ಅನುದಿನ‌ ಕವನ-೧೪೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಕನ್ನಡವೆಂದರೆ….

ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…

ಅಲೆಮಾರಿ ಕಲಾವಿದ ಅಶ್ವರಾಮಣ್ಣಗೆ ರಾಜ್ಯೋತ್ಸವ ಪ್ರಶಸ್ತಿ ಗರಿ:ಅಲೆಮಾರಿ ಕಲಾವಿದರು ಮತ್ತು ಸೋದರತ್ತೆ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರಿಗೆ ಅರ್ಪಣೆ

ಬಳ್ಳಾರಿ, ಅ.31: ಅಲೆಮಾರಿ ಹಗಲುವೇಷ ಹಿರಿಯ ಕಲಾವಿದ ಹಳೇ ದರೋಜಿ ಅಶ್ವ ರಾಮಣ್ಣ ಅವರಿಗೆ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಆರೇಳು ವರ್ಷದಲ್ಲೇ ಬಣ್ಣ ಹಚ್ಚಲು ಆರಂಭಿಸಿದ ರಾಮಣ್ಣ ತಮ್ಮ ಅರವತ್ತೆಂಟನೇ ಹರೆಯದಲ್ಲೂ ಹಗಲುವೇಷ ಹಾಕುವಾಗ‌ ಮಗುವಾಗುತ್ತಾರೆ. ತಮ್ಮ ತಂದೆ ತಾತಾ…

ಅನುದಿನ ಕವನ-೧೪೦೦, ರಾಷ್ಟ್ರಕವಿ ಡಾ.‌ಜಿ ಎಸ್ ಶಿವರುದ್ರಪ್ಪ, ಕವನದ ಶೀರ್ಷಿಕೆ: ನನ್ನ ಹಣತೆ

🪔ದೀಪಾವಳಿ ಹಬ್ಬದ ಶುಭಾಶಯಗಳು🪔 ನನ್ನ ಹಣತೆ ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ…

ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಣೆ: ರಾಷ್ಟ್ರದ ಸಮಗ್ರತೆ, ಐಕ್ಯತೆಗಾಗಿ ಹೋರಾಡಿದ ಧೀಮಂತ ಸರ್ದಾರ್ ವಲ್ಲಭಭಾಯ್ ಪಟೇಲ್ -ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ

ಶಂಕರ ಘಟ್ಟ (ಶಿವಮೊಗ್ಗ), ಅ.31: ಸ್ವತಂತ್ರ ಭಾರತದ ಪ್ರಪ್ರಥಮ ಉಪ ಪ್ರಧಾನಮಂತ್ರಿ, ಗೃಹ ಸಚಿವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ರಾಷ್ಟ್ರದ ಸಮಗ್ರತೆಗಾಗಿ, ಐಕ್ಯತೆಗಾಗಿ ಮತ್ತು ಭದ್ರತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್…

ಅನುದಿನ‌ ಕವನ-೧೩೯೯, ಕವಯಿತ್ರಿ:ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಆಗಿನ್ನೂ ಹಚ್ಚಿದ ಹಣತೆ

ಆಗಿನ್ನೂ ಹಚ್ಚಿದ ಹಣತೆ ಬಯಲ ಅಂಚಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತಿದ್ದ ಅವಳು ಗ್ರಾಮ ದೇವಿಯಂತೆ ಕಂಡಳು ಊರ ಜನರ ಕಣ್ಣಿಗೆ ಘಾಸಿಯಾಗಿ ಚುರುಗುಡುತ್ತಿತ್ತು ಅವಳ ಬೆನ್ನ ಮೇಲಿನ ಗಾಯ ಬೀಸುವ ಗಾಳಿಗೆ ತಗುಲಿ ಅವಳ ಅಸ್ಪೃಶ್ಯ ಬೆರಳುಗಳು ಬೆವರಿ ನಡುಗುತ್ತಿದ್ದವು…

ಅನುದಿನ ಕವನ-೧೩೯೮, ಕವಯಿತ್ರಿ: ಡಾ.‌ಕೃಷ್ಣವೇಣಿ ಆರ್‌ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಹುಡುಕಾಟದ ಹೆಜ್ಜೆ

