ರಾಜ್ಯ ಸರ್ಕಾರದ ಸ್ಫೂರ್ತಿದಾಯಕ ಕಾರ್ಯ – ಕ್ರೀಡಾಪಟುಗಳಿಗೆ ಉದ್ಯೋಗ ಭಾಗ್ಯ

ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಬೆಂಗಳೂರು, ಆ.4: ಮುಖ್ಯಮoತ್ರಿ ಸಿದ್ದರಾಮಯ್ಯ ಅವರು ಭಾನುವಾರ  ಒಂದು ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಮುನ್ನುಡಿ ಬರೆದರು.                       …

ಅನುದಿನ ಕವನ-೧೩೧೨, ಕವಿ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ, ಬೆಳಗಾವಿ ಜಿ., ಕವನದ ಶೀರ್ಷಿಕೆ: ನನ್ನೆದೆಯ ಸ್ವಗತ

ನನ್ನೆದೆಯ ಸ್ವಗತ ಎದೆಯೊಳಗೆ ಕೆಂಡದಂತ ನೋವಿದ್ದರೂ ಅದುಮಿಟ್ಟುಕೊಂಡೇ ನಗುತ್ತೇನೆ, ಮನದ ಕಾವಲಿಯಲ್ಲಿ ಮಣಗಟ್ಟಲೇ ದುಃಖವಿದ್ದರೂ ಪ್ರೀತಿ ಪ್ರವಾಹವನೇ ಹರಿಸುತ್ತೇನೆ, ಮಧ್ಯರಾತ್ರಿ ; ಎದ್ದು ಹೊರಡಬೇಕೆನ್ನುವಾಗಲೆಲ್ಲ ಬುದ್ದ ನೆನಪಾಗುತ್ತಾನೆ ಯಾರೋ ಕಿಸಕ್ಕನೇ ನಕ್ಕಂತಾಗುತ್ತದೆ, ಗಿಜಿಗಿಡುವ ಸಂತೆಯಲಿ ನಿಂತು ಯಾರೂ ಇಲ್ಲವೆಂಬಂತೆ ಹಂಬಲಿಸುತ್ತೇನೆ, ಎದೆ…

ಅನುದಿನ ಕವನ-೧೩೧೧, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ:ಬೆಂಗಳೂರಿನ‌ ಬೀದಿಯಲ್ಲಿ

ಬೆಂಗಳೂರಿನ ಬೀದಿಯಲ್ಲಿ ನಿತಾಂತ ಹೊರಟಿದ್ದೆ ಕೈಯೊಂದು ಮುಂದೆ ಬಂತು ಹತ್ತು ರೂಪಾಯಿ ಕೊಟ್ಟೆ ನೀ ಅಂದುಕೊಂಡಿದ್ದೆಲ್ಲ ಆಗಲಿ ಬದುಕಲ್ಲಿ ನೀ ಬಯಸಿದ್ದೆಲ್ಲ ಸಿಕ್ಕಲಿ ಹರಸಿತು ಒಂದು ದನಿ ನಾನು ಮನಸಾರೆ ಥ್ಯಾಂಕ್ಯೂ ಎಂದೆ ನೂರಾರು ಹೆಜ್ಜೆ ನಡೆದಿರಬೇಕು ಮತ್ತೊಂದು ಕೈ ಅಡ್ಡ…

ಅನುದಿನ‌ ಕವನ-೧೩೧೦, ಕವಿ: ಸಿದ್ದು‌ ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪ

ಅಪ್ಪ…. ಅಪ್ಪ ತನ್ನೆಲ್ಲಾ ನೋವುಗಳ ಎದೆಯೊಳು ಸುಟ್ಟುಕೊಂಡು ನಮಗೆ ಬೆಳಕಿನ ಪಂಜಂತೆ ನಿಂತವನು ಅಪ್ಪ… ಹೆಗಲ ಮೇಲೊತ್ತು ಊರ ಜಾತ್ರೆಯ ಉತ್ಸವದಲ್ಲಿ ಮುಗಿಲೆತ್ತರಕ್ಕೆ ಬೆಳೆಸಬೇಕೆಂಬ ಕನಸ ಕಂಡು ತೇರಂತೆ ಹೊತ್ತು ಮೆರೆದವನು ಅಪ್ಪ… ತನ್ನ ಬಡತನವ ಕಾಲಲ್ಲಿ ಹೊಸಕಿ ಸ್ಲೇಟು ಸೀಮೆ…

ಅನುದಿನ ಕವನ-೧೩೦೯, ಕವಿ: ಸುಮಿತ್ ಮೇತ್ರಿ, ವಿಜಯಪುರ, ಕವನದ ಶೀರ್ಷಿಕೆ:ಮೃದ್ಗಂಧ

ಮೃದ್ಗಂಧ ಹುಚ್ಚು ಕವಿಯೊಬ್ಬ ಮಳೆಗಾಲದ ಕೊನೆಯ ಮಳೆಯಲ್ಲಿ ಮಣ್ಣಾಗುವ ಹೊತ್ತು: ಸಖಿ, ಕೊನೆಯ ಬಾರಿ ನೋಡಲು ಬಂದಾಗ ಕೈಕೈ ಹಿಚುಕಿಕೊಂಡು ದೂರ ನಿಲ್ಲಬೇಡ ಮತ್ತು ಹಾಗೆ ಹೋಗಬೇಡ ಕೊನೆಯದಾಗಿ ನನ್ನ ನಿನ್ನ ಮಡಿಲಲ್ಲಿ ಇರಿಸಿಕೊಂಡು ಹಣೆಗೆ ಒಂದು ಮುತ್ತಿಡು ನೀನು ಮುತ್ತಿಟ್ಟ…

