ಅನುದಿನ ಕವನ-೧೪೨೫, ಕವಿ: ಮಾಣಿಕ ನೇಳಗಿ ತಾಳಮಡಗಿ, ಬೀದರ್

ಪ್ರೀತಿ ಮಾಸದ ಕೊನೆಯಲ್ಲರಸಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ ಸಂಬಳ ಗಿಟ್ಟಿಸಿದವಳೆ ಹುಟ್ಟಿಸುವಳು ಭಯ ಭೀತಿ. ಕೋಪ ನನ್ನರಸಿಯ ಕೋಪ ದಲಿ ನಿತ್ಯ ಏಳುವೆನು ಮಿಂದು ನಯವಾಗಿ ಕರೆಯಲು ಬಿಗಿದಪ್ಪುವಳು ಬಂದು ಹಾಸ್ಯ ಮಡದಿಯ ಮಾತಿನಲಿ ತೇಲುತಿರಲು ತಿಳಿ ಹಾಸ್ಯ ವರ್ಷಗಳೂ…

ಅನುದಿನ ಕವನ-೧೪೨೪, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಅವನು ಹೀಗೆ, ಎದುರಿರುತ್ತಾನೆ ಕಣ್ತಪ್ಪಿಸಿ ಮರೆಯಾಗುತ್ತಾನೆ ಇವಳ ಬಣ್ಣ ಗುರ್ತಿಸಿ ಕರೆಯುತ್ತಿರುತ್ತಾನೆ ಕಂಗಳ ಹುಡುಕಿಸುತ್ತಾನೆ ಎದುರಾದ ವೇಳೆಗೆ ತಾನೇ ಕಳೆದು ಹೋಗುತ್ತಾನೆ ಎದೆಯ ಸ್ಥಿಮಿತ ಹತೋಟಿಗೆ ಬರದಷ್ಟು ಅವಳೇ ಎದುರು ಕೂರಿಸಿ ಈಗ ನೋಡು ನನ್ನ ಕಂಗಳೆಂದು ಬಿಸಿ ಕಾಫಿ ಹೀರಿಸುತ್ತಾಳೆ…

ಅನುದಿನ ಕವನ-೧೪೨೩, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ರೊಟ್ಟಿಯಾಗರಳಿ

ರೊಟ್ಟಿಯಾಗರಳಿ ಕುದಿವೆಸರಲಿ ಮಿಜ್ಜಿ ಮಿಜ್ಜಿ ನಾದಿ ಹದಗೊಂಡ ಹಿಟ್ಟವಳು. ಬಿಗಿ ಪಟ್ಟಿನ ತಾಳಕೆ ಹಿಗ್ಗಿ ಹಿಗ್ಗಿ  ಗುಂಡಗೆ ರೊಟ್ಟಿಯಾದವಳು. ಕಾದ್ಹೆಂಚಲಿ ಮಗ್ಗಲಾಗಿ ಮೈ ಸುಟ್ಟುಕೊಂಡವಳು. ಮಕ್ಕಳ ಹಿಡಿಗೆ ಮುಟಿಗಿಯಾಗಿ ಕರುಳ ಹಸಿವ ನೀಗಿದವಳು ತರಹೆವಾರಿ ಪದಾರ್ಥಗಳೊಡಗೂಡಿ ಒಡಲ್ಹಸಿವಿಗೆ ಆಹಾರವಾದವಳು ಕಣ್ಣಿನೊಲೆಯಲ್ಲಿ ನಿಗಿ…

ಅನುದಿನ‌ ಕವನ-೧೪೨೨, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ನನ್ನಿರುವಿಕೆ ನಾ ಮರೆತ ಸಮಯ.!