ಹುಡುಕಾಟದ ಹೆಜ್ಜೆ ಸಾಗುತಿದೆ ಸತ್ಕಾರದ ಹಾರ ಸಾವಧಾನದ ಹೆಜ್ಜೆ ಗುರುತನ್ನು ಆದರೂ ಸಿಗುತ್ತಿಲ್ಲ ಸಹಾಯದ ಕಲ್ಲು… ಪ್ರತಿ ಹಾದಿಯ ಸರಕಿನೊಳು ಸಿಗುತಿದೆ ವ್ಯಂಗ್ಯದ ತುಪಾಕಿ ಬಿಡದೆ ಹುಡುಕಿದೆ ಲೇಖನಿಯ ಶಹೀದು…. ಋಣದ ತಡವಡಿಕೆ ಎದೆಯನು ಚುಚ್ಚಿ ಚಡಪಡಿಸುತಿದೆ.. ಕಾಡಿನ ಕನವರಿಕೆಯಲಿ ಕಾವ್ಯದ…

ಅನುದಿನ ಕವನ-೧೩೯೭, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು

ನಿನ್ನ ನೋಡುತ ನನ್ನನೇ ಮರೆಯಬಯಸುವ ಕಡುಮೋಹಿ ನಾ. ನಿನ್ನ ಬಾಹುಬಂಧನದಿ ಸೆರೆಸಿಕ್ಕು ನನ್ನನೇ ಮರೆಯಬಯುಸುವ ಕಡುಮೋಹಿ ನಾ. ನಿನ್ನ ಪ್ರೀತಿಯಲಿ ಜಗ ಮರೆತು ನಿನ್ನದೇ ಜಗವಾಗಬಯಸುವ ಕಡುಮೋಹಿ ನಾ. ನಿನ್ನ ಲಾಲಿಸುತ ನಿನ್ನ ಮುದ್ದಿಸುತ ನಿನಗೆ ನಾ ಮಗುವಾಗಿ ನನಗೆ ನೀ…

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು, ಅ.28: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡಲು ಏಕಸದಸ್ಯ ಆಯೋಗ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. ಸಭೆಯ ಬಳಿಕ ಕಾನೂನು ಸಚಿವ ಎಚ್. ಕೆ. ಪಾಟೀಲ್ ಅವರು ಸಚಿವ ಸಂಪುಟ…

ಅನುದಿನ ಕವನ-೧೩೯೬, ಕವಿ: ಪ್ರಕಾಶ ಕೋನಾಪುರ ಶಿವಮೊಗ್ಗ, ಕವನದ ಶೀರ್ಷಿಕೆ: ಅವಳ ಕೈಗಳೆಂದೂ ಸೋಲುವುದೇ ಇಲ್ಲ

ಅವಳ ಕೈಗಳೆಂದೂ ಸೋಲುವುದೇ ಇಲ್ಲ ಅವಳ ಕೈಗಳೆಂದೂ ಸೋಲುವುದೇ ಇಲ್ಲ ಉಸಿರಿರುವರೆಗೆ ಮಾಡಲು ಮನೆಗೆಲಸ ಅಡಿಗೆಯ ಮಾಡಿ ಊಟಕೆ ಬಡಿಸುವ ಕೈಗಳೆಂದೂ ಸೋಲುವುದೇ ಇಲ್ಲ ಪ್ರತಿ ತಿಂಗಳು ಮುಟ್ಟಾದೊಡೆ ಮೂರು ದಿನ ಹೊರಗೆ ಕೂರಲಾದೀತೆ? ಅಡಿಗೆ ಮನೆಗೆ ಮೂರು ದಿನ ರಜೆ…

ಅನುದಿನ ಕವನ-೧೩೯೫, ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ದುಃಖಿತರು

ದುಃಖಿತರು ದುಃಖಿತರು ನಾವು ನಮ್ಮದಲ್ಲದ ಕಾರಣಕ್ಕೆ ಸಿಕ್ಕಿದ್ದಕ್ಕೆ ಮತ್ತು ಸಿಗಲಾರದ್ದಕ್ಕೆ ನಕ್ಕಿದ್ದಕ್ಕೆ ಮತ್ತು ನಗಲಾರದ್ದಕ್ಕೆ ದಕ್ಕಿದ್ದಕ್ಕೆ ಮತ್ತು ದಕ್ಕಲಾರದ್ದಕ್ಕೆ ದುಃಖಿತರು ನಾವು ನಮ್ಮದಲ್ಲದ ಕಾರಣಕ್ಕೆ ನೋಡಿದ್ದಕ್ಕೆ ಮತ್ತು ನೋಡದುದಕ್ಕೆ ನೆನೆದದ್ದಕ್ಕೆ ಮತ್ತು ನೆನೆಯಲಾರದ್ದಕ್ಕೆ ಮರೆತದ್ದಕ್ಕೆ ಮತ್ತು ಮರೆಯಲಾರದ್ದಕ್ಕೆ ದುಃಖಿತರು ನಾವು ನಮ್ಮದಲ್ಲದ…