ನನ್ನ ರಕ್ತ ಕುದಿಯುವುದಿಲ್ಲ ನನ್ನ ರಕ್ತ ಕುದಿಯುವುದಿಲ್ಲ ನೀನು ನನ್ನ ಮನೆಯ ಮಗುವಲ್ಲ ನನ್ನ ರಕ್ತ ಕುದಿಯುವುದಿಲ್ಲ ನಿನ್ನ ನನ್ನ ಧರ್ಮ ಜಾತಿ ಊರು ಕೇರಿ ಒಂದೇ ಅಲ್ಲ ನನ್ನ ರಕ್ತ ಕುದಿಯುವುದಿಲ್ಲ ನಿನ್ನ ನೋವು ಸಾವು ನಾನಪ್ಪಿದ ಸಿದ್ಧಾಂತಕ್ಕೆ ಒಳಪಡುವುದಿಲ್ಲ…
Category: ರಾಜ್ಯ
ಅನುದಿನ ಕವನ-೧೩೩೪, ಕವಯಿತ್ರಿ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ, ಉತ್ತರ ಕನ್ನಡ
ಲೋಕವೇ ತಣ್ಣಗಾಗು ಮಲಗಿಸಬೇಕು ಶಿಶುವನ್ನು. ಕಾಣಬೇಕು ಅದು ಬಣ್ಣಿಸಲಾಗದ ಕನಸುಗಳನ್ನು. ನಂಬಬೇಕು ಲೋಕ ತಾನರಿಯಲಾರದ ಶಿಶು ಕಂಡ ಕನಸುಗಳನ್ನು ಉಬ್ಬಿದೆದೆಯ ನಾಯಕನೇ ನಿಲಿಸು ನಿನ್ನ ಉದ್ದುದ್ದ ಪೊಳ್ಳು ಭಾಷಣಗಳನ್ನು. ಕೇಳಿಸಬೇಕು ಮಗುವಿಗೆ ಪ್ರೇಮ ರಾಗದ ಮಟ್ಟುಗಳನ್ನು, ‘ಲಿಂಗ ಮೆಚ್ಚಿ ಅಹುದಹುದೆನುವ’ ನಿತ್ಯ…
ನಟ ದರ್ಶನ್ ಪ್ರಕರಣ: ಸಂಬಂಧಪಟ್ಟವರ ವಿರುದ್ಧ ಕ್ರಮ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ, ಆ. 26: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಪರಿಗಣನೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. …
ಅನುದಿನ ಕವನ-೧೩೩೩, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಖಾಲಿಯೊಳಿದೆ ಜಗದೆಲ್ಲ ಬಯಲೆ
ಖಾಲಿಯೊಳಿದೆ ಜಗದೆಲ್ಲ ಬಯಲೆ ನಾನೆಂದು ಖಾಲಿ ಹಾಳೆಯಾಗಿದ್ದೆ ನೀ ಬರುವವರೆಗೆ ಅದೆಷ್ಟು ಕಲೆಗಾರರ ಕೈ ಹಿಡಿತದಿಂದ ಪಾರಾಗಿ ಕೂತಿದ್ದೆ ನನ್ನ ಚಿತ್ರಿಸಿ ತೋರಬಲ್ಲವರಿಗಾಗಿ ಕನವರಿಸಿದ್ದೆ ನೀನೂ… ನಿನ್ನನ್ನೇ ಬಿಡಿಸಿ ಬಣ್ಣ ಬಣ್ಣ ತುಂಬಿದೆ ಕಟ್ಟಿನ ಮೂಲೆಯಲೊಂದು ಓರೆ ಸಹಿ ಹಾಕಿ ಮೊಳೆಗೆ…
ಅನುದಿನ ಕವನ-೧೩೩೨, ಕವಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು, ಕವನದ ಶೀರ್ಷಿಕೆ:ನನ್ನೊಳಗಿದ್ದ ನೋವು
ನನ್ನೊಳಗಿದ್ದ ನೋವು ನನ್ನೊಳಗಿದ್ದ ನೋವು ಒಳಗೇ ಬೆಳೆಬೆಳೆದು ಭುಸುಗುಡುವ ಹಾವಾಯಿತು, ಪರಿಸರಕೆ ವಿಷವೂಡಿತು. ನನ್ನೊಳಗಿದ್ದ ನೋವು ಒಳೊಳಗೇ ಮಸೆದು ಸಾರವೆಲ್ಲ ಕೀವಾಯಿತು, ದೇಹದೊಳಗೇ ವಿಷವಾಯಿತು. ನನ್ನೊಳಗಿದ್ದ ನೋವ ಹೊರಕಳಿಸುವ ಯತ್ನ ಇನ್ನಿಲ್ಲದಂತೆ ನೆಲಕಚ್ಚಿತು, ಕಣಕಣವೂ ಹೊರಳಾಡಿತು. ದೂರದಿಂದ ತೇಲಿಬಂದ ಮನಮಿಡಿಯುವ ನಾದ…
ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ನಾಡು ಕಂಡ ಅಪ್ರತಿಮ ಪ್ರತಿಭಾನ್ವಿತ ಜಾನಪದ ಕಲಾವಿದೆ -ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ ರವಿ ಬಣ್ಣನೆ
ಬಳ್ಳಾರಿ, ಆ.24: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ನಾಡು ಕಂಡ ಅಪ್ರತಿಮ ಪ್ರತಿಭಾನ್ವಿತ ಜಾನಪದ ಕಲಾವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿ ಅವರು ಬಣ್ಣಿಸಿದರು. ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…
ಅನುದಿನ ಕವನ-೧೩೩೧, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಅದೇ ಧ್ಯಾನ…
ಅದೇ ಧ್ಯಾನ… ಈ ಮರಗಳನ್ನು ಕಂಡರೆ ನನಗೆ ಅಸೂಯೆ, ಅಂದೆ. ಅವಳು ನನ್ನತ್ತ ನೋಡಿದಳು. ಮರಗಳಲ್ಲೂ ಗಂಡುಮರ ಹೆಣ್ಣುಮರ ಇರುತ್ತವೆ, ನೆಲದಲ್ಲಿ ಬೇರು ಬಿಟ್ಟ ಅವು ಕೂಡುವುದಕ್ಕೆ ಹೂ ಬಿಡುತ್ತವೆ, ಅಂದೆ. ಅವಳು ಹೂವುಗಳನ್ನು ದಿಟ್ಟಿಸಿದಳು ದುಂಬಿಗಳು ಬೀಜಗಳನ್ನು ಬಿತ್ತುತ್ತಿದ್ದವು. ಸೌಂದರ್ಯ…
ಅನುದಿನ ಕವನ-೧೩೩೦, ಹಿರಿಯ ಕವಿ: ಅಶೋಕ ಶೆಟ್ಟರ್, ಧಾರವಾಡ, ಕವನದ ಶೀರ್ಷಿಕೆ: ಗೊಂದಲ
ಗೊಂದಲ ಕುರುಡು ಎಂದವನ ಕೈ ಹಿಡಿದು ಅರ್ಧ ದಾರಿ ಸವೆಸಿದೆ ಮೆಲ್ಲಗೆ, ಹರಳೊಂದೂ ಪಾದಕ್ಕೆ ಒತ್ತದಂತೆ ಸರಬರ ಸಾಗುವ ವಾಹನ ಯಾವ ಮೊನಚೂ ಮೈ ತಾಗದಂತೆ ಕಣ್ಣಿಗೆ ದೃಶ್ಯ ತಾಕದಿದ್ದರೆ ಪಾದಕ್ಕೆ ನೋವು ತಾಕದೆ? ಆ ಇಂದ್ರಿಯದ ಊನ ಅದರದು ಈ…
ಅನುದಿನ ಕವನ-೧೩೨೯, ಕವಿ: ಅನಂತ್ ಕುಣಿಗಲ್, ಬೆಂಗಳೂರು, ಕವನದ ಶೀರ್ಷಿಕೆ:ಗಾಳಿ ತುಂಬುವ ಹುಡುಗ
ಗಾಳಿ ತುಂಬುವ ಹುಡುಗ ಉಸ್ ಉಸ್ ಎನ್ನುತ್ತಾ ಜಗದ ಎಲ್ಲ ಗಾಳಿ ಬಲೂನು ತುಂಬುತ್ತಿತ್ತು ಹುಡುಗನ ಕಾಲುಗಳು ಸೋತಿರಲಿಲ್ಲ ಹಸಿವು ಕಣ್ಣಲ್ಲಿತ್ತು ಹೋಗಿ ಬರುವವರು ಹಾಯ್ ಹೇಳುತ್ತಿದ್ದರು ಬಣ್ಣ ಬಣ್ಣದ ಬಲೂನಿಗೆ ಕೊಳ್ಳುವವರು ಕಮ್ಮಿ ಹುಡುಗನ ಆಸೆ ಬತ್ತಿರಲಿಲ್ಲ ಗಾಳಿ ತುಂಬಿ…
ಅನುದಿನ ಕವನ-೧೩೨೮, ಕವಿ: ಸೋಮೇಶ ಉಪ್ಪಾರ, ಮರಿಯಮ್ಮನಹಳ್ಳಿ, ಕವನದ ಶೀರ್ಷಿಕೆ:ಕೂಡಬೇಕೆಂದರೆ ಕಾರಣವೇ ಬೇಕಿಲ್ಲ….
ಕೂಡಬೇಕೆಂದರೆ ಕಾರಣವೇ ಬೇಕಿಲ್ಲ ಕಟ್ಟೆಯೊಂದಿದ್ದರೆ ಸಾಕು, ಹೃದಯದ ಭಾವನೆಗಳು, ಮನದ ಕಟ್ಟೆಯೊಡೆದು ಹೊರನುಸುಳುತ್ತಲೇ ಇರುತ್ತವೆ. ಚರಿತ್ರೆ, ವರ್ತಮಾನ, ತಲೆ ತಲಾಂತರಗಳ ಭಾವ ಬೆಸುಗೆಗಳ ಕತೆಗಳು, ಬಾಯಿಯ ತುದಿಯಲ್ಲಿಯೇ ಕುಣಿದಾಡುತ್ತಿರುತ್ತವೆ. ಕೂಡಬೇಕೆಂದರೆ ಕಾರಣವೇ ಬೇಕಿಲ್ಲ. ಕಟ್ಟೆಯೊಂದಿದ್ದರೆ ಸಾಕು. ಗಂಡಸರಾದರೆ ಯಜಮಾನಿಕೆಯ ಗತ್ತು ತಮ್ಮತ್ತು…