” ನನ್ನಿರುವಿಕೆ ನಾ ಮರೆತ ಸಮಯ.!” ನಾ ಹಾಡಾಗುತ್ತೇನೆ.. ನೀ ನನ್ನ ಒಲವ ಹಾಡಿಗೆ ಪ್ರೀತಿಯ ಪಲ್ಲವಿಯಾದಾಗಲೆಲ್ಲ.! ನಾ ನವಿಲಾಗುತ್ತೇನೆ… ನೀ ನನ್ನ ಮನದಿ ಕಲ್ಪನೆಯ ಕನಸಿನ ಕಣ್ಣಾದಾಗಲೆಲ್ಲ.! ನಾ ಕೋಗಿಲೆಯಾಗುತ್ತೇನೆ… ನೀ ಮಾಮರದ ಚಿಗುರಂತೆ ನಲ್ಮೆ ನೀಡಿದಾಗಲೆಲ್ಲ.! ನಾ ಜಿಂಕೆಯಾಗುತ್ತೇನೆ..…

ಅನುದಿನ ಕವನ-೧೪೨೧, ಕವಿ: ಅಸದ್(ಜಬೀವುಲ್ಲಾ ಅಸದ್), ಬೆಂಗಳೂರು, ಕವನದ ಶೀರ್ಷಿಕೆ: ಕ್ಷಮಿಸಿ ಇದು ಕವಿತೆಯಲ್ಲ!

ಕ್ಷಮಿಸಿ ಇದು ಕವಿತೆಯಲ್ಲ! ಅಲ್ಲಿ ನೋಡಿ ಅವರದೇ ವೇದಿಕೆ ಮಾತು, ಕಥೆ, ಕವಿತೆ ಗೋಷ್ಠಿ ಎಲ್ಲವೂ ಮಾನವೀಯತೆ, ಪ್ರಜಾಪ್ರಭುತ್ವ ಸಮಾನತೆ ಎಂದೆಲ್ಲ ಬೊಬ್ಬಿಡುತ್ತಾರೆ ಎಲ್ಲಾ ಕೇವಲ ದಿಖಾವ ಅಷ್ಟೇ ಬಿಡಿ, ಅವರೇ ಇರುತ್ತಾರೆ ಈಗ ಎಲ್ಲೆಡೆಯೂ ನಾವು, ನಮ್ಮವರು ನಮಗೆ ಬೇಕಾದವರಷ್ಟೇ…

ಅನುದಿನ‌ ಕವನ-೧೪೨೦, ಕವಿ: ಮಂಜು‌ ಜಿ, ಆನೇಕಲ್

ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ…! ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ…! ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ , ಎತ್ತರ… ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ , ಹತ್ತಿರ…! ಸಂತೋಷ ಏನೆಂಬುದಕ್ಕೆ…

ಅನುದಿನ ಕವನ-೧೪೧೯, ಕವಯಿತ್ರಿ: ನಂದಿನಿ‌ ಹೆದ್ದುರ್ಗ, ಕವನದ ಶೀರ್ಷಿಕೆ:(ಬಿ)ಸಾಕಬೇಕಾದ ಕವಿತೆ

(ಬಿ)ಸಾಕಬೇಕಾದ ಕವಿತೆ ಆ ಸಂಜೆ ಅಪರೂಪಕ್ಕೆ ಆದ ಭೆಟ್ಟಿಯಲ್ಲಿ ರಮಿಸಿಕೊಂಡು ಮುಗಿದ ಮೇಲೆ ಅವನ ಮನಸ್ಸು ಮತ್ತೆಲ್ಲೊ ಇದೆ ಅಂತ ಗೊತ್ತಾಯಿತು ಇನ್ನಾರದ್ದೊ ನೆನಪಲ್ಲಿ ನನ್ನ ಗಿಲ್ಲುತಿದ್ದ ಏನೋ‌ ಹದದಲ್ಲಿ ಇಲ್ಲಿ ಮೆಲ್ಲುತ್ತಿದ್ದ ತಿಳಿಯದವಳಂತೆ ತಳುಕು ನಟಿಸುವುದು ಮೊದಲಿಂದಲೂ ಸಿದ್ಧಿಸಿದ ವಿದ್ಯೆ…

ಅನುದಿನ ಕವನ-೧೪೧೮, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಅಳು-ನಗು

ಅಳು-ನಗು ಬಾಲಕನಿದ್ದಾಗ ನಾನೂ ಭೋರಾಡಿ ಅತ್ತಿದ್ದೆ ಅಂಗಡಿಯಲ್ಲಿನ ಆಟಿಕೆಗಳಿಗಾಗಿ ಜಾತ್ರೆಗಳಲ್ಲಿನ ಬಲೂನುಗಳಿಗಾಗಿ ಗೂಡಂಗಡಿಗಳಲ್ಲಿನ ಪೆಪ್ಪರ್ ಮಿಂಟ್ ಗಳಿಗಾಗಿ ರಸ್ತೆಯೂ ನಿಬ್ಬೆರಗಾಗಿ ನೋಡುವಂತೆ ಚೀರಾಡಿದ್ದೆ ಇದೀಗ………. ಅದರಂತೆಯೇ ಭೋರಾಡಿ ಅಳಬೇಕೆನಿಸುತ್ತದೆ ಬಲೂನಿನ ಗಾಳಿ ಕರಗಿಹೋದಂತೆ ಹೋದ ಅಪ್ಪನ ಪ್ರೀತಿಗಾಗಿ ಕಾಲಗರ್ಭದಲಿ ಸೇರಿದ ಪೆಪ್ಪರ್…

ಅನುದಿನ ಕವನ-೧೪೧೭, ಕವಿ: ಅಮೋಘವರ್ಷ ವಿ ಪಾಟೀಲ, ಕ್ಯಾಸನೂರು, ಹಾವೇರಿ ಜಿಲ್ಲೆ, ಕವನದ ಶೀರ್ಷಿಕೆ:ಪ್ರಶ್ನಿಸಬೇಕು, ಆದರೆ…!

ಪ್ರಶ್ನಿಸಬೇಕು, ಆದರೆ…! ಪ್ರಶ್ನಿಸಬೇಕು ಎಲ್ಲಾ ಒಳಿತು-ಕೆಡುಕುಗಳನ್ನೂ ಬಂದ, ಸ್ವೀಕಾರ ಮಾಡಿದ/ ಮಾಡದೆಯಿರುವ ಸ್ಥಿತಿಗಳನ್ನು ಪ್ರಶ್ನಿಸಬೇಕು; ಹಿತವೆನಿಸಿದ, ಅನಿಸದೇಯಿರುವ ಅಂಶಗಳನ್ನೂ ಇದ್ದಂತೆ ತಲೆಯಾಡಿಸಿಯೇ ಹೋದರೆ, ಒಪ್ಪಿಕೊಂಡ ಬಗೆಯೂ ಅಹಿತಕರ ಎಂದೊಮ್ಮೆಯಾದರೂ ಅನಿಸೇ ಅನಿಸುವುದು… ಕ್ರಾಂತಿಗಳುಂಟಾಗಿದ್ದು ಇದೇ ಕಾರಣಕ್ಕಾಗಿಯೇ, ಸ್ವಾತಂತ್ರ್ಯ ಸಿಕ್ಕಿದ ಗಳಿಗೆಯನ್ನು ಮರೆಯಲಾಗುವುದೇ…

ಅನುದಿನ ಕವನ-೧೪೧೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್

ಗಜಲ್ ಮನವೇಕೊ ದುಗುಡದಿ ಮುಳುಗಿ ಸೊರಗುತಿದೆ ಅವನಿಗಾಗಿ ತನುವೇಕೊ ಮುದುಡಿ ಮೂಲೆಗೆ ಒರಗುತಿದೆ ಅವನಿಗಾಗಿ ಪ್ರಾಣಪಕ್ಷಿ ದೇಹವನು ಬಿಡುವುದೊಂದೆ ಬಾಕಿ ಉಳಿಯಿತೇಕೆ ಅನುರಾಗ ತೊರೆದು ಹೃದಯವಿದು ಮರುಗುತಿದೆ ಅವನಿಗಾಗಿ ಚಣಮಾತ್ರವೂ ಅಗಲಿರದೆ ಕಳೆದಿರುವ ದಿನಗಳು ಲೆಕ್ಕಕ್ಕಿಲ್ಲ ವಿನಾಕಾರಣ ಜೀವ ಒಂಟಿಯಾಗಿ ತಿರುಗುತಿದೆ…