ಕನ್ನಡ ಸಾಂಸ್ಕೃತಿಕ‌ ಲೋಕಕ್ಕೆ ಕನ್ನಡ ವಿವಿ‌ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ

ಹಂಪಿ, ಆ.1:   ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾದ್ದು ಎಂದು ಕನ್ನಡ ವಿಶ್ವವಿದ್ಯಾಲಯದ   …

ಅನುದಿನ ಕವನ-೧೩೦೮, ಕವಯಿತ್ರಿ: ಮಂಜುಳಾ‌ ಹುಲ್ಲಹಳ್ಳಿ, ಚಿಕ್ಕಮಗಳೂರು, ಕವನದ ಶೀರ್ಷಿಕೆ: ಬದುಕು

ಬದುಕು… ನಿಂತ ನೀರಾದರೆ ಕೆರೆಯಾಗುತ್ತದೆ, ಕೊರೆಯಾಗುತ್ತದೆ, ಕೊಳೆಯಾಗುತ್ತದೆ, ಕಳೆ ತುಂಬುತ್ತದೆ, ಕಷ್ಟಗಳ ಬೇಗೆಗೆ ಆವಿಯಾಗಿ ಕಣ್ಮರೆಯಾಗುತ್ತದೆ. ಹರಿವ ನೀರಾದರೆ ಹಸಿರುಣಿಸುತ್ತದೆ, ಆಸರೆಯಾಗುತ್ತದೆ, ಅರಸಿ ಬಂದವರಿಗೆ ಜೊತೆ ನೀಡಿ ಪಾವನಗಂಗೆಯಾಗುತ್ತದೆ, ಇಬ್ಬನಿ ಒಡೆಯಾ ನಿನ್ನ ಸೇರಿ ಕೃತಾರ್ಥವಾಗುತ್ತದೆ -ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕಡುಬಡವರು, ಶೋಷಿತರು, ಆದಿವಾಸಿಗಳ ನಿರ್ಲಕ್ಷ್ಯ -ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್

ಬಳ್ಳಾರಿ ಜು.30: ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರಕಾರ ಉಳ್ಳವರಿಗೆ ಹೆಚ್ಚು ಆದ್ಯತೆ ನೀಡುವ ಭರದಲ್ಲಿ‌ ಕಡುಬಡವರು, ಶತಶತಮಾನಗಳಿಂದ ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿಗಳನ್ನು ನಿರ್ಲಕ್ಷಿಸಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಆರ್ಥಿಕ…

ಅನುದಿನ‌ ಕವನ-೧೩೦೭, ಕವಿ: ಸುಧನ್ ಹೊಸೂರು (ಮಧುಸೂದನ್ ಹೊಸೂರು), ಮೈಸೂರು

ನಾಲ್ಕು ಕಾಲಿನೆಸರಿನ ಉದ್ದನೆಯ ಜಡೆಗೆ ಹಿತ್ತಲ ಗಿಡದಿಂದ ಅರಳುವ ಮುನ್ನವೇ ಕಿತ್ತ ಮಲ್ಲಿಗೆಯ ಮೊಗ್ಗುಗಳ ಮದ್ಯದಲೊಂದು ಕೆಂಗುಲಾಬಿ ಹೂ ಇರಿಸಿ ಹಣೆಗೆ ಒಂದರಮೇಲೊಂದು ಬಣ್ಣದ ಬೊಟ್ಟಿಟ್ಟು ಇಸ್ತ್ರಿಮಾಡುವಾಗ ಸುಟ್ಟ ಕಾರಣಕೆ ಅಮ್ಮನ ಹಳೆ ರೇಷ್ಮ ಸೀರೆಯ ಕತ್ತರಿಸಿ ಹೋಲಿಸಿದ ಉದ್ದನೆಯ ಹೊಸಲಂಗದ…

ಅನುದಿನ ಕವನ-೧೩೦೬, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ

ಕಣ್ಣಿದ್ದೂ ಕಾಣದವರಿಗೆ ಕಾಣುವ ಕಣ್ಣ ಕೊಡಿ ಸುಖವಿದ್ದೂ ದುಃಖಿಸುವವರಿಗೆ ನಿಜ ಸುಖದ ಅರಿವು ನೀಡಿ ಹೃದಯವಿದ್ದೂ ಪ್ರೀತಿಸದವರಿಗೆ ಮಮತೆಯ ಖುಷಿಯ ಅನುಭವ ನೀಡಿ ಎಲ್ಲರಲಿ ದೋಷ ಕಾಣುವವರಿಗೆ ಸರಿ ತಪ್ಪಿನ ಭೇಧದರಿವು ಕಾಣಿಸಿ ಕೋಪವೇ ಜೀವವೆನುವವಗೆ ಪ್ರೀತಿಯ ಕಂಪು ಪಸರಿಸುವ ಹೂವಾಗಿ…