

ಇಂದು (ಅ.3) ನಾನ್ ಯುಜಿಸಿ ಪದವಿ ಅತಿಥಿ ಉಪನ್ಯಾಸಕರ ದಂಡು  ಬೆಂಗಳೂರಿಗೆ: ಉನ್ನತ ಶಿಕ್ಷಣ ಸಚಿವರು, ಆಯುಕ್ತರಿಗೆ ಮನವಿ

ಬೆಂಗಳೂರು, ಅ.2: ಐದು, ಹತ್ತು, ಹದಿನೈದು, ಇಪ್ಪತ್ತು‌ ವರ್ಷಗಳಿಂದ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ‌ಕಾರ್ಯನಿರ್ವಹಿಸುತ್ತಿರುವ ನಾನ್ ಯುಜಿಸಿ ಪದವಿ ಅತಿಥಿ ಉಪನ್ಯಾಸಕರು‌ ಅ.3ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ‌ ರಾಜಧಾನಿಗೆ ಆಗಮಿಸಿ ತಮ್ಮ ಸೇವೆಯನ್ನು ಕಡ್ಡಾಯವಾಗಿ ಮುಂದುವರೆಸಲು ಒತ್ತಾಯಿಸಿ ಕಾಲೇಜು ಶಿಕ್ಷಣ…

ಬೆಂಗಳೂರು: ಟಿಎಸ್‌ಆರ್, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಿಗೆ ಅ.3ಕ್ಕೆ ಅಭಿನಂದನೆ

  ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ಮತ್ತು ಪ್ರೆಸ್ ಕ್ಲಬ್ ಆಫ್ ಬೆಂಗಳೂರು(PCB) ಇವರ ಸಂಯುಕ್ತಾಶ್ರದಲ್ಲಿ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಪುರಸ್ಕೃತರಿಗೆ ಅ.3ರಂದು ಗುರುವಾರ ಚಹಾಕೂಟ ಮತ್ತು ಅಭಿನಂದನಾ ಕಾರ್ಯಕ್ರಮ…

ಅನುದಿನ‌ ಕವನ-೧೩೭೦, ಕವಯಿತ್ರಿ: ಮಮತಾ ಅರಸೀಕೆರೆ, ಹಾಸನ‌‌ ಜಿ., ಕವನದ ಶೀರ್ಷಿಕೆ:ಆರಾಧನೆ

ಆರಾಧನೆ ಯಾವುದೊ ಹಾಡೊಂದು ಗುಂಗಾಗಿದೆ ಪ್ರೇಮವಾಗಿದೆಯೆಂದು ತಿಳಿಯಬೇಕು ಯಾವುದೊ ದನಿಯೊಂದು ಸೆಳೆಯುತ್ತಿದೆ ಅನುರಕ್ತಿಯಾಗಿಯೆಂದು ಅರಿಯಬೇಕು ಯಾವುದೊ ಬಿಂಬವೊಂದು ಕಣ್ಣಲ್ಲೇ ಕುಳಿತಿದೆ ವ್ಯಾಮೋಹವಾಗಿದೆಯೆಂದು ತಿಳಿಯಬೇಕು ಯಾವುದೊ ಬಾಂಧವ್ಯವೊಂದು ಕಾಡುತ್ತಿದೆ ಪ್ರಣಯವಾಗಿದೆಯೆಂದು ಅರಿಯಬೇಕು ಯಾವುದೊ ದಾರಿಯೊಂದು ಸೆಳೆದಿದೆ ಅನುರಾಗವಾಗಿದೆಯೆಂದು ತಿಳಿಯಬೇಕು. ಯಾರದೋ ಚಿತ್ರವೊಂದು ಎದೆಯಲ್ಲಿ…

ಮೈಸೂರು: ಮುಡಾ ಪರಿಹಾರ ರೂಪದ ನಿವೇಶನಗಳನ್ನು ಹಿಂದಿರುಗಿಸಿದ ಪಾರ್ವತಿ ಸಿದ್ಧರಾಮಯ್ಯ

ಮೈಸೂರು, ಸೆ.30: ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.                 …

ಅನುದಿನ ಕವನ-೧೩೬೯, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ‌ ಜಿ., ಕವನದ ಶೀರ್ಷಿಕೆ:ಎದುರಾಬದುರಾ ಕೂತು

ಎದುರಾಬದುರಾ ಕೂತು ನಾವಿಬ್ಬರೂ ಎದುರಾಬದುರಾ ಕೂತು ಎಷ್ಟು ಶತಮಾನವಾಯಿತು ಆಗ ನೀನು ಆಡಿನಮರಿಯ ಹಾಗೆ ಛಂಗನೆ ಜಿಗಿಯುತ್ತಿದ್ದೆ ನನ್ನ ಮಡಿಲಿಗೆ ಹುಸಿಮುನಿಸು ಮಾಡಿ ಚಂಡು ಮುಂದೆ ಮಾಡಿ ಗುದ್ದಲು ಬರುತ್ತಿದ್ದೆ ಪಾದ ಮುತ್ತುವ ಲಂಗವ ಎತ್ತಿಕಟ್ಟಿ ಕುಂಟಲಿಪಿ ಆಡುವಾಗ ನಾನು ನಿನ್ನ…

ಅನುದಿನ ಕವನ-೧೩೬೮, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ:ಬದುಕುವ ಕಲೆ

ಬದುಕುವ ಕಲೆ “ಉಸಿರುಗಟ್ಟಿಸುತ್ತಿದ್ದ ಧ್ವೇಷವನ್ನು ಉಫ್ ಎಂದು ಮೇಲಕ್ಕೆಸೆದುಬಿಟ್ಟೆ/ ಮೋಡಗಟ್ಟಿದ ಬಾನು ಕಪ್ಪಾಗಿ ಮರುದಿನವೇ ಮಳೆ/ಬಿಸಿಲಿಗೊಣಗಿದ ಕೆರೆಕಟ್ಟೆಯನು ತುಂಬುತ್ತಿದೆ/ತಬ್ಬಿ ಪ್ರೀತಿಯ ಸೆಲೆ. ಹತಾಷೆ ಒಂಟಿತನ ವಿಷಾದದ ಬೀಜಗಳನ್ನೆಲ್ಲಾ/ತೂರಿ ಬೀಸಿದೆ ಮನೆಯ ಹಿಂದಿನ ಹಿತ್ತಲಿನೊಳಗೆ/ ತಿಂಗಳೊಳಗೇ ಮಲ್ಲಿಗೆ ಗುಲಾಬಿ ಪಾರಿಜಾತಗಳು/ಘಮಘಮಿಸಿ ಅರಳಿ ಹೂ…

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು -ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು, ಸೆ. 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.  ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ…