ಅನುದಿನ ಕವನ-೧೪೧೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್

ಗಜಲ್ ಮನವೇಕೊ ದುಗುಡದಿ ಮುಳುಗಿ ಸೊರಗುತಿದೆ ಅವನಿಗಾಗಿ ತನುವೇಕೊ ಮುದುಡಿ ಮೂಲೆಗೆ ಒರಗುತಿದೆ ಅವನಿಗಾಗಿ ಪ್ರಾಣಪಕ್ಷಿ ದೇಹವನು ಬಿಡುವುದೊಂದೆ ಬಾಕಿ ಉಳಿಯಿತೇಕೆ ಅನುರಾಗ ತೊರೆದು ಹೃದಯವಿದು ಮರುಗುತಿದೆ ಅವನಿಗಾಗಿ ಚಣಮಾತ್ರವೂ ಅಗಲಿರದೆ ಕಳೆದಿರುವ ದಿನಗಳು ಲೆಕ್ಕಕ್ಕಿಲ್ಲ ವಿನಾಕಾರಣ ಜೀವ ಒಂಟಿಯಾಗಿ ತಿರುಗುತಿದೆ…

ಅನುದಿನ ಕವನ-೧೪೧೫, ಕವಿ: ವಿಜಯಭಾಸ್ಕರ ಎಂ, ಸೇಡಂ, ಕವನದ ಶೀರ್ಷಿಕೆ: ಪದ್ಯ

ಪದ್ಯ ಪದ್ಯ ಅಷ್ಟು ಅಲುಗಾಡಿಸಿ ಬಿಡುತ್ತದೆಯೇ.? ಅವನ‌ ದರ್ಭಾರಿನ ಅಂಗರಕ್ಷನಿಗೂ ಅವನ ಪುಂಕಾನುಪುಂಕ ಭಾಷಣ ಸಾಕಾಗಿದೆ. ದೆಹಲಿಯ ಗದ್ದುಗೆಯ ಗೋಡೆಯ ನಡುವೆ ಸಣ್ಣ ಬಿರುಕು ಹುಟ್ಟಿದೆ, ಆದರೂ ಸುರಕ್ಷಿತವೆಂಬ ಪದಗಳಿಗೇನು ಕಡಿಮೆ‌ ಇಲ್ಲ. ನಾನು ಪದ್ಯ ಬರೆಯುತ್ತೇನೆ ಅವನ ಹಾಡಿಹೊಗಳಿಕ್ಕಲ್ಲ ಬದಲಿಗೆ…

ಅನುದಿನ‌ ಕವನ-೧೪೧೪, ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಹೀಗೇ ಒಮ್ಮೊಮ್ಮೆ……

ಹೀಗೇ ಒಮ್ಮೊಮ್ಮೆ…… ಹೀಗೇ ಒಮ್ಮೊಮ್ಮೆ…. ಎಲ್ಲೋ ಸುತ್ತಾಡಿ ಏನೋ ಹುಡುಕಾಡಿ ಒಂಟಿ ಗುಡ್ಡದ ನೆತ್ತಿ ಏರಿ ನೆಟ್ಟನೆ ಕಾಲೂರಿ ಹಾಸಿ ಹರಡಿದ ನೀಲ ಮುಗಿಲ ನೋಡಿ ಮುಗಿಲೆ ನಿನಗಿಲ್ವೆ ಯೋಚನೆಯ ಕಾಡಾಟ ಎಲ್ಲಿ ಸಿಕ್ತು ಈ ನಿರಾಳತೆ ಎಂದು ಕೇಳುವಾಸೆ ಹೀಗೇ…

ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ  -ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ

ಬೆಂಗಳೂರು, ನ. 14: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ಬಣ್ಣಿಸಿದರು. ಅವರು ಗುರುವಾರ ವಿಧಾನಸೌಧದ ಪೂರ್ವ ದಿಕ್ಕಿನ ಬಳಿ ಮಾಜಿ ಪ್ರಧಾನ ಮಂತ್ರಿಗಳಾದ‌‌ ದಿವಂಗತ…

ಅನುದಿನ ಕವನ-೧೪೧೦, ಕವಿ: ಟಿ.ಪಿ.ಉಮೇಶ್ ಹೊಳಲ್ಕೆರೆ, ಕವನದ ಶೀರ್ಷಿಕೆ: ಕೆನ್ನೆಯ ಮೊಡವೆಗಳು ಕವಿತೆಗೆ ರೂಪಕಗಳು!

ಕೆನ್ನೆಯ ಮೊಡವೆಗಳು ಕವಿತೆಗೆ ರೂಪಕಗಳು! ಬರೆದ ಪತ್ರಗಳನ್ನೆಲ್ಲ ಹರಿಯಬಹುದು; ಕೊಟ್ಟ ಮಾತುಗಳನ್ನೆಲ್ಲ ಮರೆಯಬಹುದು; ಮನದಲ್ಲಿ ನಿಂತಿರುವ ಭಾವನೆಗಳ ಹರಿಯಲಾದೀತೆ? ನಿನ್ನೆಡೆಗಿನ ನನ್ನ ಒಲವನ್ನಿಡಿದು ಮುರಿಯಲಾದೀತೆ? ಈ ನನ್ನೆದೆಯ ಹಾಡುಗಳ ಹೂಳಲಾದೀತೆ? ನಿನ್ನೆಸರ ಜಪಿಸುವ ಹೃದಯಕಂಪನ ತಡೆಯಲಾದೀತೆ? ನಿನ್ನ ಮದರಂಗಿ ಪಾದಗಳ ಹೆಜ್ಜೆ…

ಅನುದಿನ ಕವನ-೧೪೦೯, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಪ್ರೀತಿ ಅಂದರೆ ಮತ್ತೇನಿಲ್ಲ

ಪ್ರೀತಿ ಅಂದರೆ ಮತ್ತೇನಿಲ್ಲ ಪ್ರೀತಿ ಅಂದರೆ ಮತ್ತೇನಿಲ್ಲ ಸ್ವಾತಂತ್ರ ಕಳೆದುಕೊಳ್ಳುವುದು ಬಯಲಲ್ಲಿ ಅವಳ ಜೊತೆ ಸೇರಿ ಆಲಯವಾಗುವುದು ಪ್ರೀತಿ ಆಂದರೆ ಮತ್ತೇನಿಲ್ಲ ನಾನು ಆವಿಯಾಗಿ ಆಕಾಶದೊಳಗೆ ಲೀನವಾಗುವುದು ಕಡಲೊಳಗೆ ಬೆರೆತ ಹನಿಯಾಗುವುದು ಪ್ರೀತಿ ಅಂದರೆ ಮತ್ತೇನಿಲ್ಲ ನಾನು ಕೆಳಗಿಳಿಯುವುದು ಅವಳ ಜೊತೆ…

ಅನುದಿನ ಕವನ-೧೪೦೮, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಭೃಂಗದ ಭ್ರಮರಕ್ಕೇನು ಅರ್ಥ ಹೂವಿನ ಮಕರಂದವಿಲ್ಲದಿರಲು ಮಧುವಿನ ಮಧುರ ಗಾನಕ್ಕೇನು ಅರ್ಥ ಪುಷ್ಪಗಳಲಿ ಮಾಧುರ್ಯವಿರದಿರಲು ಹೂವಿನ ಅಂದಕ್ಕೇನು ಅರ್ಥ ಪತಂಗವ ಆಕರ್ಷಿಸದಿರಲು ಮನುಜನ ಜೀವನಕ್ಕೇನು ಅರ್ಥ ಪ್ರೀತಿಯೆಂಬ ರಸವಿಲ್ಲದಿರಲು ಉಲಿವ ಹಕ್ಕಿಗಳ ಚಿಲಿಪಿಲಿಗೇನು ಅರ್ಥ ಆಲಿಸುವ ಕಿವಿಗಳಿರದಿರಲು ಆಡುವ ಮಾತಿಗೇನುಂಟು ಅರ್ಥ…

ಅನುದಿನ‌ ಕವನ-೧೪೦೭, ಕವಯಿತ್ರಿ: ರಜನಿ ಅಶೋಕ ಜೀರಗ್ಯಾಳ, ಗೋಕಾಕ

ಗುಡಿ ಕಟ್ಟಿ ಪೂಜೆಯಮಾಡಿ ಏನು ಸಾಧಿಸಿದೆ ಅಣ್ಣ ಹಸಿದ ಹೊಟ್ಟೆ ಅಳುತಲಿದೆ ಒಂದು ಚೂರು ಕೂಳು ಹಾಕಿ ಪುಣ್ಯ ಕಟ್ಟಿ ಕೊಳ್ಳಣ್ಣ ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ ಪರಿಹಾರ ಹುಡುಕಣ್ಣ ಕೆಲಸವಿಲ್ಲದೆ ಬೀದಿಗೆ ಬಿದ್ದವರಿಗೆ ಕೆಲಸ ಕೊಡಿಸಬೇಕಣ್ಣ ರಸ್ತೆಯೆಲ್ಲ ಹಳ್ಳಕೊಳ್ಳಗಳಾಗಿವೆ ದುರಸ್ತಿ ಮಾಡಿಸಣ್ಣ…

ಅನುದಿನ ಕವನ-೧೪೦೬, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಉಸಿರಿನ ಅಲೆಗಳು ಮೌನವಾಗುವುದರೊಳಗೆ ಕಡಲನು ಅರಿಯಬೇಕಿದೆ ಸಮಯದ ಮುಳ್ಳಿನ ಗತಿ ನಿಲ್ಲುವುದರೊಳಗೆ ಕಾಲವನು ತಿಳಿಯಬೇಕಿದೆ ಸುತ್ತೆಲ್ಲ ಹಸಿರಿದ್ದರೂ ಬಿಸಿಗಾಳಿಯ ಹೊದ್ದ ಮರುಭೂಮಿಯಾಗಿದೆ ಮನ ಅಲೆಯುವ ಕಾಲುಗಳು ಕುಸಿಯುವುದರೊಳಗೆ ನಿಜ ಬದುಕನು ನೋಡಬೇಕಿದೆ ಆಗಸದ ತುಂಬೆಲ್ಲ ಒಣಮಾತು ಅಹಮಿಕೆಯ ಬಂಜೆ ಮೋಡಗಳ…

ಅನುದಿನ ಕವನ-೧೪೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ‌ಕವನದ ಶೀರ್ಷಿಕೆ:ಗಂಡಸರಾದ ನಮಗೆ…

ಗಂಡಸರಾದ ನಮಗೆ… ಅವಳ ನೋವ ಕುರಿತು ಹೇಳುವುದು ಎರಡು ಸಾಲಿನ ಪದ್ಯ ಗೀಚಿದಷ್ಟು ಸುಲಭವಲ್ಲ… ಪ್ರತಿ ತಿಂಗಳು ಋತುಸ್ರಾವದಿ ಅವಳು ಅನುಭವಿಸುವ ನರಕ ಸದೃಶ ನೋವು ಗಂಡಸರಾದ ನಮಗೆ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ… ಆಗಾ ಅವಳಿಗೆ ವಿಶ್ರಾಂತಿ ಬೇಕು ಸಾಂತ್ವನಬೇಕು ಹಾರೈಕೆ…